Skip to content Skip to footer

ಪರಂಪರೆಯ ಪಥದಲ್ಲಿ

ಪರಮಾರ್ಥದ ಪಯಣ...

Full Video on youtube

ಮದುವೆಯಾಗಲು ಗಂಡು - ಹೆಣ್ಣಿಗೆ ಮೊದಲ ಹೊಂದಾಣಿಕೆ ಯಾವುದಾಗಬೇಕು ?

In Hindu tradition, Lord Ganesha, Lord Shiva, and Lord Hanuman are widely believed to grant swift blessings to sincere devotees. Lord Ganesha is worshipped first to remove all obstacles, while Lord Shiva is known as Ashutosh, meaning one who is easily pleased by pure devotion.

Audio Clips

Text Version

ಶ್ರೀ ಗುರುಭ್ಯೋ ನಮಃ ಹರಿಃ ಓಂ. ಇವತ್ತಿನ ಸಂಚಿಕೆಯಲ್ಲಿ ಗಂಡು ಹೆಣ್ಣಿನ ಜಾತಕದ ಸಾಲಾವಳಿ ಅಥವಾ ಹೊಂದಾಣಿಕೆಯನ್ನು ನೋಡೋಣ. ಈ ವಿಚಾರವಾಗಿ ಒಂದು ವಿಚಾರ ವಿನಿಮಯವನ್ನು ಮಾಡಿಕೊಳ್ಳೋಣ. ನನ್ನ ಬಳಿ ಸುಮಾರು ಜನ ಬರ್ತಾರೆ. ಗಂಡು ಹೆಣ್ಣಿನ ಜಾತಕ ತೋರಿಸಲಿಕ್ಕೆ. ಹೆಣ್ಣು ಕಡೆಯವರು ಬರ್ತಾರೆ, ಕೇಳ್ತಾರೆ. ನಮ್ಮ ಹುಡುಗಿಗೆ ಯಾವ ಯಾವ ನಕ್ಷತ್ರದ ಗಂಡುಗಳು ಸೆಟ್ ಆಗುತ್ತೆ ಅಂತ ಒಂದು ಲಿಸ್ಟ್ ಕೊಟ್ಟುಬಿಡಿ ಅಂತ. ಬರ್ತಾರೆ, ನಮ್ಮ ಹುಡುಗನಿಗೆ ಯಾವ ಯಾವ ನಕ್ಷತ್ರದ ಹುಡುಗಿಗೆ ಚೆನ್ನಾಗಿ ಹೊಂದಿ ಬರುತ್ತೆ ಒಂದು ಲಿಸ್ಟ್ ಕೊಟ್ಟುಬಿಡಿ. ಇದು ಪಾಪ ಅವರು ಕೇಳೋದು ಏನಂತ ಅಂದ್ರೆ ಅವರೇ ನೋಡ್ಕೊಂಡು ಬಿಟ್ಟು ಆಮೇಲೆ ನಮ್ಮ ಹತ್ತಿರ ಬರೋಣ ಅಂತಾನೂ ಇರಬಹುದು ಅಥವಾ ನಾವೇ ನೋಡ್ಕೊಂಡು ಮದುವೆನೂ ಮಾಡಿಬಿಡಬಹುದು ಅಂತಾನೂ ಇರಬಹುದೇನೋ ನನಗೆ ಗೊತ್ತಿಲ್ಲ. ಆದರೆ ವಾಸ್ತವಿಕವಾಗಿ ಜಾತಕದ ಹೊಂದಾಣಿಕೆ ಹೇಗೆ ಮಾಡಬೇಕು ಅಂದ್ರೆ ಬರಿ ನಕ್ಷತ್ರ ಆಧಾರಿತವಾಗಿ ಮಾಡತಕ್ಕಂತದ್ದು ನೂರಕ್ಕೆ ಐದು ಪ್ರತಿಶತ ಫಲವನ್ನು ಕೊಡುತ್ತೆ. ಅಂದ್ರೆ ಹುಡುಗಿದು ರೋಹಿಣಿ ನಕ್ಷತ್ರ, ಹುಡುಗಂದು ಮೂಲಾ ನಕ್ಷತ್ರ, ಹೆಂಗ್ ಆಗಿ ಬರುತ್ತೆ? ಅಥವಾ ಹುಡುಗಿಯ ಹೆಸರು ಅಶ್ವಿನಿ ಅಂತ, ಹುಡುಗನ ಹೆಸರು ರಮೇಶ ಅಂತ, ಇವರಿಬ್ಬರಿಗೂ ಹೆಂಗಾಗಿ ಬರುತ್ತೆ? ಇದು ಬಹಳ, ಬಹಳ, ಬಹಳ, ಬಹಳ ಕೆಳಮಟ್ಟದ ಹೊಂದಾಣಿಕೆ, ಕೆಳಮಟ್ಟದ ಹೊಂದಾಣಿಕೆ ಆಗಿ ಹೋಗುತ್ತೆ. ಗಂಡು ಹೆಣ್ಣು ಸುಖವಾಗಿ ಸಂತೋಷದಿಂದ ಇರಲಿಕ್ಕೆ ಅಸಾಧ್ಯ. ಆದ್ದರಿಂದ ಇಂತಹ ಗಂಡಿಗೆ ಇಂತಹ ನಕ್ಷತ್ರದ ಹುಡುಗನೇ ಆಗ್ತಾನೆ ಅಥವಾ ಇಂತಹ ಹುಡುಗನಿಗೆ ಇಂತಹ ನಕ್ಷತ್ರದ ಹುಡುಗಿಯೇ ಆಗುತ್ತೆ ಅಂತಕ್ಕಂತದ್ದು ಶಾಸ್ತ್ರದಲ್ಲಿ ನಿಯಾಮಕ ಇಲ್ಲ. ಯಾಕೆ ಅಂದ್ರೆ ನೂರಕ್ಕೆ ಐದು ಪ್ರತಿಶತ ಅಷ್ಟೇ ಇದು ಫಲವನ್ನು ಕೊಡುತ್ತೆ ಅಂತಕ್ಕಂತದ್ದನ್ನ ದಯವಿಟ್ಟು ನೀವೆಲ್ಲರೂ ಮನಗಾಣಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಮದುವೆಯಾದ ನಂತರ ವಿಚ್ಛೇದನದ ಡಿವೋರ್ಸ್ ರೇಟ್ ಜಾಸ್ತಿ ಆಗಿಬಿಟ್ಟಿದೆ. ಅದಕ್ಕೆ ಮನಸ್ಸಿನ ಪರಿಸ್ಥಿತಿಯೂ ಕಾರಣ. ಮನೋಜಯಂತು ಮಾಂಡವ್ಯಂ ಅಂತ ಹೇಳೋದು. ಮೊದಲನೇ ಹೊಂದಾಣಿಕೆ ಯಾವುದಾಗಬೇಕು ಗಂಡು ಹೆಣ್ಣಿಗೆ ಅಂತಂದ್ರೆ, ಇವಳು ನನ್ನ ಶ್ರೀಮತಿ ಅಂತಲೂ, ಆ ಹುಡುಗಿಗೆ ಇವನು ನನ್ನ ಶ್ರೀಮಾನ್ ಅಂತಕ್ಕಂತಹ ವಿಚ್ಛಿತ್ತಿ ಇಲ್ಲದೆ ಇರತಕ್ಕಂತಹ ಪ್ರೀತಿ, ವಿಶ್ವಾಸ, ಅನುರಾಗ, ಬೆಸುಗೆ ಇರಬೇಕು. ಆನಂತರದಲ್ಲಿ ಜಾತಕದ ಹೊಂದಾಣಿಕೆ. ಮಾಡ್ಕೋತೀನಿ ಹುಡುಗನ್ನ ಅಂತಲೂ, ಈ ಹುಡುಗನ್ನ ನಾನು ಮದುವೆ ಆಗ್ತೀನಿ, ವರಿಸ್ತೀನಿ ಅಂತಕ್ಕಂತದ್ದು ಹುಡುಗ, ಹುಡುಗಿಗೆ ಒಳಗಿಂದ, ಮನಸ್ಸಿನ ಒಳಗಿಂದ ಬರಬೇಕು. ಎಬ್ ಆಫ್ ದಿ ಹಾರ್ಟ್ ಅಂತೀವಲ್ಲ, ಅಲ್ಲಿಂದ ಬರಬೇಕು. ಅಂತರಾಳದಿಂದ ಬರಬೇಕು. ಆನಂತರದಲ್ಲಿ ಜಾತಕದ ಹೊಂದಾಣಿಕೆ ಹೇಗೆ ಮಾಡಬೇಕು ಅಂತಂದ್ರೆ ಅತ್ಯದ್ಭುತವಾಗಿರತಕ್ಕಂತಹ ಒಂದು ವಿಧಿಯನ್ನು ನಮ್ಮ ಮಹರ್ಷಿಗಳು ಹೇಳಿಕೊಟ್ಟಿದ್ದಾರೆ. ಈಗ ಸುಮಾರು ಜನರ ಮನೆಯಲ್ಲಿ ನೋಡಿ, ಈ ಹುಡುಗಿನ ಮದುವೆಯಾದ ನಮ್ಮ ಹುಡುಗ ಏನ್ರೀ ಬೆಳೆದ ಬೆಳೆದ ಅದಕ್ಕಪಕ್ಳು ಲಕ್ಷ್ಮಿ ತರ ಬಂದ್ಲು ಅವರ ಮನೆಗೆ ಆ ಹುಡುಗಿ ಅಂತ. ಇನ್ನೊಬ್ಬರು ಕೆಲವರು ಹೇಳ್ತಾರೆ, ಮಾಡ್ಕೊಂಡ್ವಿ ಆ ಹುಡುಗಿನ, ನಮ್ಮ ಮೊಮ್ಮಗನಿಗೆ ಮನೆನೇ ಹಾಳಾಗೋಯ್ತ್ರಿ ಅಂತ ಹೇಳ್ತಾರೆ. ಇದು ಯಾಕಾಗುತ್ತೆ ಅಂತಂದ್ರೆ, ಅಂದ್ರೆ ಆ ಹುಡುಗಿ ಯಾರ ಮನೆ ಆದರೂ ಮನೆ ಹಾಳಾಗುತ್ತೇನೋ? ಸಾಧ್ಯ ಇಲ್ಲ. ಇಲ್ಲಿ ಪ್ರತಿಯೊಂದು ಜಾತಕದಲ್ಲೂ ಏನಾಗುತ್ತೆ ಅಂತಂದ್ರೆ, ಭಾಗ್ಯೋದಯವನ್ನು ಉಂಟು ಮಾಡತಕ್ಕಂತಹ ಒಂದು ಗ್ರಹವು, ನೂರಕ್ಕೆ ನೂರು ಭಾಗ್ಯೋದಯವನ್ನು ಉಂಟು ಮಾಡತಕ್ಕಂತಹ ಒಂದು ಗ್ರಹ, ಐವತ್ತು ಪ್ರತಿಶತ ಅಥವಾ ಅರವತ್ತು ಪ್ರತಿಶತ ಭಾಗ್ಯಾೋದಯವನ್ನು ಮಾಡತಕ್ಕಂತಹ ಒಂದು ಗ್ರಹ, ಒಂದು ಇಪ್ಪತ್ತು ಪ್ರತಿಶತ ಭಾಗ್ಯೋದಯವನ್ನು ಉಂಟು ಮಾಡತಕ್ಕಂತಹ ಗ್ರಹವು ಮತ್ತು ನೆಗಟಿವ್, ಮೈನಸ್ ನಲ್ಲಿ ಋಣಾತ್ಮಕವಾಗಿ ಮೈನಸ್ ನೂರು ಭಾಗ್ಯವನ್ನು ಹಾಳು ಮಾಡತಕ್ಕಂತಹ ಒಂದು ಗ್ರಹ ಅನ್ನೋದು ಇರುತ್ತೆ. ಎರಡು ಉತ್ತಮವಾದ, ಎರಡು ಅಧಮ, ಅಂದ್ರೆ ಎರಡು ಒಳ್ಳೆಯ ಫಲ, ಎರಡು ಕೆಟ್ಟ ಫಲವನ್ನು ಕೊಡತಕ್ಕಂತಹ ಗ್ರಹ ಅಂತ ಇರುತ್ತೆ. ಕೆಲವೊಮ್ಮೆ ಈ ಎರಡರಲ್ಲೇ ಒಂದು ಯಾವುದಾದರೂ ಈ ಕಡೆಗೂ ಬಂದು ಹೋಗುತ್ತೆ. ಮೂರರಿಂದ ನಾಲ್ಕು ಗ್ರಹಗಳು ಇರುತ್ತೆ. ಅದನ್ನ ನಾವು ಗಣಿತ ಮಾಡಿ ನೋಡಬೇಕು. ಹುಡುಗಿಯ ಜಾತಕದಲ್ಲೂ, ಹುಡುಗನ ಜಾತಕದಲ್ಲೂ. ಆ ತರ ಭಾಗ್ಯವನ್ನು ಒದಗಿಸ್ತಕ್ಕಂತಹ ನಕ್ಷತ್ರದ ಅಥವಾ ಯೋಗದ ಆ ಭಾಗ್ಯಾಧಿಪತಿ ಅಂದ್ರೆ ನೀನು ಒಂಬತ್ತನೇ ಮನೆಯವನು ಅಂತ ಅಲ್ಲ. ರಾಜ್ಯಾಧಿಪತಿ ಹತ್ತನೇ ಮನೆ ಅಂತ ಅಲ್ಲವೇ ಅಲ್ಲ. ಆ ನಿಟ್ಟಿನಲ್ಲಿ ಹೇಳ್ತಾ ಇಲ್ಲ. ಆ ತರದ ಗ್ರಹದ ಲಗ್ನದಲ್ಲಿ ಹುಟ್ಟಿದ ಹುಡುಗನನ್ನು ಮದುವೆಯಾಗತಕ್ಕಂತದ್ದು, ಇದು ಐವತ್ತು ಪ್ರತಿಶತ ಹೊಂದಿಕೆ. ಹುಡುಗನ ಈ ಭಾಗ್ಯವನ್ನು ಕೊಡತಕ್ಕಂತಹ ಗ್ರಹದ ಕಾರಕತ್ವ ಅಂದಿರ್ತಕ್ಕಂತಹ ಲಗ್ನದಲ್ಲಿ ಹುಟ್ಟಿರತಕ್ಕಂತ ಹುಡುಗಿ ಇವಳೇ ಆಗಿದ್ದರೆ ನೂರು ಪ್ರತಿಶತ ಅದು ಉಂಟಾಗುತ್ತೆ. ಹಾಗೆ ಏನಾಗುತ್ತೆ ಅಂದ್ರೆ ಅದ್ಭುತವಾದ ರಾಜಯೋಗ ಅವರಿಬ್ಬರಿಗೂ. ಅವರಿಬ್ಬರು ಮದುವೆ ಆದ್ರೂ ಅಂತಂದ್ರೆ ಅವರ ಜೀವನದಲ್ಲಿ ಇನ್ನ ಅವರನ್ನ ಯಾರು ಹಿಡಿಯೋರೇ ಇಲ್ಲ. ಹಣದಲ್ಲಿ ಆಗಿರಬಹುದು, ಕಾಸಲ್ಲಿ ಆಗಿರಬಹುದು, ಮಕ್ಳು ಮರಿ ಆಗಿರಬಹುದು, ಹೆಸರು, ಪ್ರತಿಷ್ಠೆ, ಕೀರ್ತಿ ಎಲ್ಲವೂ ಕೂಡ ತಂತಾನೇ, ತಂತಾನೇ, ತಂತಾನೇ ಒದಗಿಕೊಂಡು ಬಂದು ಹೋಗುತ್ತದೆ.