Skip to content Skip to footer

ಪರಂಪರೆಯ ಪಥದಲ್ಲಿ

ಪರಮಾರ್ಥದ ಪಯಣ...

Full Video on youtube

ವರಸಿದ್ಧಿವಿನಾಯಕ ಸ್ವಾಮಿಯ ವ್ರತದ ಮಹತ್ವ, ವಿಧಾನ ಏನು ?

In Hindu tradition, Lord Ganesha, Lord Shiva, and Lord Hanuman are widely believed to grant swift blessings to sincere devotees. Lord Ganesha is worshipped first to remove all obstacles, while Lord Shiva is known as Ashutosh, meaning one who is easily pleased by pure devotion.

Short Videos

Audio Clips

Text Version

ಶ್ರೀ ಗುರುಭ್ಯೋ ನಮಃ ಭವ ಸಂಚಿತ ಪಾಪೋಘ ವಿದ್ವಂಸಕ ವಿಲಕ್ಷಣಂ ವಿಜ್ಞಾನ್ಧಕಾರ ಭಾಸ್ವಂತಂ ವಿಘ್ನರಾಜಮಹಂ ಭಜೆ ಏಕದಂತಂ ಶೂರ್ಪಕರ್ಣಂ ಗಜವಕ್ತ್ರಂ ಚತುರ್ಭುಜಂ ಪಾಶಾಂಕುಶಧರಂ ದೇವಂ ಧ್ಯಾಯೇತ್ ಸಿದ್ಧಿ ವಿನಾಯಕಂ ಭಾದ್ರಪದ ಮಾಸದ ಚತುರ್ಥಿಯ ದಿವಸ ವರಸಿದ್ಧಿ ವಿನಾಯಕತನ ದೊಡ್ಡದಾಗಿರತಕ್ಕಂತಹ ಒಂದು ಹಬ್ಬ ಇಡೀ ಭರತಖಂಡದಲ್ಲಿ ವರಸಿದ್ದಿ ವಿನಾಯಕನ ಪೂಜೆ ನಡೆಯದೆ ಇರತಕ್ಕಂತಹ ಸ್ಥಳವಿಲ್ಲ ಅಂತ ಹೇಳಬಹುದು. ಈ ಶ್ರೇಯಸ್ಸು ಸುಮಾರು ಜನ ರಾಜಕೀಯ ಮುಚ್ಚುದ್ದಿಗಳಿಗೆ ತಲುಪಬೇಕು. ವಿಶಿಷ್ಟವಾಗಿ ಮಹಾರಾಷ್ಟ್ರದಿಂದ ಪ್ರಚಲಿತವಾಗಿರತಕ್ಕಂತದ್ದು ಇದೆ ನಡೀತಾ ಇತ್ತು ನಡೆದಿಲ್ಲ ಅಂತ ಹೇಳಲಿಲ್ಲ. ಆದರೆ ಹೆಚ್ಚು ಪ್ರಚಾರ ಪಡೆದಿದ್ದು ಮಹಾರಾಷ್ಟ್ರದಿಂದ ಹೊಮ್ಮಿ ಇದು ಏನಾಯ್ತು ಇಡೀ ಭರತಖಂಡದಲ್ಲಿ ಆವರಿಸಿತು. ಅದಕ್ಕಿಂತ ಮುಂಚಿತವಾಗಿಯೂ ಕೂಡ ಪ್ರತಿಯೊಂದು ಮನೆಯಲ್ಲಿಯೂ ಕೂಡ ಈ ವರಸಿದ್ದಿ ವಿನಾಯಕ ಸ್ವಾಮಿಯ ವ್ರತವನ್ನು ಆರಾಧನೆಯನ್ನು ಮಾಡಿಕೊಂಡು ಬಂದಿರತಕ್ಕಂತದ್ದು ಅನಾದಿ ಕಾಲದಿಂದಲೂ ಕೂಡ ಇದೆ. ಪ್ರಚಾರ ಪಡೆದಿದ್ದು. ಸ್ವತಂತ್ರಕ್ಕಾಗಿ ಹೋರಾಡುತ್ತಾ ಇದ್ದಾಗ ಜನರನ್ನು ಒಗ್ಗಟ್ಟು ಮಾಡಲಿಕ್ಕೆ ಇದನ್ನು ಅಸ್ತ್ರವಾಗಿ ಬಳಸಿಕೊಂಡಿದ್ದು ಬಹಳ ನಾವು ಖುಷಿಯನ್ನು ಪಡಬೇಕಾಗಿರತಕ್ಕಂತಹ ಒಂದು ವಿಚಾರವಾಗಿದೆ. ವರಸಿದ್ದಿ ವಿನಾಯಕ ಸ್ವಾಮಿ ಹೆಸರೇ ಹೇಳುವ ಹಾಗೆ ಅತ್ಯಂತ ಶ್ರೇಷ್ಠವಾದ ಸಿದ್ದಿಯನ್ನು ಕೊಡ್ತಕ್ಕಂತಹ ವಿನಾಯಕ ಗಣಪತಿ ಗಣೇಶ ಅಂತ ಹೇಳಿ ಹೆಸರು. ಇನ್ನೊಂದು ಅರ್ಥದಲ್ಲಿ ಈ ಇಡೀ ಪ್ರಪಂಚ ಆಗಿರ್ತಕ್ಕಂತದ್ದು. 25 ತತ್ವಗಳಿಂದ ಆಗಿರುತ್ತೆ. ವರ ಅನ್ನೋದಕ್ಕೆ ಏನು ಹೇಳುತ್ತೆ ಕಾದಿನವ ಟಾದಿನವ ಸೂತ್ರದಂತೆ 24 ಸಂಖ್ಯೆಯನ್ನು ತೋರ್ಸುತ್ತೆ ಸೂಚಿಸುತ್ತೆ ಕೂಡ. ಈ 24 ತರದ ತತ್ವಗಳಿಂದ ಉಂಟಾಗ್ತಕ್ಕಂತಹ ಏನೇನು ಸಿದ್ಧಿಗಳಿದೆ. ಅಷ್ಟನ್ನು ಕೊಡ್ತಕ್ಕಂತಹ ಆ ದೇವರು ಯಾರು ಅಂದ್ರೆ 24 ಸಿದ್ದಿಯನ್ನು ಕೊಡ್ತಕ್ಕಂತಹ ವಿನಾಯಕ ಅಂದ್ರೆ ವರಸಿದ್ದಿ ವಿನಾಯಕ ಅಂತ ಕೂಡ ಕೆಲವರು ಅರ್ಥೈಸುತ್ತಾರೆ. ಅದರಲ್ಲಿ ಪಂಚಭೂತಗಳು, ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಪ್ರಾಣಗಳು ಮತ್ತು ಮನೋಬುದ್ಧಿ ಅಹಂಕಾರ ಚಿತ್ತ ಅಂತಕ್ಕಂತದ್ದು ನಾಲ್ಕು ಸೇರಿದರೆ 24 ಆಯ್ತು. ಇದರ ಹೊರತಾಗಿ ಸೃಷ್ಟಿಯಲ್ಲಿ ಹಿಂದೆ ಮುಂದೆ ಈಗ ಏನು ಇಲ್ಲ. ಇದರ ಸಮೂಹಕ್ಕೆ ಸೃಷ್ಟಿ ಅಂತ ಹೆಸರು. ಆ ಸೃಷ್ಟಿಯ ಮೂಲಾಂಕರ ಪ್ರಥಮ ಪ್ರಾದುರ್ಭಾವ ಅಥವಾ ಇನ್ಸೆಪ್ಷನ್ ಅಂತ ಹೇಳ್ತೀವಿ. ಅಲ್ಲಿಂದ ಶುರುವಾಗಿದ್ದು ಗಣಪತಿಯ ಒಂದು ಪೂಜೆ ಅಂತ ಅರ್ಥ. ಅದರಿಂದ ನಾವು ಜೀವನವನ್ನು ನಾವು ಬೆಳೆಸಿಕೊಂಡು ಬೆಳಗಿಸಿಕೊಂಡು ಬರ್ತೇವೆ ಎನ್ನುವುದು. ಈ ಅರ್ಥದಲ್ಲಿ ಏನು ಹೇಳ್ತಾರೆ ಮಹಾಗಣಪತಿ ವಿಘ್ನ ನಿವಾರಕ ಅಂತ ಹೇಳ್ತಾರೆ. ಅಂದ್ರೆ ಬೆಳವಣಿಗೆಗಾಗಿ ಸಿದ್ದಿಗಾಗಿ ಬರತಕ್ಕಂತಹ ಅಂತರಾಯಗಳು, ತೊಂದರೆಗಳು, ತಾಪತ್ರಯಗಳನ್ನು ಹರಿಸತಕ್ಕಂತಹವನು ಗಣಪತಿ ಅಂತ. ಯಾಕೆಂದರೆ ಅವನು ಬೀಜಾಂಕುರ ರೂಪದವನು ಅವನೊಂದು ಸೀಡ್ ಅದನ್ನು ಉತ್ತು ಬಿತ್ತು ಆನಂತರದಲ್ಲಿ ಬೆಳೆದು ಅದು ಫಲಪುಷ್ಪಭರಿತವಾಗಿ ಮತ್ತು ಪಲ್ಲವ ಎಲೆಭರಿತವಾಗಿ ನಿಮಗೆ ಏನಾಗುತ್ತೆ ಗಾಳಿಯನ್ನು ನೆರಳನ್ನು ಕೊಟ್ಟು ಅಂತ್ಯದಲ್ಲಿ ನಿಮಗೆ ಮೋಕ್ಷ ಫಲವನ್ನು ಕೊಡ್ತಕ್ಕಂತದ್ದಾಗುತ್ತೆ ಅಂತ ವರಸಿದ್ದಿನಾಯಕ ಸ್ವಾಮಿಯ ವ್ರತದ ದೊಡ್ಡ ದೊಡ್ಡದಾಗಿರತಕ್ಕಂತ ಒಂದು ಪ್ರಭಾವ ಮತ್ತು ಮಹಿಮೆ. ಬರೀ ವಿಘ್ನ ಹೊರಟು ಹೋಗುತ್ತೆ, ಬರೀ ವಿದ್ಯೆ ಕೊಡ್ತಾನೆ ಅಂತಕ್ಕಂತದ್ದು ಅಲ್ಲ. ವರಸಿದ್ದಿ ವಿನಾಯಕ ಸ್ವಾಮಿ ನಿಮಗೆ ಚಿಕ್ಕದಾಗಿರತಕ್ಕಂತಹ ಒಂದು ಎಲ್ಕೆಜಿ ಯುಕೆಜಿ ಇರತಕ್ಕಂತಹ ಮಗುವಿನ ವಿದ್ಯೆಯಿಂದ ಹಿಡಿದು ಆ ಮಗು ಚೆನ್ನಾಗಿ ಬೆಳೆದು ವಿದ್ಯಾವಂತನಾಗಿ, ಯಶಸ್ವಂತನಾಗಿ, ಕೀರ್ತಿವಂತನಾಗಿ, ಉದ್ಯೋಗವಂತನಾಗಿ, ಗೃಹಸ್ಥನಾಗಿ, ತಂದೆಯಾಗಿ, ತಾತ ಆಗಿ, ಮುತ್ತಾತ ಆಗಿ, ಮನೆಯನ್ನು ಕಟ್ಟಿ ಎಲ್ಲವನ್ನು ಸಂಪಾದನೆ ಮಾಡಿ 100, 120 ವರ್ಷ ಆದ ದೇಹಪಾತವಾದ ನಂತರದಲ್ಲಿ ಆ ಮೋಕ್ಷಗಾಮಿ ಆಗ್ತಕ್ಕಂತಹ ಒಂದು ವಿಘ್ನ ಅದು ಏನಿದೆ ಅದಕ್ಕೆ ಅಷ್ಟು. ಅದನ್ನು ಕೂಡ ನಿವಾರಿಸತಕ್ಕಂತಹ ಪರಮಾದ್ಭುತವಾದಂತಹ ಶಕ್ತಿವಂತನಾಗಿರತಕ್ಕಂತಹ ದೇವರು ಯಾರು ಅಂದ್ರೆ ಶ್ರೀಮನ್ ವರಸಿದ್ದಿ ವಿನಾಯಕ ಸ್ವಾಮಿ. ಈ ಮಣ್ಣಿನ ಗಣಪತಿಯನ್ನು ಮಾಡಿಕೊಂಡು ಅದನ್ನು ನೀರಿಗೆ ಬಿಡುವ ಪರಮಾರ್ಥ ಏನು ಅಂತ ಹೇಳಿ ನೋಡಿದಾಗ ಅವರು ಹೇಳಿದ್ದು. ಬಹಳ ಯೋಗಿಗಳು ಅವರು. ಗಣಪತಿಯ ಮೂಲವಾಗಿರತಕ್ಕಂತಹ ಸ್ಥಾನ ನಮ್ಮ ಮೂಲಾಧಾರ ಚಕ್ರದಲ್ಲಿ ಇರುತ್ತೆ. ಮೂಲ ಅದರ ಗೋಜಿಗೆ ಹೆಚ್ಚು ಹೋಗೋದಿಲ್ಲ, ಬರೀ ಇಷ್ಟಕ್ಕೆ ಸೀಮಿತ ಮಾಡುತ್ತೇವೆ. ಆ ಮೂಲಾಧಾರ ಚಕ್ರಕ್ಕೆ ಪೃಥ್ವಿ ತತ್ವದ ಚಕ್ರ ಅಂತ ಹೇಳ್ತಾರೆ. ಪೃಥ್ವಿ ಅಂದ್ರೆ ಏನು? ಮಣ್ಣು, ಕಲ್ಲು. ಅದರಿಂದ ಮಾಡಿರತಕ್ಕಂತಹ ಗಣಪತಿಯನ್ನು ನೀರಿಗೆ ಹಾಕೋದರ ಪರಮಾರ್ಥ ಏನು ಅಂತಂದ್ರೆ ಮೂಲಾಧಾರದಿಂದ ಆ ಕುಂಡಲಿನಿ ಶಕ್ತಿಯನ್ನು ಸರ್ಪೆಂಟ್ ಫೈರ್ ಅನ್ನು ಎಬ್ಬಿಸಿ ಎರಡನೇ ಚಕ್ರವಾದ ಸ್ವಾಧಿಷ್ಠಾನ ಚಕ್ರ ಇದೆಯಲ್ಲ ಅದು ಜಲಮಯವಾದ ಚಕ್ರ. ಆ ಕುಂಡಲಿ ಉತ್ಥಾನವನ್ನು ಮಾಡದಂತಹ ನಾನು ಯೋಗಾಭ್ಯಾಸವನ್ನು ಮಾಡಿ ಅಲ್ಲಿಗೆ ನನ್ನ ಕುಂಡಲಿನಿ ಶಕ್ತಿಯನ್ನು ಬ್ರಹ್ಮಗ್ರಂಥಿಯನ್ನು ಭೇದಿಸಿ ತಂದು ನಾನು ಸ್ವಾಧಿಷ್ಠಾನದಲ್ಲಿ ನಾನು ಅಲ್ಲಿ ಇಡ್ತಾ ಇದ್ದೇನೆ ಅಂತ ಆ ಎಬ್ಬಿಸೋದಕ್ಕೆ ಸಾಕಷ್ಟು ತೊಂದರೆ ಇರುತ್ತೆ. ಅದನ್ನು ಹರಿಸತಕ್ಕಂತಹವನು ವರಸಿದ್ದಿ ವಿನಾಯಕ ಅದನ್ನು. ದೂರ ಮಾಡತಕ್ಕಂತವನು ಹೋಗಲಾಡಿಸ್ತಕ್ಕಂತವನು ವರಿಸಿದ್ದಿ ವಿನಾಯಕ ಸ್ವಾಮಿ. ಇದು ಯೋಗಿಕವಾದ ಅರ್ಥ. ಅದು ಒಳಗೆ ನಡೀಬೇಕಾಗಿರತಕ್ಕಂತಹ ಪ್ರಕ್ರಿಯೆ. ಆದ್ದರಿಂದ ಮಣ್ಣಿನ ಗಣಪತಿ ಒಂದು ಸತಿ ತಂದು ಮನೆಯಲ್ಲಿ ಇಟ್ಟುಕೊಂಡು ಪ್ರತಿವರ್ಷ ನಿಮ್ಮ ಭಾವನೆಗಾಗಿ ಅದನ್ನ ಇಡಿ. ಅದನ್ನ ತೆಗೆದುಕೊಂಡು ಹೋಗಿ ನೀರಲ್ಲಿ ಹಾಕಬಹುದು. ಕೆರೆ ಕುಂಟೆಗಳಲ್ಲಿ ಹಾಕೋದು, ನದಿಯಲ್ಲಿ ವಿಸರ್ಜನೆ ಮಾಡ್ತಕ್ಕಂತದ್ದು, ಬಕೆಟ್ನಲ್ಲಿ ಕರಿಸಿ ಮತ್ತೆ ತೆಗೆದು ಗಿಡಮರಕ್ಕೆ ಹಾಕ್ತಕ್ಕಂತದ್ದು, ಇವೆಲ್ಲವೂ ಕೂಡ ಅತ್ಯಂತ ಬಾಲಿಶವಾಗಿರತಕ್ಕಂತಹ ಪದ್ಧತಿ ಆಗುತ್ತೆ. ಕೆಂಪು ಬಣ್ಣದ ಗಣಪತಿ ಅಂತ ಹೇಳುತ್ತೆ. ಬರೀ ಮಣ್ಣಲ್ಲಿ ಮಾಡಿರೋದಕ್ಕೆ ಕೆಂಪು ಗಂಧವನ್ನು ಹಚ್ಚಬೇಕು. ರಕ್ತ ಗಂಧಾನುಲಿಪ್ತಾಂಗಂ ರಕ್ತ ಪುಷ್ಪೈಹಿ ಸುಪೂಜಿತಂ ಅಂತ. ರಕ್ತ ಗಂಧವನ್ನು ಪೂಸಿಕೊಂಡು ಅವನು ಹೇಳುತ್ತೆ ತಪ್ತಕಾಂಚನ ಸನ್ನಿಭಂ. ಸುಟ್ಟಿರುವ ಕೆಂಪಾಗಿ ಸುಟ್ಟಿರುವ ಬಂಗಾರದ ವರ್ಣ ಇರ್ತಾನೆ ಅಂತ ಹೇಳಿದೆ ಬಿಟ್ರೆ. ಬಣ್ಣ ಬಣ್ಣವಾಗಿ ಮೆತ್ತಿಕೊಂಡಿರುವವನು ಅಲ್ಲ ಪ್ರಸಿದ್ಧ ವಿನಾಯಕ ಸ್ವಾಮಿ ಇದನ್ನು ದಯವಿಟ್ಟು ಮನಸ್ಸಿನಲ್ಲಿ ಇಳಿಸಿಕೊಳ್ಳಿ ನಮ್ಮ ಪ್ರಕೃತಿಯನ್ನು ರಕ್ಷಣೆ ಮಾಡಿ ಶಾಸ್ತ್ರದಲ್ಲಿ ಹೇಳಿಲ್ಲ ಇದು ಯಾವುದೋ ಒಂದು ಬದಲಿರ್ತಕ್ಕಂತಹ ಮಧ್ಯದಲ್ಲಿ ನುಣಿಸಿಲಿಕೊಂಡು ಬಂದಿರ್ತಕ್ಕಂತಹ ತಪ್ಪು ಪದ್ಧತಿ ನಾನು ಹೇಳಿದ್ನಲ್ಲ ಭಾರತದ ಏಕೀಕರಣಕ್ಕಾಗಿ ದೊಡ್ಡದಾಗಿ ಗಣಪತಿಯನ್ನಿಟ್ಟು ಮಾಡಿದಾಗ ಇದು ಬಂದು ಧುಮುಕ್ತು ಅಂತ ನನಗೆ ಅನ್ಸುತ್ತೆ. ನನ್ನ ವೈಯಕ್ತಿಕವಾದ ಭಾವನೆ ನಾನು ತಪ್ಪಿದ್ದರೂ ಇರಬಹುದು. ಅದು ತಪ್ಪಿದ್ದರೆ ಅದಕ್ಕೆ ನನಗೆ ಕ್ಷಮೆನೂ ಇರಲಿ. ಅದಕ್ಕೆ ಮುಂಚೆನೂ ಮಾಡಿರಬಹುದೇನೋ ಯಾರಾದ್ರೂ ನನಗೆ ಗೊತ್ತಿಲ್ಲ. ನನಗೆ ತಿಳುವಳಿಕೆ ಇರುವ ಮಟ್ಟಕ್ಕೆ ಈ ತರ ಆಗಿದೆ ಅಂತ ಅಂದುಕೊಂಡಿದ್ದೆ. ಆದ್ದರಿಂದ ಆ ಭಾವನೆಗಾಗಿ ಗಣಪತಿಯನ್ನು ಎಷ್ಟೆತ್ತರ ಬೇಕಾದರೂ ಮನೆಯಲ್ಲಿ ಇಟ್ಟುಕೊಳ್ಳಿ. ವಿಸರ್ಜನೆ ಮಾಡುವ ಅವಶ್ಯಕತೆ ಶಾಸ್ತ್ರದಲ್ಲಿ ಹೇಳಿಲ್ಲ. ವಿಧಿ ಇದೆ, ಅದಕ್ಕೆ ಮಂತ್ರ ಇದೆ. ದಾನ ಮಾಡಬೇಕು ಅನ್ನೋದಕ್ಕೆ ಹೋಗಿ ನೋಡಿ ಇದೆ. ದಾನ ಮಾಡದೆ ಇದ್ದರೆ ವರಸಿದ್ದಿ ವಿನಾಯಕ ಸ್ವಾಮಿಯ ಪೂಜಾ ಫಲ ನಿಮಗೆ ಒಂದು. ನಯಾ ಪೈಸೆ ಎಷ್ಟು ದಕ್ಕೋದಿ ಇದು? ಬಂಗಾರದಲ್ಲೋ, ಬೆಳ್ಳಿಯಲ್ಲೋ, ಪಂಚಲೋಹದಲ್ಲೋ, ತಾಮ್ರದಲ್ಲೋ, ಹಿತ್ತಾಳೆಯಲ್ಲೋ ಗಣಪತಿ ಇಷ್ಟು ಇಡಿ ಗಣಪತಿ. ವರಸಿದ್ದಿ ವಿನಾಯಕನನ್ನು ಇಷ್ಟೇ ಇಷ್ಟು ಇಡಿ. ಆ ವರಸಿದ್ದಿ ವಿನಾಯಕನನ್ನು ಪ್ರತಿಷ್ಠಾಪನೆ ಮಾಡಿ ಅದಕ್ಕೆ ಪ್ರಾಣ ಪ್ರತಿಷ್ಠಾಪನೆಯನ್ನು ಮಾಡಿ ಪೂಜೆಯನ್ನು ಮಾಡಬೇಕು. ಪೂಜೆಯಾದ ನಂತರದಲ್ಲಿ ಅದನ್ನೇನು ಮಾಡಬೇಕು ಉಪಾಯನ ದಾನವನ್ನು ಕೊಡಬೇಕು. ಉಪಾಯನ ದಾನ ಹಿಂದಿನ ಸಂಚಿಕೆಗಳಲ್ಲಿ ವರಮಹಾಲಕ್ಷ್ಮಿ ಮತ್ತು ಸ್ವರ್ಣಗೌರಿ ಸಂಚಿಕೆಯಲ್ಲಿ ಹೇಳಿದ್ದೀನಿ ಆ ರೀತಿಯಾಗಿ ಉಪಾಯನ ದಾನವನ್ನು ಮಾಡಿ ಈ ವಿಗ್ರಹವನ್ನು ಯಾರು ಮತ್ತೆ ತಪಸ್ಸಂಪನ್ನರಾಗಿದ್ದಾರೋ ಜ್ಞಾನಸಂಪನ್ನರಾಗಿದ್ದಾರೋ ಅವರಿಗೆ ದಾನನ ಕೊಡಬೇಕು. ನಿಮಗೆ ಇಷ್ಟ ಬಂದವರು ಮನೆ ಹತ್ತಿರ ಇರೋವರು ಆ ರೀತಿ ಎಲ್ಲ ನೀವು ಮಾಡಲಿಕ್ಕೆ ಬರೋದಿಲ್ಲ. ಅದೇನು ಹೇಳುತ್ತೆ ಅದನ್ನ ಕೈಯಲ್ಲಿ ಇಟ್ಕೊಂಡು ಗಣಪತಿಯನ್ನು ಕೊಡಬೇಕಾದರೆ ಫಲತಾಂಬೂರಭರಿತವಾಗಿರತಕ್ಕಂತಹ ತಟ್ಟೆಯಲ್ಲಿ ನೀವು ಪೂಜೆ ಮಾಡಿದ ಗಣಪತಿಯನ್ನು ದಾನ ಕೊಡಬೇಕಾದರೆ ಏನು ಹೇಳುತ್ತೆ ಅಂದ್ರೆ ಗಣೇಶಃ ಪ್ರತಿಗೃಹ್ನಾತು ಗಣೇಶೋ ವೈದ್ಯದಾಯಚ ಗಣೇಶಸ್ತಾರಕೋಪಾಭ್ಯಾಂ ಗಣೇಶಾಯ ನಮೋ ನಮಃ ಅಂತ ಒಂದು ಶ್ಲೋಕವನ್ನು ಹೇಳಿ ಕೊಡಬೇಕು ಆ ದಾನ ಅರ್ಥ ಏನು ಅಂದ್ರೆ ಈ ಪೂಜೆ ಮಾಡಿದಂತಹ ವರಸಿದ್ದಿ ವಿನಾಯಕನ ಈ ವಿಗ್ರಹವನ್ನು ಕೊಡುವವನು ಯಾರು ಪೂಜೆ ಮಾಡಿ ದಾನಿ ಇದ್ದಾನಲ್ಲ, ಯಾರು ಪೂಜಕನಾಗಿದ್ದನೋ, ಯಾರು ದಾನ ಕೊಡ್ತಾ ಇದ್ದಾನೋ ಅವನು ಯಾರಿದ್ದಾನೆ ಅಲ್ಲ, ಅವನು ಕೂಡ ಗಣಪತಿಯಾಗಿದ್ದಾನೆ. ಯಾರು ದಧಾತಿ ಯಾರು ಕೊಡ್ತಾ ಇದ್ದಾನೋ, ಆದ್ದರಿಂದ ಆ ಗಣಪತಿಯು ನಮ್ಮಿಬ್ಬರನ್ನು ಉದ್ದಾರ ಮಾಡ್ಲಿ ಅಂತ ಹೇಳಿ ಈ ಒಂದು ಶ್ಲೋಕದ ಅರ್ಥ. ಇಲ್ಲಿ ಬರೀ ಬಾಯಿಯಲ್ಲಿ ಗಣೇಶ ಪ್ರತಿರ್ಣಾತು ಗಣೇಶೋ ವೈದ್ಯದಾಯಜ ಗಣೇಶ ಸ್ತಾರಕೋಪಾಭ್ಯಾಂ ಗಣೇಶಾಯ ನಮೋ ನಮಃ ಅಂತ ಹೇಳುವುದರಿಂದ ಬಂದಂತಹ ಪುರುಷಾರ್ಥಕ ಏನು? ಆದ್ದರಿಂದ ಗಣಪತಿಯ ಮಣ್ಣಿನ ವಿಗ್ರಹವನ್ನು ತಂದು ಅದನ್ನು ಪೂಜೆ ಮಾಡಿ ನೀರಿಗೆ ವಿಸರ್ಜನೆ ಮಾಡತಕ್ಕಂತಹ ಪದ್ಧತಿಯನ್ನು ಈ ಕ್ಷಣದಿಂದ ನಾವೆಲ್ಲ ನಿಲ್ಲಿಸಬೇಕು. ಎರಡನೆಯದು ನಮ್ಮ ಶಕ್ತಿಯಾನುಸಾರ ಗಣಪತಿ. ಒಂದು ಇಂಚು ಗಣಪತಿ ತೆಗೆದುಕೊಳ್ಳಿ ಬೆಳ್ಳಿದು. ಕೋಟ್ಯಾಂತರ ರೂಪಾಯಿ ಆಗೋದಿಲ್ಲ. ವರ್ಷದಲ್ಲಿ ಒಮ್ಮೆ ನೀವು ಮಾಡಿ ನೋಡಿ ಎರಡು ಮೂರು ವರ್ಷ ಮಾಡಿ ನೋಡಿ ನಿಮ್ಮ ಜೀವನದಲ್ಲಿ ಇರತಕ್ಕಂತಹ ತೊಂದರೆ ತಾಪತ್ರೆಗಳು ವಿಘ್ನಗಳು ತಾಂತಾನೆ ಹೋಗಿ ನಿಮ್ಮ ಜೀವನದಲ್ಲಿ ಸುಭಿಕ್ಷಾ ಮತ್ತು ಕಾರ್ಯಸಿದ್ದಿ ಉಂಟಾಗೋದು ಶತಸಿದ್ಧ. ಇಷ್ಟು ಇದರ ಮೀಮಾನಸೆ. ಗಣಪತಿಗೆ ಪೂಜೆ ಮಾಡಬೇಕಾದರೆ ಏನು ಮಾಡಬೇಕು? ಬಹಳ ಮುಖ್ಯವಾಗಿರತಕ್ಕಂತದ್ದು 21 ರೀತಿಯ ಹೂವುಗಳು, 21 ರೀತಿಯ ಪತ್ರೆಗಳನ್ನು, 21 ಎಳೆಯ ಗೆಜ್ಜೆ ವಸ್ತ್ರವನ್ನು, 21 ಮೋದಕಗಳನ್ನು ಅಥವಾ ಕಡಬನ್ನು, ಕರಿಗಡಬನ್ನು ನೈವೇದ್ಯ ಮಾಡಲೇಬೇಕು. ಅಷ್ಟನ್ನು ಹೊಂದಿಸ್ತಕ್ಕಂತಹ ಒಂದು ಪ್ರಯತ್ನವನ್ನು ಮಾಡಿ. 20 ಸಿಗಲಿಲ್ಲ, 21 ಸಿಗಲಿಲ್ಲ, 18 ಸಿಕ್ತು ನಡೆಯುತ್ತೆ. ಬೇರೆ ಹೂ ಹಾಕಿ ಅದರ ಬದಲು. ಆದರೆ ಒಂದೇ ಹೂವನ್ನು ಇಟ್ಟುಕೊಂಡು ಎಲ್ಲಾದಕ್ಕೂ ಮಲ್ಲಿಕಾಪುಷಂ ಸಮರ್ಪಯಾಮಿ, ಸೇವಂತಿಕಾಪುಷಂ ಸಮರ್ಪಯಾಮಿ. ದೇವರ ಎದುರು ಕೂತು ಸುಳ್ಳು ಹೇಳಿದಂಗೆ ಆಗ್ಲಿಲ್ವೇ? ಅವನು ಎಲ್ಲಾ ಫಲವನ್ನು ನಮಗೆ ಕೊಡಬೇಕು, ಕೇಳಿದ್ದೆಲ್ಲಾ ಕೊಡಬೇಕು ಗಣಪತಿ. ಅವಾಗ ಏನು ಮಾಡ್ತಾನೆ ಗಣಪತಿ, ನೀವು ಒಂದೇ ಹೂವನ್ನು 21 ಹೂವು ಹೆಸರು ಹೇಳಿ ಹಾಕಿದ್ರೆ ಅವನು ಕೇಳಿದ್ದು ಒಂದನ್ನೇ ಕೊಡ್ತಾನೆ, 21 ಕೊಡುವುದಿಲ್ಲ. ಮಾಚಿಪತ್ರಂ ಸಮರ್ಪಯಾಮಿ, ಬಿಲ್ಲಪತ್ರಂ ಸಮರ್ಪಯಾಮಿ, ಕೇತಕಿ ಪುಷ್ಪಂ ಸಮರ್ಪಯಾಮಿ, ಚಂಬಕ ಪುಷ್ಪಂ ಸಮರ್ಪಯಾಮಿ, 21 ಪತ್ರಗಳ ಹೆಸರು ಹೇಳೋದು. ಪತ್ರನೇ ಹಾಕೋದಿಲ್ಲ. ಹೇಗೆ ಬರುತ್ತೆ ಹೊಲಿತಾನೆ ಗಣಪತಿ ಹೊಲಿಯಬೇಕು ಅಂತ ಅಂದರೆ ಆಗೋದಿಲ್ಲ. ಅಡುಗೆ ಮಾಡಬೇಕಾದರೆ ಏನು ಮಾಡಿ ವಿಧವಿಧವಾದ ಪದಾರ್ಥಗಳು ಸೇರಿ ಅಡುಗೆ ಆಗುತ್ತೆ ತಾನೆ ಹಿಂದಿನ ಸಂಚಿಕೆಯಲ್ಲಿ ಹೇಳಿದ ರೀತಿಯಲ್ಲಿ. ಸಾರು ಮಾಡಬೇಕು ಅಂತ ಅಂದ್ರೆ ಬರೀ ನೀರು ಹಾಕಿಬಿಟ್ಟು ಅದಕ್ಕೊಂದು ಬೇಳೆ ಒಂದು ಹಾಕಿಬಿಟ್ಟು ಅದನ್ನೇ ಕುದಿಸಿಬಿಟ್ಟು ಅದನ್ನೇ ಸಾರು ಅದನ್ನೇ ಹುಳಿ ಅದನ್ನೇ ಪಾಯಸ ಅದನ್ನೇ ಚಿತ್ರಾನ್ನ ಅದನ್ನೇ ಗೊಜ್ಜು. ತಿಂದಿದೀವಾ ನಾವು ಒಪ್ತೀವಾ ಮನೆಯಲ್ಲಿ ರಾದ್ಧಾಂತ ಮಾಡಿ ಗಲಾಟೆ ಮಾಡಿಬಿಡ್ತೀವಿ. ಇನ್ನು ಗಣಪತಿಯನ್ನು ಒಲಿಸಿಕೊಳ್ಳಬೇಕು ಅಂತ ಹೊರಟಿರತಕ್ಕಂತ ನಾವುಗಳು ಏನು ಮಾಡಬೇಕು ಅಂದ್ರೆ ಆ ವ್ರತ ಕಲ್ಪದಲ್ಲಿ ಹೇಳಿರತಕ್ಕಂತಹ ಅಷ್ಟನ್ನು ನಾವು ಮಾಡಿದಾಗ ಮಾತ್ರ ವರಸಿದ್ದುನಾಯಕ ಸ್ವಾಮಿ ಅನುಗ್ರಹ ನಮಗೆ ಆಗುತ್ತೆ ಬಿಟ್ಟರೆ ಇಲ್ಲದೆ ಇದ್ದರೆ ಇದು ಅಕ್ಕಪಕ್ಕದ ಮನೆಯವರು ನೋಡಲಿ ಅಂತಲೋ. ಅಥವಾ ಸುಮ್ನೆ ನಮಗೊಂದು ತೃಪ್ತಿ ಏನೋ ಒಂದು ಮಾಡ್ಬಿಟ್ಟಪ್ಪ ಸದ್ಯ ಮಾಡ್ಬಿಟ್ಟಲ್ಲ ವರಸಿದ್ದಿನಾಯಕ ಸ್ವಾಮಿ ವ್ರತ ಅಂತ ಅನ್ನಿಸಿಕೊಳ್ಳೋಣ. ಆದ್ದರಿಂದ ಪ್ರಯತ್ನಶೀಲರಾಗೋಣ ನಾವೆಲ್ಲರೂ ಕೂಡ 21 ಬಗೆಯ ಹೂವನ್ನು ಸಂಪಾದನೆ ಮಾಡೋಣ. ಎರಡೆರಡು ಮೂರು ಮೂರು ಹೂ ಸಿಕ್ಕರೂ ಸಾಕು. 21 ಪತ್ರೆಯನ್ನು ಸಂಪಾದನೆ ಮಾಡೋಣ. 21 ಕನಿಷ್ಠ ಕಡಬನ್ನು ನಾವು ಸಂಪಾದನೆ ಮಾಡೋಣ. ಮನೆಯಲ್ಲೇ ಮಾಡೋಣ ಅಂಗಡಿಯಿಂದ ತರಬಾರದು ಅದು ತಪ್ಪು ಅದು ಮೈಲಿಗೆ ಯಾಕೆ ಅನ್ನೋದು ಮೈಲಿಗೆ ಮಡಿ ಬಗ್ಗೆ ಇನ್ನೊಂದು ಸಂಚಿಕೆ ಮಾಡೋಣ ಅದರಲ್ಲಿ ಹೇಳ್ತೀನಿ ಈಗ ಸದ್ಯಕ್ಕೆ ಅಷ್ಟು ತಿಳ್ಕೊಂಡ್ರೆ ಸಾಕು ಏಸೆಪ್ಟಿಕ್ ಕಂಡೀಷನ್ಸ್ ಅಂತ ಎಲ್ಲೆಲ್ಲೋ ಇರತಕ್ಕಂತದ್ದು ತಿಂದು ನಮಗೆ ಹಂಗೆ ಹೊಟ್ಟೆ ಕೆಡುತ್ತೋ ಆ ಭಗವತ್ ವಸ್ತುವಿಗೆ ಅಪಚಾರ ಮಾಡಿದ ಹಾಗಾಗುತ್ತೆ. ತಂತದ್ದೆಲ್ಲ ತಂದು ನಾವು ನೈವೇದ್ಯವನ್ನು ಇಟ್ಟರೆ ಮನೆಯಲ್ಲಿ ನಾವೇ ಮಾಡಿದ್ರೆ ಪೂರ್ತಿಯಾದ ಪುಣ್ಯ. ದೇವರ ಪೂಜೆಗೆ ನೀರನ್ನು ಬೇರೆಯವರು ತಂದು ಕೊಟ್ರೆ ನೀವು ಪೂಜೆ ಮಾಡತಕ್ಕಂತಹ ಫಲದಲ್ಲಿ ಅವರಿಗೆ ಹೋಗುತ್ತೆ. ನೀರು ನಾವೇ ಸೇರ್ಕೊಂಡು ಬರಬೇಕು ನಾವೇ ತೆಗೆದುಕೊಂಡು ಬರಬೇಕು ಅಂತ ಶಾಸ್ತ್ರದಲ್ಲಿ ಉಕ್ತಿ ಇದೆ. ಹೂವನ್ನು ಕೊಂಡರೆ ಅರ್ಧ ಫಲ ನೀವೇ ಹೋಗಿ. ಹೂವನ್ನು ಕುಯ್ದುಕೊಂಡು ಬಂದರೆ ಬಿಡಿಸಿಕೊಂಡು ಬಂದರೆ ಪೂರ್ಣ ಫಲ. ಹಂಗಂತ ಹೇಳಿ ಪಕ್ಕದ ಮನೆಯವರು ಹೂವನ್ನು ನೀವು ಕುಯ್ದುಕೊಂಡು ಪೂಜೆ ಮಾಡಿದ್ರೆ ಪತ್ರ ಹೂವನ್ನ ಅರ್ಧ ಫಲ ಅವರಿಗೆ ಅರ್ಧ ಫಲ ನಿಮಗೆ. ಇಷ್ಟನ್ನು ದಯವಿಟ್ಟು ಮನಸ್ಸಿನಲ್ಲಿ ಚೆನ್ನಾಗಿ ಜ್ಞಪ್ತಿ ಇಟ್ಟುಕೊಂಡು ಮುಂದುವರಿಯಬೇಕು ನಾನು ನೀವು. ಈ ರೀತಿಯಾಗಿ ಗಣಪತಿಯ ಒಂದು ಆರಾಧನೆಯನ್ನು ಮಾಡಿ ವರಸಿದ್ದ ನಾಯಕ ಸ್ವಾಮಿಯ ವ್ರತವನ್ನು ನಾವು ಮಾಡಿ. ಚಕ್ಲಿ, ಕೋಡಬಳೆ, ನಿಪ್ಪಟ್ಟು ಇತ್ಯಾದಿಯ ಪಿಷ್ಟ ಪದಾರ್ಥಗಳ ಖಾದ್ಯಗಳನ್ನು ಅಂದ್ರೆ ಹಿಟ್ಟಿನಿಂದ ಮಾಡಿರತಕ್ಕಂತಹ ಖಾದ್ಯ ಪದಾರ್ಥಗಳನ್ನು ಮುಚ್ಚೋರೆ, ಶಂಕರಪೋಳೆ ಇತ್ಯಾದಿ ಎಲ್ಲವನ್ನು ಗಣಪತಿಗೆ ಮಾಡಬೇಕು ನೈವೇದ್ಯ ಅಂತ ಇದೆ. ರವೆ ಉಂಡೆ, ಬೇಸನ್ ಉಂಡೆ, ಈ ರೀತಿ ಚಿಗಿರಿ, ತಂಬಿಟ್ಟು ಇತ್ಯಾದಿಗಳನ್ನು 21 ಬಗೆಯ ಭಕ್ಷ್ಯಗಳನ್ನು ಇಟ್ಟು ಕನಿಷ್ಠ 21 ಮೋದಕವನ್ನೋ ಅಥವಾ 21 ಕಡಬನ್ನೋ ಇಟ್ಟು ನೈವೇದ್ಯ ಮಾಡಿ. ಆ 21 ಕಡುಬನ್ನು ಕೂಡ ದಾನ ಮಾಡಬೇಕು ಅಂತ ಶಾಸ್ತ್ರದಲ್ಲಿ ಉಕ್ತಿ. ಆವಾಗ ವರಸಿದ್ದಿನಾಯಕ ಸ್ವಾಮಿ ಪೂರ್ಣವಾದ ಅನುಗ್ರಹ ನಮಗೆ ಉಂಟಾಗುತ್ತೆ ಅಂತ. ಬೇಡಿದಂತಹ ವರವನ್ನು ಸಿದ್ಧಿಸುವ ರೂಪದಲ್ಲಿ ಕೊಡ್ತಕ್ಕಂತವನು ವರಸಿದ್ದಿ ವಿನಾಯಕ. ಇಲ್ಲದೆ ಇದ್ರೆ ಏನಾಗುತ್ತೆ ಅದು ನಮಗೆ ದಕ್ಕೋದಿಲ್ಲ. ಅಯ್ಯೋ ಕೊಟ್ಟಿದ್ರೆ ಹೆಂಗೆ ದಕ್ಕೋದಿಲ್ಲ ಅನ್ನೋದಕ್ಕೆ ನಾನು ಚಿಕ್ಕ ಒಂದು ಕಥೆಯನ್ನು ಹೇಳ್ತೀನಿ ನಿಮಗೆ ಅರ್ಥ ಆಗಿ ಹೋಗಿ. ವರವನ್ನು ದೇವರು ಕೊಡ್ತಾನೆ ಆದರೆ ನಮಗೆ ಅಲ್ಲಿ ಶ್ರದ್ಧಾ ಭಕ್ತಿ ವಿಶ್ವಾಸ ಇಲ್ಲದೆ ಏನಾಗುತ್ತೆ ಅದು ನಮಗೆ ಸಿದ್ಧಿಸುವುದಿಲ್ಲ. ಅದನ್ನ ನಾವು ಅರಿತುಕೊಳ್ಳತಕ್ಕಂತಹ ಜ್ಞಾನವು ನಮ್ಮಲ್ಲಿ ಉಂಟಾಗುವುದಿಲ್ಲ ಅಂತ ಅರ್ಥ. ಈಗ ಅಕ್ಕಸಾಲಿಗರ ಹತ್ತಿರ ನೀವು ಹೋಗಿ ಚಿನಿವಾರರ ಹತ್ತಿರ ಗೋಲ್ಡ್ ಸ್ಮಿತ್ ನೀವು ಹಾಕಿಕೊಂಡಿರ್ತಕ್ಕಂತಹ ಉಂಗುರ ಪಾಲಿಶ್ ಆಗೋಕೆ ಮುಂಚೆ ಹೆಂಗಿರುತ್ತೆ ನೋಡಿ ಕಪ್ಪು ಬಣ್ಣಕ್ಕೆ ಇರುತ್ತೆ. ಇದನ್ನ ಆಸಿಡ್ ಡಿಪ್ ಮಾಡಿ ಪಾಲಿಶ್ ಮಾಡುವವರೆಗೂ ಬಂಗಾರದ ಹೊಳಪನ್ನು ಪಡೆಯುವುದಿಲ್ಲ. ಈಗ ಅಕಸ್ಮಾತ್ ಈ ವಿಚಾರ ತಿಳಿದೆ ಇರತಕ್ಕಂತವರು ನೀವು ಕಪ್ಪಗಿರತಕ್ಕಂತ ಬಂಗಾರದ ಉಂಗುರ ಕೊಟ್ಟರೆ ತೆಗೆದು ಬಿಸಾಡಿಬಿಡ್ತಾರೆ. ಅದು ಕೊಟ್ಟಿದ್ದು ವರ ಆದರೆ ನಿಮಗೆ ಸಿದ್ದಿಸುತ್ತಿಲ್ಲ ಯಾಕೆ ಅಂತಂದ್ರೆ ಆ ಸಿದ್ದಿಗೆ ಬೇಕಾಗಿರತಕ್ಕಂತಹ ತಿಳುವಳಿಕೆ ಜ್ಞಾನ ನಿಮ್ಮಲ್ಲಿ ಇಲ್ಲ ಕೈಗೆ ಬಂಗಾರದ ಉಂಗುರ ಕೊಟ್ಟಿರೋ ಯಾವುದೋ ಕಬ್ಬರದು ಕೊಡೋ ಕಬ್ಬಿಗೆ ಇವನು ಇಂಥವನಯ್ಯ ಅಂತ ತೆಗೆದು ಬಿಸಾಡುವ ರೀತಿಯಲ್ಲಿ ಆ ಭಗವಂತನು ನಮಗೆ ದಿನನಿತ್ಯದಲ್ಲೂ ದಯಪಾಲಿಸತಕ್ಕಂತಹ ಎಷ್ಟೋ ವಿಚಾರಗಳನ್ನು ಎಷ್ಟೋ ವಸ್ತುಗಳನ್ನು ಎಷ್ಟೋ ಅವಕಾಶಗಳನ್ನು ಅದು ಏನು ಅಂತ ನೋಡಿ ತಿಳಿದುಕೊಳ್ಳದೆ ಇರತಕ್ಕಂತಹ ಅಜ್ಞಾನವೇ ವಿಘ್ನ ಅಂತಹ ವಿಘ್ನವನ್ನು ಹರಿಸತಕ್ಕಂತವನು ವರಸಿದ್ದಿ ವಿನಾಯಕನಾಗಿದ್ದಾನೆ ಆದ್ದರಿಂದ ಈ ವರಸಿದ್ದಿ ವಿನಾಯಕ ಸ್ವಾಮಿಯ ಈ ವ್ರತವನ್ನು ಈ ರೀತಿಯಾದ ರೀತಿಯಲ್ಲಿ ಪೂರ್ಣವಾಗಿ ಸಶಾಸ್ತ್ರೀಯವಾಗಿ ಮಾಡಿದಾಗ ಮಾತ್ರ ಈ ಫಲ ಉಂಟಾಗುತ್ತೆ. ನಮ್ಮಲ್ಲಿ ಆ ಒಂದು ಜ್ಞಾನದ ಒಂದು ಕಿಡಿಯನ್ನು ಹಚ್ಚಿಬಿಡ್ತಾರೆ. ಆಗ ಏನಾಗುತ್ತೆ ನಮ್ಮ ಜೀವನದಲ್ಲಿ ಆಗ್ತಕ್ಕಂತಹ ಘಟನೆಗಳಾಗಿರಬಹುದು, ಅವಕಾಶಗಳಾಗಿರಬಹುದು, ವಸ್ತುಗಳಾಗಿರಬಹುದು, ಮನುಷ್ಯರಾಗಿರಬಹುದು, ಅವೆಲ್ಲದರ ಹಿಂದೆ ಇರತಕ್ಕಂತಹ ಪರಮಾರ್ಥವನ್ನು ತಿಳಿದುಕೊಂಡು ರೆಕಗ್ನೈಸಿಂಗ್ ಅಂತ ಹೇಳ್ತೀವಿ. ಆ ರೆಕಗ್ನೈಸ್ ಮಾಡ್ತಕ್ಕಂತಹ ಅದನ್ನು ಪೂರ್ತಿಯಾಗಿ ತಿಳಿದುಕೊಳ್ಳತಕ್ಕಂತಹ. ಅದನ್ನ ಅಂಗೀಕಾರ ಮಾಡತಕ್ಕಂತಹ, ಅನುಭವಿಸತಕ್ಕಂತಹ, ಕ್ಷುಣ್ಣವಾಗಿ ನೋಡತಕ್ಕಂತಹ ದೃಷ್ಟಿ ನಮಗೆ ಉಂಟಾಗುತ್ತೆ ಅಂತಕ್ಕಂತದ್ದು ವರಸಿದ್ದಿ ವಿನಾಯಕ ಸ್ವಾಮಿ ಪರಿಹಾರ ಮಾಡತಕ್ಕಂತಹ ವಿಘ್ನವಾಗಿ ನೀವು ಯಾವುದೋ ಮಾಡೋ ಕೆಲಸಕ್ಕೆ ಒಂದು ಪೂಜೆ ಮಾಡಿದಿದ್ರೆ ಬಂದು ಅದಕ್ಕೆ ಕಲ್ಲು ಹಾಕಿ ಬಡೆದು ನಿಮ್ಮನ್ನ ಹಾಳು ಮಾಡತಕ್ಕಂತಹ ಅದು ಅಲ್ಲ. ಅದು ಚಿಕ್ಕ ಹುಡುಗರಿಗೆ ಹೇಳ್ತಕ್ಕಂತಹ ಕಥೆ. ಬಹಳ ಬಾಲಿಶವಾದಂತಹ ಮಾತಾಗಿ ಹೋಗುತ್ತೆ. ಮತ್ತೆ ಪರಿಸಿದ್ಧನಾಯಕ ಸ್ವಾಮಿ ನಮಗೆ ಈ ತರದ ಕೊಟ್ಟಂತಹ ವರವನ್ನು ಸಿದ್ಧಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲದೆ ಇರತಕ್ಕಂತಹ ಪರಿಸ್ಥಿತಿಯಲ್ಲಿ ಅಂತಹ ಬುದ್ಧಿಮತ್ತೆಯಲ್ಲಿ ಅಂತಹ ಮಾನಸಿಕ ಸ್ಥಿತಿಯಲ್ಲಿ ನಾವು ಇದ್ದೇವೆ. ನಮ್ಮಿಂದನೇ ತಾನೇ ಸಮಾಜ, ಸಮಾಜದಿಂದನೇ. ಒಂದು ಊರು, ಊರಿಂದ ಒಂದು ತಾಲೂಕು, ತಾಲೂಕಿಂದ ಜಿಲ್ಲೆ, ಜಿಲ್ಲೆಗಳಿಂದ ಒಂದು ರಾಜ್ಯ, ರಾಜ್ಯದಿಂದ ಒಂದು ರಾಷ್ಟ್ರವಾಗುತ್ತೆ. ಅಲ್ಲಿಗೆ ಏನಾಯ್ತು, ಒಳಗಿರತಕ್ಕಂತದ್ದು ಅವಿವೇಕಿಗಳು ಹೆಚ್ಚಾಗ್ತಾ ಹೋದಷ್ಟು ಏನಾಗುತ್ತೆ ಇಡೀ ರಾಷ್ಟ್ರ ಅವಿವೇಕ ರಾಷ್ಟ್ರವಾಗಿ ಹೋಗುತ್ತೆ. ಅದೇ ಆ ಚಿಕ್ಕದಾಗಿರತಕ್ಕಂತಹ ನಾನು ಅಂತಕ್ಕಂತವನು ತನ್ನನ್ನು ತಾನು ಸರಿಮಾಡಿಕೊಂಡರೆ ಇಡೀ ರಾಷ್ಟ್ರ ಇಡೀ ವಿಶ್ವ ಹೇಗೆ ಬದಲಾಗಿ ಹೋಗುತ್ತೋ ಆ ಬದಲಾವಣೆಯನ್ನು ಮೊದಲು ನಮ್ಮಲ್ಲಿ ಉಂಟು ಮಾಡತಕ್ಕಂತವನು ವರಸಿದ್ಧವಿನಾಯಕ ಸ್ವಾಮಿಯಾಗಿದ್ದಾನೆ. ಈ ಹೇಳಿದ ಪರಿಯಲ್ಲಿ ಮಿಕ್ಕಿದೆಲ್ಲ ನಿಮಗೆ ಪುಸ್ತಕದಲ್ಲಿ ಸಿಗುತ್ತೆ. ಪುಸ್ತಕದಲ್ಲಿ ಇಲ್ಲದೆ ಇರತಕ್ಕಂತದ್ದನ್ನು ಮಾತ್ರ ನಿಮ್ಮ ಮುಂದೆ ನಾನು ಇಡ್ತಾ ಇದ್ದೇನೆ. ಈ ರೀತಿಯಾಗಿ ಮಣ್ಣಿನ ವಿಗ್ರಹವನ್ನು ನೀರಿನಲ್ಲಿ ವಿಸರ್ಜನೆ ಮಾಡುವುದನ್ನು ನಿಲ್ಲಿಸೋಣ. 21ರು ಫಲ, ಪುಷ್ಪ, ಪತ್ರೆ ಇತ್ಯಾದಿಗಳನ್ನು ಕಷ್ಟಪಟ್ಟು ನಮ್ಮ ಶಕ್ತಿ ಮೀರಿ ಸಂಪಾದನೆ ಮಾಡಿ ನಾವು ಪೂಜಿಸೋಣ. ಬೆಳ್ಳಿ ಬಂಗಾರ, ಹಿತ್ತಾಳೆ ಇತ್ಯಾದಿಗಳು ನಮ್ಮ ಶತ್ಯಾನುಸಾರ ಚಿಕ್ಕ ಗಣಪತಿಯ ವಿಗ್ರಹ ಇಟ್ಟರೂ ಅಡ್ಡಿ ಇಲ್ಲ. ಇಷ್ಟಿಷ್ಟ ಹತ್ರ ನೀವು ಬೆಳ್ಳಿಯಲ್ಲಿ ಇಡಿ ಅಂತ ನಾವು ಹೇಳೋದಿಲ್ಲ. ಹೇಳೋಕೆ ನಮಗೂ ಬಾಯಿ ಬರೋದಿಲ್ಲ. ಇಷ್ಟೇ ಇಷ್ಟು ಇಡಿ, ಚಿಕ್ಕದು ಇಡಿ, ಇಷ್ಟು ಇಡಿ, ಒಂದು ಇಂಚು ಗಣಪತಿ ಇಡಿ. ಆ ತರದ ಗಣಪತಿಯನ್ನಿಟ್ಟು ನಿಮಗೆ ಬೆಳ್ಳಿಯಲ್ಲಿ ಕೊಂಡು ಇಡತಕ್ಕಂತ ಶಕ್ತಿ ಇದ್ರೆ ದಯವಿಟ್ಟು ತಾಮ್ರದ ಇಡಬೇಡಿ. ಆಮೇಲೆ ಟೊಳ್ಳಿ ಇರಬಾರದು ಗಣಪತಿ, ಅದು ಗಟ್ಟಿ ಇರಬೇಕು. ಸಲಕ್ಷಣವಾಗಿರಬೇಕು, ಕಣ್ಣು, ಮೂಗು, ಕಿವಿ, ಬಾಯಿ, ಸೊಂಡ್ಲು, ಕೈ, ಕಾಲು ಕಾಣಬೇಕು. ಆ ತರದ ವಿಗ್ರಹವನ್ನು ಇಟ್ಟು. ನೀವು ದಾನವನ್ನು ಮಾಡಿದ್ದೆ ಆದರೆ ವರಿಸಿದ್ದಿ ವಿನಾಯಕ ಸ್ವಾಮಿಯ ದಿವ್ಯಾನುಗ್ರಹದಿಂದ ನೀವು ಹಿಡಿದಂತಹ ಎಲ್ಲ ಕೆಲಸಗಳಲ್ಲೂ ಯಶಸ್ಸು, ಪ್ರೇಯಸ್ಸು, ಶ್ರೇಯಸ್ಸು ಇಷ್ಟು ಕೂಡ ನಿಮ್ಮದಾಗುವುದರಲ್ಲಿ ಎಳ್ಳಷ್ಟು ಕೂಡ ಸಂಶಯ ಇಲ್ಲ. ಕೈಯಲ್ಲಿ ಒಂದು ರಾಗ ಮತ್ತು ಕ್ರೋಧವನ್ನು ಧರಿಸಿರುತ್ತಾನೆ. ಪಾಶಾಂಕುಶಗಳು ಏನನ್ನು ಸೂಚಿಸುತ್ತೆ ಅಂತಂದ್ರೆ ಆಸೆಯನ್ನು ಕಟ್ಟು ಹಾಕು ಅಂತ. ಕೈಯಲ್ಲಿ ಗಣಪತಿ ಪಾಶವನ್ನು ಇಟ್ಟುಕೊಂಡಿರೋದು. ಅಂಕುಶ ಏನು ಇಟ್ಟುಕೊಂಡಿದ್ದಾನೆ ಅಂತಕ್ಕಂತದ್ದು ಆನೆ ಗಾತ್ರದಲ್ಲಿ ಇರತಕ್ಕಂತಹ ಅಹಂಕಾರವನ್ನು ಕಡಿಮೆ ಮಾಡ್ಕೋ ಅಂತ. ಆನೆ ಅದನ್ನ ಹತೋಟಿಗೆ ತಂದುಕೊಳ್ಳೋದು ಮಾವುತ ಯಾವುದರಲ್ಲಿ? ಒಂದು ಚಿಕ್ಕ ಅಂಕುಶದಲ್ಲಿ. ಆ ಕಿವಿ ಹತ್ತಿರ ಹಿಂಗೆ ಅಂದ ತಕ್ಷಣ ಹೇಳಿದ ಮಾತು ಕೇಳುತ್ತೆ. ಆ ಅಹಂಕಾರದಿಂದ ಏನಾಗುತ್ತೆ? ಕೋಪ ಬರುತ್ತೆ, ಕ್ರೋಧ. ಜೋರಾಗಿ ಹೇಳೋದೆಲ್ಲ ಕ್ರೋಧ ಅಲ್ಲ. ಯಾರಾದ್ರೂ ತಪ್ಪು ಮಾಡಿದಾಗ ಗದರಿಸಿ ಏನೋ ಮುಟ್ಟಾಳ ಹೀಗೆ ಮಾಡ್ತಿದ್ದೀಯ ಅಂತಕ್ಕಂತದ್ದು ಕ್ರೋಧ ಅಲ್ಲ. ಅದು ಹೇಳಿದಾಗ ಅವರಿಗೆ ಬರುತ್ತಲ್ಲ ನಮ್ಮ ಮೇಲೆ ಕೆಟ್ಟ ಭಾವನೆ ಅದು ಕ್ರೋಧ ಅಂತ ಹೆಸರು ಅದು ಅಹಂಕಾರ. ಆ ಅಂತಹ ಅಹಂಕಾರವನ್ನು ನೀನು ಮಟ್ಟುಗೋಲು ಹಾಕೋ ನೀನು ಕಡಿಮೆ ಮಾಡಿಕೋ. ಅಂತ ಅಂತಕ್ಕಂತದ್ದನ್ನು ಕೂಡ ಮಹಾಗಣಪತಿ ನಮ್ಮನ್ನು ಎಚ್ಚರಿಸುತ್ತಾ ಇದ್ದಾನೆ. ಅವನ ರೂಪದ ಮಹಿಮೆ ನೋಡಿ ಹೇಗಿದೆ. ಏಕದಂತ ಏನು ಅಂತಂದ್ರೆ ಯಾವುದಾದರೂ ಕೆಲಸವನ್ನು ಮಾಡಬೇಕಾದರೆ ಏಕಾಗ್ರ ಚಿತ್ತನಾಗಿ ಈಗ ಇಷ್ಟು ದೊಡ್ಡ ಒಂದು ಮಳೆಯನ್ನು ಕೊಟ್ಟು ಒಂದು ಚಿಕ್ಕದಿರತಕ್ಕಂತಹ ಯಾವುದಾದರೂ ಕಡ್ಲೆ ಒಂದು ಹುರಿಗಾಳನ್ನು ಅಥವಾ ಹುರಿಗಡಲೆಯನ್ನು ಹೊಡೆಯಿದ್ರೆ ಏನು ಮಾಡ್ತೀವಿ. ಅಲ್ಲೇ ಕಣ್ಣನ್ನು ಕೈ ಇಟ್ಟು ಅದರ ಮೇಲೆ ಹಿಂಗೆ ಕುಟ್ಟಿ ಕುಟ್ಟಿ ಕುಟ್ಟಿ ಏಕಾಗ್ರ ಚಿತ್ತರಾಗಿ ಒಂದೇ ಕೆಲಸವನ್ನು ಅತ್ಯಂತ ನಿನ್ನ ಮನಸ್ಸನ್ನು, ಮೈಯನ್ನು, ಬುದ್ಧಿಯನ್ನು, ಜ್ಞಾನೇಂದ್ರಿಯಗಳನ್ನು, ಕರ್ಮೇಂದ್ರಿಯಗಳನ್ನು ಅಷ್ಟನ್ನು ಅಲ್ಲಿ ಏಕೀಭವಿಸಿ ಮಾಡುವಂತ ಪಾಠವನ್ನು ಕೈಯಲ್ಲಿ ಏಕದಂತ ಆ ದಂತವನ್ನು ಇಟ್ಟುಕೊಂಡು ಮಾಡ್ತಾ ಇದ್ದಾನೆ ಸ್ವಾಮಿ. ಇಷ್ಟು ಮಾಡಿದ್ರೆ ಏನಾಗುತ್ತೆ ಅಂದ್ರೆ ಮೋದಕ ಕೈಯಲ್ಲಿ ಒಂದು ಮೋದಕವನ್ನು ಇಟ್ಟುಕೊಳ್ಳಿ. ಮೋದಕ ಅಂದ್ರೆ ಏನು? ಅಪ್ರತಿಮವಾಗಿರತಕ್ಕಂತಹ ಸಂತಸ, ಸಂತೋಷ ಆ ತರದ ಒಂದು ಖುಷಿ ನಿಮಗೆ ಉಂಟಾಗುತ್ತೆ. ಅದರಿಂದ ದೊಡ್ಡದಾಗಿರತಕ್ಕಂತಹ ಒಂದು ಡೊಳ್ಳೊಟ್ಟೆ ಇದೆ ಗಣಪತಿಗೆ. ಅದೇನು ಸೂಚಿಸುತ್ತೆ? ಪೂರ್ಣತರವಾಗಿರತಕ್ಕಂತಹ ತೃಪ್ತಿಯನ್ನು ಸೂಚಿಸುತ್ತೆ. ಜೀವನದಲ್ಲಿ ಏನು ತೃಪ್ತರಾಗಿ ಹೋಗ್ತೀರಿ, ಕೃತಕೃತ್ಯರಾಗಿ ಹೋಗ್ತೀರಿ. ನನಗೆ ಅದು ಬೇಕು, ಇದು ಬೇಕು ಅಂತಕ್ಕಂತಹ ಆ ಒಂದು ಬೇಗುದೆ ನಮ್ಮನ್ನು ಬಿಟ್ಟು ತೊಲಗಿ ಹೋಗುತ್ತೆ ಅಂತಕ್ಕಂತದ್ದು ಆ ದಿವ್ಯ ಮಂಗಳಮೂರ್ತಿಯಾಗಿರತಕ್ಕಂತಹ ವರಸಿದ್ದಿ ವಿನಾಯಕ ಸ್ವಾಮಿ ನನಗೂ ನಿಮಗೂ ದರ್ಶನವನ್ನು ಕೊಡ್ತಾ ಇದ್ದಾನೆ. ಆದ್ದರಿಂದ ಯಗತಾಳಿ ಮಾಡದೆ. ಅವಿವೇಕವನ್ನು ಮಾಡದೆ ಅಶಾಸ್ತ್ರೀಯವಾಗಿರತಕ್ಕಂತಹ ಸನಾತನ ಧರ್ಮಕ್ಕೆ ವಿರೋಧವಾಗಿರತಕ್ಕಂತಹ ಯಾವ ರೀತಿಯಲ್ಲಿಯೂ ಕೂಡ ಗಣಪತಿಯ ರೂಪ, ಪೂಜೆ, ಜಪ, ತಪ, ಹೋಮ, ಹವನ, ದಾನ, ಧರ್ಮವನ್ನು ಅಧರ್ಮವಾಗಿರತಕ್ಕಂತ ಅಧಾರ್ಮಿಕವಾಗಿರತಕ್ಕಂತದ್ದನ್ನ ಬಿಟ್ಟು ಶಾಸ್ತ್ರ ಸಿದ್ಧವಾಗಿ ಸನಾತನ ಧರ್ಮದಲ್ಲಿ ಅನಾದಿ ವೇದಕಾಲದಿಂದ ಬಂದಿರತಕ್ಕಂತದ್ದನ್ನ ನಾವು ನೀವು ಅನುಸರಿಸೋಣ. ಆಗ ಏನು ಮಾಡುತ್ತೆ ಅದನ್ನು ನಮ್ಮನ್ನು ಶಾಸ್ತ್ರ ತಸ್ಮಾತ್ರಾಯತೆ ಶಾಸತೇ ತಸ್ಮಾತ್ರಾಯತೆ ಅದು ನಮ್ಮನ್ನು ಎಲ್ಲರ ಇಹದಲ್ಲೂ ಪರದಲ್ಲೂ ಕೂಡ ಆ ಧರ್ಮ ಪಾಲನೆ ನಮ್ಮನ್ನು ಕಾಪಾಡುತ್ತೆ ವರಸಿದ್ದಿನಾಯಕ ಸ್ವಾಮಿ ನಮ್ಮನ್ನು ಕಾಪಾಡುತ್ತಾನೆ ಅಂತ ಹೇಳಿ ನಾವೆಲ್ಲರೂ ಕೂಡ ಶ್ರದ್ಧಾ ಭಕ್ತಿಯಿಂದ ಬರೀ ಬಾಯಲ್ಲಿ ಹೇಳೋದಲ್ಲ ವಿಚಾರಹಿತರಾಗೋದಿಲ್ಲ ಆಚರಣೆಗೂ ತರಬೇಕು. ಆಚರಣೆಗೆ ಇದನ್ನು ನಾವು ತಂದಿದ್ದೆ ಆದರೆ ಆಚಾರ ಪರಮೋ ಧರ್ಮಃ ಆಚರಣೆಗೆ ತರತಕ್ಕಂತದ್ದೇ ವಿಚಾರವನ್ನು ಆಚರಣೆಗೆ ತರತಕ್ಕಂತದ್ದೇ ನಿಜವಾದ ಧರ್ಮಾನುಷ್ಠಾನ ಬಾಯಲ್ಲಿ ಸುಮ್ಮನೆ ಹೇಳ್ತಾ ಇದ್ರೆ ಉಪಯೋಗ ಇಲ್ಲ ಆದ್ದರಿಂದ ಇವತ್ತಿನಿಂದ ಈ ವರಸಿದ್ದಿನಾಯಕ ಸ್ವಾಮಿಯ ಈ ವರ್ಷದ ಆರಾಧನೆಯಿಂದ ಪೂಜೆಯಿಂದ ನಾವು ಆತನನ್ನು ಒಲಿಸಿಕೊಂಡು ಕೃತಕೃತ್ಯರಾಗೋಣ ನಾವು. ಎಲ್ಲಾ ರೀತಿಯಲ್ಲೂ ನಾವು ಸೌಭಾಗ್ಯಶಾಲಿಗಳಾಗೋಣ ಅಂತ ಹೇಳಿ ನಾವೆಲ್ಲರೂ ಇವತ್ತಿನ ಶಪಥವನ್ನು ಮಾಡೋಣ. ಎಲ್ಲರಿಗೂ ಶ್ರೀಮನ ಮಹಾಗಣಪತಿ ವರಸಿದ್ದಿನಾಯಕ ಸ್ವಾಮಿ ಒಲಿಯಲಿ ಕೃಪೆಯನ್ನು ಮಾಡಲಿ. ಮಂಗಳ ಮಾಹೇಶ್ವರಿ ಶುಭಂ ಕರೋತು.