ಪರಂಪರೆಯ ಪಥದಲ್ಲಿ
ಪರಮಾರ್ಥದ ಪಯಣ...
Full Video on youtube
ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮಿ ಹಬ್ಬ ಯಾವ ರೀತಿ ಆಚರಣೆ ಮಾಡಿದರೆ ಲಕ್ಷ್ಮೀ ದೇವಿಗೆ ಸಂತೃಪಿಯಾಗುತ್ತದೆ.
In Hindu tradition, Lord Ganesha, Lord Shiva, and Lord Hanuman are widely believed to grant swift blessings to sincere devotees. Lord Ganesha is worshipped first to remove all obstacles, while Lord Shiva is known as Ashutosh, meaning one who is easily pleased by pure devotion.
Audio Clips
Text Version
ಶ್ರೀ ಗುರುಭ್ಯೋ ನಮಃ ಪದ್ಮಾನನೇ ಪದ್ಮಕರೆ ಸರ್ವಲೋಕೈಕ ಪೂಜಿತೇ ನಾರಾಯಣ ಪ್ರಿಯೇ ದೇವಿ ಸುಪ್ರೀತಾ ಭವ ಸರ್ವದಾ. ವರಮಹಾಲಕ್ಷ್ಮಿ ಹಬ್ಬ, ವರಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳುವ ಪರಿ, ವರಮಹಾಲಕ್ಷ್ಮಿಯ ವ್ರತವನ್ನು ಶಾಸ್ತ್ರೀಯವಾದ ವಿಧಿವಿಧಾನಗಳನ್ನು ಅನುಸರಿಸಿ ಯಾವ ರೀತಿಯಾಗಿ ವ್ರತಾಚರಣೆಯನ್ನು ಮಾಡಬೇಕು, ಆ ಮಹಾಲಕ್ಷ್ಮಿಯನ್ನು ವರಮಹಾಲಕ್ಷ್ಮಿಯನ್ನು ಹೇಗೆ ಒಲಿಸಿಕೊಳ್ಳಬೇಕು ಅಂತಕ್ಕಂತದ್ದನ್ನು ಇವತ್ತಿನ ದಿವಸ ಈ ಸಂಚಿಕೆಯಲ್ಲಿ ನೋಡುವ ಒಂದು ಚಿಕ್ಕ ಪ್ರಯತ್ನವನ್ನು ಮಾಡೋಣ. ವರಮಹಾಲಕ್ಷ್ಮಿ ಅಂದ ಕ್ಷಣ ಬೇಡಿದ ವರವನ್ನು ಕೊಡತಕ್ಕಂತಹ ಮಹಾಲಕ್ಷ್ಮಿ ಇರತಕ್ಕಂತದ್ದು ಎಲ್ಲರಿಗೂ ತಿಳಿದಿರೋ ವಿಚಾರವೇ. ನಾವೇನೇನನ್ನು ಪಡೆಯಬಹುದು ಅಂತಂದ್ರೆ ಆಯುಷ್ಯವನ್ನು, ಆರೋಗ್ಯವನ್ನು, ಸೌಭಾಗ್ಯವನ್ನು, ಹಣವನ್ನು, ಐಶ್ವರ್ಯವನ್ನು, ಕೀರ್ತಿಯನ್ನು, ನೆಮ್ಮದಿಯನ್ನು, ಮಕ್ಕಳನ್ನು. ಮದುವೆಯಾಗದೆ ಇರತಕ್ಕಂತವರು ಬಹಳ ಒಳ್ಳೆಯ ಗಂಡನನ್ನು ಅಥವಾ ಹುಡುಗರು ಒಳ್ಳೆಯ ಹೆಂಡತಿಯನ್ನು, ಈ ರೀತಿಯಾಗಿ ಅಧಿಕಾರವನ್ನು ಕೂಡ ಪಡೆಯಲಿಕ್ಕೆ ಸಾಧ್ಯತೆ ಕಂಡುಬರುತ್ತೆ ಶಾಸ್ತ್ರದಲ್ಲಿ. ವರ ಅಂತಕ್ಕಂತದ್ದು ಶಾಸ್ತ್ರದಲ್ಲಿ ಇನ್ನೊಂದು ಅರ್ಥವನ್ನು ಕೂಡ ಹೇಳುತ್ತೆ, ವರ ಅಂತಕ್ಕಂತಹ ಒಂದು ಪದಕ್ಕೆ. ವರ ಅಂತಂದ್ರೆ ಅತ್ಯಂತ ಶ್ರೇಷ್ಠವಾಗಿರೋದು ಅಂತ ಅರ್ಥ. ಅಂದ್ರೆ ಪೂಜಕನು ಕುಳಿತುಕೊಂಡು ದೇವರ ಪೂಜೆಯನ್ನು ಮಾಡಬೇಕಾದರೆ ಅವನಿಗೆ ಅತ್ಯಂತ ಶ್ರೇಷ್ಠ ಅಂತ ಒಬ್ಬೊಬ್ಬರಿಗೆ ಅವರವರ ಪೂರ್ವಸಂಸ್ಕಾರದ ಅನುಸಾರವಾಗಿ ಶ್ರೇಷ್ಠವಾಗಿ ಕಾಣುತ್ತೆ. ಕೆಲವರಿಗೆ ಮೋಕ್ಷ ಮಹಾಶ್ರೇಷ್ಠ ಅನ್ಸುತ್ತೆ. ಕೆಲವರಿಗೆ ಸ್ವರ್ಗವೇ ದೊಡ್ಡದಾಗಿರತಕ್ಕಂತಹ ವಸ್ತು, ಶ್ರೇಷ್ಠತೆ ಅಂತ ಹೇಳಿ ಅವರಿಗೂ ಕೂಡ ಗೋಚರ ಆಗುತ್ತೆ. ಮತ್ತೆ ಕೆಲವರಿಗೆ ಏನಾಗುತ್ತೆ, ಚೆನ್ನಾಗಿ ವಿಪುಲವಾದ ಧನವನ್ನು ಸಂಪಾದನೆ ಮಾಡಬೇಕು ಅಂತಕ್ಕಂತದ್ದು ಅವರಿಗೆ ಶ್ರೇಷ್ಠತೆ. ಅಂದರೆ ಅವರವರು ಏನು ಅರಸಿ ಬರ್ತಾರೋ ಅದನ್ನು ಆ ಭಗವತಿ ಅವರಿಗೆ ದಯಪಾಲಿಸುತ್ತಾಳೆ ಅಂತಕ್ಕಂತದ್ದು ಇದರ ಪರಮಾರ್ಥ. ಶ್ರಾವಣ ಮಾಸದಲ್ಲಿ ಈ ವರಮಹಾಲಕ್ಷ್ಮಿ ವ್ರತವನ್ನು ಎಲ್ಲ ತಾಯಂದಿರು ಮತ್ತು ಹೆಣ್ಣು ಮಕ್ಕಳು ಪೂಜೆ ಮಾಡಿಕೊಂಡು, ಆರಾಧನೆ ಮಾಡಿಕೊಂಡು, ವ್ರತವನ್ನು ನಡೆಸಿಕೊಂಡು ಬಂದಿರತಕ್ಕಂತದ್ದು. ಅನಾದಿಕಾಲದಿಂದಲೂ ಕೂಡ ನಮ್ಮಲ್ಲಿ ಇದೆ. ಆದರೆ ಶಾಸ್ತ್ರೀಯವಾದ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದರೆ ಮಾತ್ರ ಪೂರ್ಣತರವಾದ ಫಲ ನಮಗೆ ಉಂಟಾಗುತ್ತೆ. ಇದು ಅಡುಗೆ ಮಾಡಿದ ರೀತಿಯಲ್ಲಿ. ಚೆನ್ನಾಗಿರುವ ಪಾಯಸವನ್ನು ನಾವು ಮಾಡಬೇಕು ಅಂದ್ರೆ ಏನು ಅಂತಂದ್ರೆ ಪಾಯಸಕ್ಕೆ ಬೇಕಾಗುವ ಅಕ್ಕಿ ಆಗಿರಬಹುದು, ಬೇಳೆ ಆಗಿರಬಹುದು, ಗಸಗಸೆ ಆಗಿರಬಹುದು, ಶಾವಿಗೆ ಆಗಿರಬಹುದು, ಅದನ್ನು ಹದವಾಗಿ ಬೇಯಿಸತಕ್ಕಂತದ್ದು. ಅದಕ್ಕೆ ಹಾಲನ್ನು, ನೀರನ್ನು, ಬೆಲ್ಲವನ್ನು, ಸಕ್ಕರೆಯನ್ನು, ತುಪ್ಪವನ್ನು, ಬಾದಾಮಿ, ಖರ್ಜೂರ, ದ್ರಾಕ್ಷಿ, ಗೋಡಂಬಿ ಇತ್ಯಾದಿಗಳನ್ನು ಹಾಕತಕ್ಕಂತದ್ದು, ಕೇಸರಿಯನ್ನು ಹಾಕತಕ್ಕಂತದ್ದು. ಇವೆಲ್ಲ ಮಾಡಿದಾಗ ಏನಾಗುತ್ತೆ, ಅದು ಬಹಳ ಚೆನ್ನಾಗಿ ನಮಗೆ ಬಾಯಿಗೆ ರುಚಿಯನ್ನಷ್ಟೇ ಅಲ್ಲದೆ ಹೊಟ್ಟೆಯನ್ನು ತುಂಬಿಸಿ ಶರೀರಕ್ಕೆ ಒಂದು ಪುಷ್ಟಿಯನ್ನು ಕೊಡತಕ್ಕಂತದ್ದಾಗುತ್ತೆ. ಈ ಪ್ರಕ್ರಿಯೆಯಲ್ಲಿ ರವೆ ಜಾಸ್ತಿ ಆಗೋದು, ಅಕ್ಕಿ ಜಾಸ್ತಿ ಆಗೋದು, ಬೇಳೆ ಜಾಸ್ತಿ ಆಗೋದು, ಶಾವಿಗೆ ಜಾಸ್ತಿ ಆಗತಕ್ಕಂತದ್ದು, ಹಾಗಾದರೆ ನೀರು ಅಥವಾ ಹಾಲು ಕಡಿಮೆ ಆದರೆ ಅಥವಾ ಅದನ್ನು ಮಾಡಬೇಕಾದರೆ ತಳ ಹತ್ತಿದರೆ, ಸಕ್ಕರೆ ಕಡಿಮೆ ಆದರೆ ಅಥವಾ ಸಕ್ಕರೆ ವಿಪರೀತವಾದರೆ ಏನಾಗುತ್ತೆ ಆ ಪಾಯಸ? ತಿನ್ನಲಿಕ್ಕೆ ಆಗೋದಿಲ್ಲ. ಅದೇ ರೀತಿಯಾಗಿ ಈ ಪ್ರಯತ್ನ ಏನಿದೆ, ಶಾಸ್ತ್ರ ಅಂತಂದ್ರೆ ಏನು ಅಂದ್ರೆ ಕಾಟಾಚಾರಕ್ಕೆ ಮಾಡೋದು ಅಂತಕ್ಕಂತ ಒಂದು ಪದವಾಗಿ ಬಳಕೆ ಆಗಲ್ಪಡ್ತಾ ಇದೆ ಈಗಿನ ಸಮಾಜದಲ್ಲಿ. ಶಾಸ್ತ್ರ ಅಂದ್ರೆ ಏನು ಅಂತಂದ್ರೆ ಶಾಸ್ತ್ರತೆ. ತಸ್ಮಾತ್ರಾಯತೆ ಇತಿ ಶಾಸ್ತ್ರಂ. ನಮ್ಮನ್ನ ಅದು ಏನು ಮಾಡುತ್ತೆ ಅಂದ್ರೆ ಒಂದು ನಿಯಮವನ್ನು ಕೊಡುತ್ತೆ, ಹೀಗೆ ಮಾಡಬೇಕು ಅಂತ. ಅಡುಗೆ ಮಾಡಿದ ರೀತಿಯಲ್ಲಿ ನಿಮ್ಮೆಲ್ಲರಿಗೂ ಗೊತ್ತಿದೆ. ಅದೇ ರೀತಿಯಾಗಿ ಈ ವರಮಹಾಲಕ್ಷ್ಮಿ ಹಬ್ಬವನ್ನು ಶಾಸ್ತ್ರೀಯವಾದ ಒಂದು ಚೌಕಟ್ಟಿನಲ್ಲಿ ಎಷ್ಟು ಸುಲಭವಾಗುತ್ತೋ ಅಷ್ಟು ಸುಲಭದಲ್ಲಿ ಮಾಡತಕ್ಕಂತಹ ಒಂದು ವಿಧಿಯನ್ನು ಇವತ್ತಿನ ದಿವಸ ನಿಮ್ಮ ಮುಂದೆ ಇಡ್ತಾ ಇದ್ದೇನೆ. ವರಮಹಾಲಕ್ಷ್ಮಿ ಅಂತಕ್ಕಂತದ್ದು ಬಹಳ ಶ್ರೇಯಸ್ಸನ್ನು, ಪ್ರೇಯಸ್ಸನ್ನು ಕೊಡತಕ್ಕಂತಹ ಒಂದು ವ್ರತವಾಗಿದೆ. ಈ ವ್ರತವನ್ನು ಅತ್ಯಂತ ಪರಿಶುಭ್ರವಾಗಿ ಮಾಡಬೇಕಂತೆ. ಯಾಕೆಂದ್ರೆ ಮಹಾಲಕ್ಷ್ಮಿ ಸಾಧನಾ ವಿಚಾರದಲ್ಲಿ ಕಮಲ ಅಂತ ಕೂಡ ಕರೀತಾರೆ ಈಕೆಯನ್ನ. ಈ ಕಮಲ ಅಂತಕ್ಕಂತದ್ದು ದಶಮಹಾವಿದ್ಯೆಯಲ್ಲಿ ಒಂದು ವಿದ್ಯೆ. ಹತ್ತು ವಿದ್ಯೆಗಳಿವೆ. ಕಾಳಿ, ತಾರಾ, ಛಿನ್ನಮಸ್ತ ಇತ್ಯಾದಿಗಳು, ತ್ರಿಪುರಸುಂದರಿ, ಭೈರವಿ ಆಗಿರಬಹುದು, ಧೂಮಾವತಿ ಆಗಿರಬಹುದು, ಈ ರೀತಿಯಾಗಿ ಹತ್ತು ಶಕ್ತಿಗಳಲ್ಲಿ ಮಾತಂಗಿ ಇತ್ಯಾದಿಗಳು ಬಂದಾಗ ಕಮಲ ಅಂತಕ್ಕಂತದ್ದು ಒಂದು ಶಕ್ತಿ. ಈಕೆ ಆರಾಧನೆಗೆ ಅತ್ಯಂತ ಕಲಶಪ್ರಾಯವಾಗಿ ಏನನ್ನು ಹೇಳ್ತಾರೆ ಬಹಳ ಸುಸ್ಪಷ್ಟವಾಗಿ ಶಾಸ್ತ್ರಕಾರರು, ಹಿರಿಯರು, ವೇದವನ್ನು ತಿಳಿದಿರತಕ್ಕಂತವರು, ನಿಗಮಾಗಮ ಪ್ರವೀಣರು ಮತ್ತು ಆರ್ಷಗ್ರಂಥಗಳಲ್ಲಿ, ಅಂದ್ರೆ ವಿಪರೀತವಾದ ಶುಭ್ರತೆಯನ್ನು ಕಾಪಾಡಿಕೊಂಡು ಮಾಡಬೇಕು. ಆಡುಭಾಷೆಯಲ್ಲಿ ಮಡಿಯನ್ನು ಮಾಡಬೇಕು. ಪರಿಸರವನ್ನು, ಪೂಜಾಸ್ಥಳವನ್ನು, ಶರೀರವನ್ನು, ಮನಸ್ಸನ್ನು, ಬಟ್ಟೆಯನ್ನು ಧರಿಸತಕ್ಕಂತಹ ಬಟ್ಟೆಯನ್ನು ಅತ್ಯಂತ ಪರಿಶುಭ್ರವಾಗಿ ನಾವು ಶುದ್ಧಿ ಮಾಡಿಕೊಂಡು ಈ ಪೂಜೆಯನ್ನು ಮಾಡಬೇಕು. ಮತ್ತು ಪೂಜಾ ಪರಿಕರಗಳು ಅಂತ ಹೇಳ್ತೀವಿ, ಪೂಜೆಗೆ ಸಂಬಂಧಪಟ್ಟಿರತಕ್ಕಂತಹ ಎಲ್ಲ ಸಾಮಾನು ಸರಂಜಾಮಗಳನ್ನು ಏನು ಮಾಡಬೇಕು, ನಾವು ಬಹಳ ಶುಭ್ರ ಮಾಡಿ ಬಳಸಬೇಕು. ಈಕೆಗೆ ಅನ್ಯಥಾ ಏನಾಗುತ್ತೆ, ಅದು ವ್ಯರ್ಥವಾಗಿ ಹೋಗುತ್ತೆ. ಗಲೀಜು ಇರತಕ್ಕಂತಹ ಪದಾರ್ಥದಿಂದ ಪಾಯಸ ಮಾಡಿದಾಗ ಅನ್ನ ಮಾಡಿದ ಹಾಗೆ ಅಂತ. ಅಕ್ಕಿ ಆರಿಸದೆ ಅನ್ನ ಮಾಡಿದ್ರೆ ಏನಾಗುತ್ತೆ, ತಿನ್ನಲಿಕ್ಕೆ ಆಗೋದಿಲ್ಲ. ಅದೇ ರೀತಿಯಾಗಿ ವರಮಹಾಲಕ್ಷ್ಮಿ ಅಮ್ಮನವರು ಹಲವನ್ನು ಕೊಟ್ಟೇ ಕೊಡ್ತಾಳೆ. ಆದರೆ ಹೇಗೆ ಅಂದ್ರೆ ದೇವರು ಕನ್ನಡಿಯ ತರ, ನಾವು ಯಾವ ರೀತಿಯಾಗಿ ಆಕೆಗೆ ನಮ್ಮನ್ನು ನಾವು ಸಮರ್ಪಣೆ ಮಾಡಿಕೊಳ್ಳುತ್ತೀವೋ ಅದೇ ರೀತಿಯಾಗಿ ಆಕೆ ನಮಗೆ ಫಲವನ್ನು ಕೊಡ್ತಾಳೆ ಅಂತಕ್ಕಂತದ್ದು ಅಂತರ್ಧ್ವನಿ. ಈ ವರಮಹಾಲಕ್ಷ್ಮಿ ಹಬ್ಬವನ್ನು ಹೇಗೆ ಆಚರಣೆ ಮಾಡಬೇಕು ಅಂತಂದ್ರೆ ಶುಕ್ರವಾರದ ದಿವಸ ಬೆಳಿಗ್ಗೆ ಸ್ನಾನವನ್ನು ಮಾಡತಕ್ಕಂತದ್ದು. ಸ್ನಾನಕ್ಕೆ ಆಮಲಕ ಚೂರ್ಣವನ್ನು ಹಚ್ಚಿಕೊಂಡು ಸ್ನಾನ ಮಾಡೋದು ಒಳ್ಳೆಯದು. ಅಂದ್ರೆ ನೆಲ್ಲಿಚೆಟ್ಟು ಅಂತ ಹೇಳ್ತಾರೆ. ನೆಲ್ಲಿಕಾಯಿ ಒಣಗಿರತಕ್ಕಂತ ನೆಲ್ಲಿಕಾಯಿಯ ಪುಡಿಯಿಂದ ಮೈಯನ್ನು ಚೆನ್ನಾಗಿ ಉಜ್ಜಿಕೊಂಡು ಸ್ನಾನವನ್ನು ಮಾಡತಕ್ಕಂತದ್ದು. ಸೋಪು ಶಾಪು ಬಳಸೋದು ಬಳಸಿ, ಅದು ಆದ ನಂತರದಲ್ಲಿ ಒಂದಿಷ್ಟು ನೆಲ್ಲಿಚೆಟ್ಟನ್ನು ತೆಗೆದುಕೊಂಡು ಮೈಗೆ, ಮುಖಕ್ಕೆ ಸವರಿಕೊಂಡು ಸ್ನಾನವನ್ನು ಮಾಡತಕ್ಕಂತದ್ದು ಅತ್ಯಂತ ಶ್ರೇಯಸ್ಕರ. ಯಾಕೆಂದರೆ ಆ ನೆಲ್ಲಿಕಾಯಿ ಇದೆಯಲ್ಲ, ಅದು ಲಕ್ಷ್ಮಿಯ ಆವಾಸಸ್ಥಾನವಾಗಿದೆ ಅಂತ ಶಾಸ್ತ್ರ ಹೇಳುತ್ತೆ. ಆ ರೀತಿಯಾಗಿ ಸ್ನಾನವನ್ನು ಮಾಡಿ ಮಡಿ ಬಟ್ಟೆಯನ್ನು ಉಡಬೇಕು. ಅಂದ್ರೆ ಯಾರನ್ನು ಮುಟ್ಟದೆ ಹಿಂದಿನ ದಿವಸ ಅರೆದಿರತಕ್ಕಂತಹ ಒಂದು ಸೀರೆಯನ್ನು, ಪಂಚೆಯನ್ನು ಇತ್ಯಾದಿಗಳನ್ನು ನಾವು ಬಹಳ ಭಕ್ತಿ ಶ್ರದ್ಧೆಯಿಂದ ಅದನ್ನು ಧಾರಣೆ ಮಾಡಿ ಪೂಜಾಗೃಹಕ್ಕೆ ಹೋಗಬೇಕು. ಪೂಜಾಗೃಹದಲ್ಲಿ ಆ ಮಹಾ ವರಮಹಾಲಕ್ಷ್ಮಿಯನ್ನು ಸ್ಥಾಪನೆ ಮಾಡತಕ್ಕಂತಹ ಸ್ಥಳವನ್ನು ಏನು ಹೇಳುತ್ತೆ? ದರ್ಪಣ ಸದೃಶ್ಯಂ ಅಂತ ಹೇಳುತ್ತೆ. ಅಂದ್ರೆ ನೀವು ಮುಖ ನೋಡಿಕೊಂಡ್ರೆ ಸ್ಥಳದಲ್ಲಿ ನಿಮ್ಮ ಮುಖ ಕಾಣಬೇಕು, ಕನ್ನಡಿಯ ತರ ಆ ಒಂದು ಸ್ಥಳವನ್ನು ಶುದ್ಧಿ ಮಾಡಬೇಕಂತೆ. ಹಿಂದಿನ ಕಾಲದಲ್ಲಿ ಕಷ್ಟ ಇತ್ತು. ಗೋಮಯೇನ ಉಪಲಿಪ್ಯ ಅಂತ ಹೇಳ್ತಾರೆ, ಅಂದ್ರೆ ಹಸುವಿನ ಸಗಣಿಯನ್ನು ಸಾರಿಸು. ಈಗಿನ ಕಾಲದಲ್ಲಿ ಎಲ್ಲ ಏನಾಗಿದೆ, ಗ್ರಾನೈಟ್ ಟೈಲ್ಸ್ ಬಂದ್ಬಿಟ್ಟು ಈಗಾಗಲೇ ಪರಿಶುಭ್ರವಾಗಿ ಶುದ್ಧವಾಗಿರುತ್ತೆ. ಅದನ್ನು ಚೆನ್ನಾಗಿ ಒರೆಸಬೇಕು. ಸ್ವಲ್ಪ ಅರಿಶಿನ ನೀರನ್ನು, ಗಂಗಾಜಲವನ್ನು ಅಥವಾ ಒಳ್ಳೆಯ ಗೋಮೂತ್ರವನ್ನು ಸಿಂಪಡಣೆ ಮಾಡಿ ಅದನ್ನು ಚೆನ್ನಾಗಿ ಒರೆಸಿ ಆ ಸ್ಥಳದಲ್ಲಿ ಎಂಟು ದಳದ ಒಂದು ಪದ್ಮವನ್ನು ರಚನೆ ಮಾಡಬೇಕು. ಮಧ್ಯದಲ್ಲಿ ಒಂದು ವೃತ್ತ, ಪೂರ್ವ, ಆಗ್ನೇಯ, ದಕ್ಷಿಣ, ನೈಋತ್ಯ, ಪಶ್ಚಿಮ, ವಾಯುವ್ಯ, ಉತ್ತರ, ಈಶಾನ್ಯದಲ್ಲಿ ಎಂಟು ದಳವನ್ನು ಚಿಕ್ಕದಾಗಿ ಬರೆದರೂ ಸಾಕು. ಪುಟಾಣಿಯಾಗಿ ಇಷ್ಟು ಬರೆದರೂ ಪರವಾಗಿಲ್ಲ, ದೊಡ್ಡದಾಗಿ ಬರೆದರೂ ಅಡ್ಡಿ ಇಲ್ಲ. ಬರೆದು ನಿಮಗೆ ಸಾಧ್ಯವಾದರೆ ಅದರಲ್ಲಿ ಐದು ಬಣ್ಣದ ರಂಗೋಲಿಯನ್ನು ತುಂಬಬೇಕು ಅಥವಾ ಐದು ಬಣ್ಣಗಳನ್ನು ತುಂಬಬೇಕು. ಪಂಚವರ್ಣ ರಂಗವಲ್ಯಾದಿಭಿಃ ಅಲಂಕೃತ್ಯ ಅಂತ ಹೇಳುತ್ತೆ. ಐದು ಬಣ್ಣದ ರಂಗವಲ್ಯದಿಂದ ಅಲಂಕರಣೆ ಮಾಡ್ರಪ್ಪ ಅಂತ ಹೇಳುತ್ತೆ ಶಾಸ್ತ್ರ. ಆ ರೀತಿಯಾಗಿ ಮಾಡಿ ಅದರ ಮೇಲೆ ಒಂದು ಪೀಠವನ್ನು, ಮಂಟಪವನ್ನು, ಏನಾದರೂ ಒಂದು ಪದಾರ್ಥವನ್ನು ಇಟ್ಟು ಒಂದು ತಟ್ಟೆಯಲ್ಲಿ ಅಥವಾ ಒಳ್ಳೆಯ ಎಲೆಯಲ್ಲಿ ತಟ್ಟೆ ಆಗಿರಬಹುದು. ತಟ್ಟೆಗಳಲ್ಲಿ ಯಾವುದು ಶ್ರೇಷ್ಠ? ಬೆಳ್ಳಿ ಶ್ರೇಷ್ಠ, ಹಿತ್ತಾಳೆ ಶ್ರೇಷ್ಠ, ತಾಮ್ರ ಶ್ರೇಷ್ಠ. ಅಥವಾ ಮೃಣ್ಮಯವಾದ ಯಾವುದೋ ಮಣ್ಣಿನಿಂದ ಮಾಡಿರತಕ್ಕಂತಹ ಶರಾವೆ ಅಂತೀವಿ, ಅದು ಕೂಡ ಶ್ರೇಷ್ಠ. ಇಲ್ಲಿ ಸ್ಟೇನ್ಲೆಸ್ ಸ್ಟೀಲ್ನ ಪ್ರಸಕ್ತಿ ಕೂಡದು. ಆದಷ್ಟು ಇದನ್ನು ನಾವು ಬಿಡಬೇಕು. ಅದು ವರ್ಜ್ಯ ಅಂತ ಹೇಳುತ್ತೆ ಶಾಸ್ತ್ರ. ಇಲ್ಲಪ್ಪ, ಇದು ಯಾವುದು ನಮ್ಮ ಮನೆಯಲ್ಲಿ ಇಲ್ಲ ಅಂದ್ರೆ ಏನು ಮಾಡಬಹುದು ಅಂತಂದ್ರೆ ಬಾಳೆ ಎಲೆಯನ್ನು ಹಾಸಬೇಕು. ಎರಡು ಎಲೆಯನ್ನು ಹಾಸಬೇಕು ಅಥವಾ ಎರಡು ಮುತ್ತುಗದ ಎಲೆಯನ್ನು ಹಾಸಬೇಕು. ಅದರ ಮೇಲೆ ಅಕ್ಕಿಯನ್ನು ಹರಡಿ, ಆ ಅಕ್ಕಿಯ ಮೇಲೆ ನಿಮ್ಮ ಶಕ್ತ್ಯಾನುಸಾರ, ಭಕ್ತ್ಯಾನುಸಾರವಾಗಿ ಅಲ್ಲಿ ಬೆಳ್ಳಿಯ ಕಲಶವನ್ನು, ಚೆನ್ನಾಗಿ ತೊಳೆದಿರತಕ್ಕಂತಹ ಬೆಳ್ಳಿಯ ಕಲಶವನ್ನು, ತಾಮ್ರದ ಕಲಶವನ್ನು, ಹಿತ್ತಾಳೆಯ ಕಲಶವನ್ನು ಅಥವಾ ಮಣ್ಣಿನ ಕಲಶವನ್ನು ಸ್ಥಾಪನೆ ಮಾಡಬೇಕು. ಅದರ ಮೇಲೆ, ಅದರ ಒಳಗೆ ಬಹಳ ಮುಖ್ಯವಾಗಿರುವ ಪದಾರ್ಥಗಳನ್ನು ಹೇಳ್ತೇನೆ. ಕೆಲವರು ಏನು ಹೇಳ್ತಾರೆ ಅಂದ್ರೆ ನೀರು ಹಾಕಿಬಿಟ್ಟು ಅದರಲ್ಲಿ ಪೂಜೆ ಮಾಡಿ ಅಂತಕ್ಕಂತದ್ದು ನನಗೆ ಕೆಲವು ದುರ್ಗೋಚರವಾಗಿದೆ. ಶಾಸ್ತ್ರದಲ್ಲಿ ಮತ್ತು ಸಂಪ್ರದಾಯಬದ್ಧವಾಗಿರತಕ್ಕಂತಹ ನಡವಳಿಕೆ ಅದು ಅಲ್ಲ, ಹೇಳಿದ್ದೇನೆ. ಅದರಲ್ಲಿ ತುಂಬಿಸಬೇಕಾಗಿರತಕ್ಕಂತದ್ದು ಏನು ಅಂತಂದ್ರೆ ಐದು ಅಳತೆಯ ಅಕ್ಕಿ. ಒಂದು ಯಾವುದಾದರೂ ಒಂದು ಚಿಕ್ಕದಾಗಿರತಕ್ಕಂತಹ ಪಾತ್ರೆ ಇಟ್ಕೋಬೇಕು, ಕಪ್ ಅಂತ ಕರೀತೀವಲ್ಲ ಆ ತರದ್ದು, ಅಥವಾ ನಿಮ್ಮ ಕೈಯಲ್ಲಿ ಒಂದು ಮುಷ್ಟಿ ಅಂತ ಇಟ್ಕೋಬಹುದು, ಅಥವಾ ಬೊಗಸೆ ಅಂತ ಇಟ್ಕೋಬಹುದು. ಕಲಶ ಎಷ್ಟು ದೊಡ್ಡದಿದೆ ಅಂತ ನೋಡಿಕೊಂಡು ತುಂಬಿಸಬೇಕು. ಐದು ಅಳತೆಯ ಅಕ್ಕಿಯನ್ನು, ಅದರೊಳಗೆ ಐದು ಅಡಿಕೆಯನ್ನು, ಐದು ಅರಿಶಿನದ ಕೊಂಬನ್ನು ಮತ್ತು ಐದು ವಿಧದ ಹಣ್ಣುಗಳನ್ನು ಹಾಕಬೇಕು. ಹಣ್ಣು ಅದರಲ್ಲಿ ಎಷ್ಟು ಹಿಡಿಸುತ್ತೆ, ದೊಡ್ಡ ದೊಡ್ಡದು ಅಲ್ಲ, ಚಿಕ್ಕ ಚಿಕ್ಕದು ಸಿಗುತ್ತೆ. ಇಷ್ಟೇ ಇಷ್ಟೊಂದು ಚೇಪೆಕಾಯಿ, ಸೀಬೆಕಾಯಿ ಅಂತೀವಲ್ಲ, ಅದನ್ನು, ಐದು ಪುಟಾಣಿ ಬಾಳೆಹಣ್ಣನ್ನು ಮತ್ತು ಐದು ಖರ್ಜೂರವನ್ನು, ಐದು ದ್ರಾಕ್ಷಾಫಲವನ್ನು ಮತ್ತು ಐದು ನಿಂಬೆಹಣ್ಣು. ಈ ಐದು ವಿಧವಾಗಿರತಕ್ಕಂತಹ ಹಣ್ಣುಗಳನ್ನು ಅದರಲ್ಲಿ ಹಾಕಬೇಕು. ಮತ್ತು ಎರಡು ಎಲೆ, ಎರಡು ಅಡಿಕೆಯನ್ನು ಮಡಚಿ ಅದರಲ್ಲಿ ಹಾಕಬೇಕು. ಅರಿಶಿನ ಕುಂಕುಮವನ್ನು ಹಾಕಬೇಕು. ಇದರಲ್ಲಿ ಒಂದು ಜವಾಬ್ದಾರಿಯನ್ನು ವಹಿಸಿ ಮಾಡಬೇಕು. ಇದರ ಒಳಗಡೆಗೆ ಪ್ಲಾಸ್ಟಿಕ್ ಪದಾರ್ಥಗಳನ್ನು ಹಾಕತಕ್ಕಂತದ್ದು ನಾವು ಬಿಡಬೇಕು. ಅರಿಶಿನ ಕುಂಕುಮ ಹಾಕುವ ತಕ್ಷಣ ಆ ಪ್ಲಾಸ್ಟಿಕ್ ಕವರ್ ಇರತಕ್ಕಂತದ್ದನ್ನು ಹಾಕತಕ್ಕಂತದ್ದನ್ನು ಕೆಲವರು ಮಾಡ್ತಾರೆ, ಅದು ಕೂಡದು. ಅದನ್ನು ಎಲೆಯಲ್ಲಿ ಕಟ್ಟಿ ಹಾಕಿ, ವಿಳೆದೆಲೆಯಲ್ಲಿ ಕಟ್ಟಿ ಹಾಕಬಹುದು. ಮತ್ತು ತಾಳೆಗರಿಯ ಬಳೆ ಮತ್ತು ಬಿಚ್ಚೋಲೆ ಸಿಗುತ್ತೆ ಅಂಗಡಿಯಲ್ಲಿ, ಗ್ರಂಥಿಗೆ ಅಂಗಡಿಯಲ್ಲಿ ಸಿಗುತ್ತೆ. ಅದನ್ನು ಹಾಕಬೇಕು. ಮತ್ತು ಅದರಲ್ಲಿ ಇನ್ನೂ ಹಾಕತಕ್ಕಂತದ್ದು ಏನು ಅಂದ್ರೆ ಒಳ್ಳೆಯ ಕನ್ನಡಿಯನ್ನು, ಒಳ್ಳೆಯ ಬಾಚಣಿಗೆಯನ್ನು ಹಾಕಬೇಕು. ಬಾಚಣಿಗೆ ತಿರುಗ ಮತ್ತೆ ಪ್ಲಾಸ್ಟಿಕ್ದು ಹಾಕಿದ್ರೆ ಉಪಯೋಗ ಇಲ್ಲ, ಮರದ್ದು ಸಿಗುತ್ತೆ. ಬೆಳ್ಳಿಯಲ್ಲೂ ಸಿಗುತ್ತೆ, ಹಿತ್ತಾಳೆಯಲ್ಲೂ ಸಿಗುತ್ತೆ. ಅಂತಹದ್ದನ್ನು ಕೊಂಡುಕೊಂಡು ಅದರಲ್ಲಿ ಹಾಕಬೇಕು ಮತ್ತು ಸ್ವಲ್ಪ ಕಾಡಿಗೆಯನ್ನು ಅದರಲ್ಲಿ ಹಾಕಬೇಕು. ಇಷ್ಟನ್ನು ಹಾಕಿದ ನಂತರದಲ್ಲಿ ಏನು ಮಾಡಬೇಕು, ಆ ಕಲಶದ ಮೇಲ್ಭಾಗದಲ್ಲಿ ಐದು ವಿಳೆದೆಲೆಯನ್ನು, ಐದು ಮಾವಿನ ಎಲೆಯನ್ನು ಇಡಬೇಕು. ಪಲ್ಲವ ಅಂತ ಕರೀತಾರೆ. ಅಷ್ಟನ್ನು ಇಟ್ಟು ಬಹಳ ಚೆನ್ನಾಗಿ ಅಲಂಕಾರ ಮಾಡಿದಂತಹ ಒಂದು ಕಾಯಿಯನ್ನು ಆ ಎಲೆಯ ಮೇಲೆ ಇಡಬೇಕು. ಆ ಕಾಯಿಗೆ ಏನು ಮಾಡಿರಬೇಕು, ಚೆನ್ನಾಗಿ ಗುಂಜನ್ನು ಜುಟ್ಟು ಬಿಟ್ಟು ಮಿಕ್ಕಿದ್ದೆಲ್ಲವನ್ನು ತೆಗೆದು ಪೂರ್ತಿ ಅರಿಶಿನವನ್ನು ಹಚ್ಚಿ ಮತ್ತೆ ಮಧ್ಯದಲ್ಲಿ ಕುಂಕುಮ, ಕುಂಕುಮದ ಮೇಲ್ಭಾಗದಲ್ಲಿ ಸ್ವಲ್ಪ ಸಿಂಧೂರ ಚೂರ್ಣವನ್ನು ಇಟ್ಟು ಆ ಜುಟ್ಟಿನ ಮೇಲೆ ಅದ್ಭುತವಾಗಿರತಕ್ಕಂತಹ ಘಮಘಮಿಸುವ ಜಾಜಿ, ಮಲ್ಲಿಗೆ ಇತ್ಯಾದಿ ಶುಭಕರವಾಗಿರತಕ್ಕಂತಹ ಒಂದು ಹೂವಿನ ಮಾಲೆಯನ್ನು ಮುಡಿಸಿ, ಸಿಂಬೆ ಅಂತ ಹೇಳ್ತೀವಲ್ಲ ಆ ರೀತಿಯಾಗಿ ಮಾಡಿ ಇಟ್ಟು ಆನಂತರದಲ್ಲಿ ಏನು ಮಾಡಬೇಕು, ಕಲಶಕ್ಕೆ ಒಂದು ಮಾಂಗಲ್ಯವನ್ನು ಕಟ್ಟಬೇಕು. ಅದು ಬಂಗಾರದ ಮಾಂಗಲ್ಯವಾದರೆ ಅತ್ಯಂತ ಉತ್ತಮ. ಅದನ್ನು ಮನೆಯಲ್ಲಿ ಹಾಗೆ ಪೂಜೆಗೆ ತೆಗೆದಿಟ್ಟುಬಿಡೋದು, ವರಮಹಾಲಕ್ಷ್ಮಿ ಅಮ್ಮನವರ ಸ್ವತ್ತು ಅಂತ ತೆಗೆದು ಇಡತಕ್ಕಂತದ್ದು. ಇಲ್ಲ ನಮಗೆ ಶಕ್ತಿ ಇಲ್ಲ ಅಂದ್ರೆ ಬೆಳ್ಳಿಯ ಮಾಂಗಲ್ಯವನ್ನು ಕಟ್ಟಬಹುದು. ಇಲ್ಲ ನಮಗೆ ಅದಕ್ಕೂ ಶಕ್ತಿ ಇಲ್ಲ ಅಂತಂದ್ರೆ ಏನು ಮಾಡಬಹುದು? ಅರಿಶಿನದ ದಾರದಲ್ಲಿ ಒಂದು ಅರಿಶಿನದ ಕೊಂಬನ್ನು ಕಟ್ಟಿ ಆ ಕಲಶದ ಕಂಠಕ್ಕೆ ಅದನ್ನು ಕಟ್ಟತಕ್ಕಂತದ್ದು ಮಾಡಬೇಕು. ಇಷ್ಟನ್ನು ಆದ ನಂತರದಲ್ಲಿ ಏನು ಮಾಡಬೇಕು ಅಂದ್ರೆ ಬಹಳ ಮುಖ್ಯವಾಗಿ ಸುಮಾರು ಜನರು ಇದನ್ನು ಪದ್ಧತಿ ಬಿಟ್ಟು ಹೋಗಿದ್ದಾರೆ. ಈ ಅಮ್ಮನವರ ಕಲಶವನ್ನು ಇಷ್ಟು ಸಿದ್ಧತೆ ಮಾಡಿಕೊಂಡ ನಂತರದಲ್ಲಿ ಆ ಕಲಶವನ್ನು, ಆ ಕೆಳಗಡೆ ಇರತಕ್ಕಂತಹ ಅಕ್ಕಿಯನ್ನು ಬಿಟ್ಟು ಬೇರೆ ಇನ್ನೊಂದು ಪಾತ್ರೆಯಲ್ಲಿ ಇಟ್ಕೊಂಡು ಮನೆಯ ಹೊರಭಾಗಕ್ಕೆ ಹೋಗಿ ಅಲ್ಲಿ ಸ್ಥಳವನ್ನು ಶುದ್ಧಿ ಮೊದಲೇ ಮಾಡಿಕೊಂಡಿರಬೇಕು. ಅಲ್ಲಿ ಒಂದು ಏನು ಮಾಡ್ತಾರೆ, ಹಸೆ ರಂಗೋಲಿ ಅಂತ ಹೇಳ್ತಾರೆ. ಈಗ ನೋಡಿದರೆ ನಿಮಗೆ ಆನ್ಲೈನ್ನಲ್ಲಿ ಸಿಗತಕ್ಕಂತಹ ಸಾಧ್ಯತೆಗಳಿರುತ್ತೆ. ಒಂದು ಹಸೆ ರಂಗೋಲಿಯನ್ನು ಹಾಕಬೇಕು. ಇಲ್ಲಪ್ಪ ನನಗೆ ಆಗಲಿಲ್ಲ ಅಂದ್ರೆ ಅಲ್ಲೂ ಕೂಡ ಒಂದು ಅಷ್ಟದಳದ ಪದ್ಮವನ್ನು ನೀವು ರಚನೆ ಮಾಡಬಹುದು. ಮಾಡಿ ಮತ್ತೆ ಅಲ್ಲೊಂದು ಪೀಠವನ್ನು ಹಾಕಿ ಈ ಕಲಶವನ್ನು ಅಲ್ಲಿಟ್ಟು ಯಮುನಾ ಪೂಜೆ ಅಂತಕ್ಕಂತದ್ದನ್ನು ಮಾಡಬೇಕು. ಯಮುನಾ, ಗಂಗಾ ಮತ್ತು ಯಮುನಾ ಮಹಾನದಿಗಳು ನಮ್ಮಲ್ಲಿ ಅದಕ್ಕೆ ದೊಡ್ಡದಾಗಿರತಕ್ಕಂತಹ ಯೋಗಿಕವಾದ ಅರ್ಥ ಇದೆ, ಅದರ ಗೋಜಿಗೆ ನಾವು ಹೋಗೋದು ಬೇಡ ಈಗ. ಶಾಸ್ತ್ರದಲ್ಲಿ ವ್ರತಕಲ್ಪದಲ್ಲಿ ಹೇಳಿರತಕ್ಕಂತ ನಿಯಮ ಏನು ಅಂತಂದ್ರೆ ಅಲ್ಲಿ ಯಮುನಾದೇವಿಯ ಪೂಜೆಯನ್ನು ಮಾಡಬೇಕು. ಯಮುನೆ ಆಕೆ ಸೂರ್ಯನ ಮಗಳು. ಸೂರ್ಯ ಯಾವ ರೀತಿಯಾಗಿ ಆರೋಗ್ಯವನ್ನು ನಮಗೆ, ಅನ್ನವನ್ನು ನೀಡ್ತಾ ಇದ್ದಾನೋ, ಸರ್ವಪಾಪವನ್ನು ಕ್ಷಯ ಮಾಡ್ತಾನೋ, ಅದೇ ರೀತಿಯಾಗಿ ಯಮುನೆಯೂ ಕೂಡ ಅದೇ ಕೆಲಸವನ್ನು ಮಾಡತಕ್ಕಂತವಳು ಆಗಿದ್ದಾಳೆ. ಆ ಯಮುನಾಂಬಿಕೆಯನ್ನು ಆವಾಹನೆ ಮಾಡಿ ನಿಮ್ಮ ಶಕ್ತ್ಯಾನುಸಾರ ಷೋಡಶೋಪಚಾರ ಪೂಜೆಯನ್ನು ಮಾಡಿಕೊಂಡು ಮನೆಯ ಒಳಗೆ ವರಮಹಾಲಕ್ಷ್ಮಿಯನ್ನು ಕರೆದುಕೊಂಡು ಬರಬೇಕು. ಅವಾಗ ಏನು ಮಾಡಬೇಕು, ಹೊಸ್ತಿಲಿನ ಮೇಲೆ ಒಂದು ಪಾವನ್ನಿಟ್ಟು ಅದರ ತುಂಬಾ ಅಕ್ಕಿಯನ್ನು ತುಂಬಿ ಮೇಲ್ಗಡೆ ಒಂದು ಬೆಲ್ಲದ ಅಚ್ಚು ಅಥವಾ ಒಂದು ನಿಂಬೆಹಣ್ಣನ್ನು ಇಟ್ಟು ಮನೆಯಲ್ಲಿ ಇರತಕ್ಕಂತಹ ಗಂಡಸರಾದರೂ, ಹೆಂಗಸರಾದರೂ ಆಗಿರಬಹುದು, ಒಂದು ಆರತಿಯನ್ನು ಬೆಳಗಬೇಕು. ಎರಡು ತುಪ್ಪದ ದೀಪದ ಆರತಿಯನ್ನು ಹಾಡು ಹೇಳಿಕೊಂಡು ಅಥವಾ ದೇವರ ಸ್ತೋತ್ರವನ್ನು ಮಾಡಿಕೊಂಡು ಆ ವರಮಹಾಲಕ್ಷ್ಮಿ ಕಲಶಕ್ಕೆ ಆರತಿಯನ್ನು ಮಾಡಿ, ಆ ಕಲಶದಿಂದ ಅಮ್ಮನವರು ಇದ್ದಾಳೆ, ಕಲಶದ ಒಳಗೆ ಅಮ್ಮನವರು ಇದ್ದಾಳೆ ಅಂತಕ್ಕಂತಹ ಒಂದು ಪ್ರಗಾಢವಾಗಿರತಕ್ಕಂತಹ ಭಾವನಾಪೂರಿತವಾದ ಹೃದಯದಿಂದ ಏನು ಮಾಡಬೇಕು, ಆ ಹೊಸ್ತಿಲಲ್ಲಿ ಇಟ್ಟಿರತಕ್ಕಂತಹ ಆ ಒಂದು ಪಾವನ್ನು ಹೀಗೆ ಅಮ್ಮನವರು ಬಲಗಾಲಿನಿಂದ ಒದೆಯುತ್ತಿದ್ದಾಳೆ ಅಂತ ಅಂದುಕೊಂಡು ಮನೆಯ ಒಳಗಡೆಗೆ ಬಲಗಾಲನ್ನು ಇಟ್ಟು ಒಳಗೆ ಬರಬೇಕು. ಯಾರಾದರೂ ಒಬ್ಬರು ಗಂಟೆಯನ್ನು ಶಬ್ದ ಮಾಡ್ತಾ ಇರಬೇಕು. ಗಂಟೆ ಆಗಿರಬಹುದು, ಶಂಖ ಆಗಿರಬಹುದು, ಜಾಗಟೆ ಆಗಿರಬಹುದು ಅಥವಾ ಚಪ್ಪಾಳೆ ಆಗಿರಬಹುದು ಅಥವಾ ಜೈಕಾರ ಆಗಿರಬಹುದು. “ವರಮಹಾಲಕ್ಷ್ಮಿ ಅಮ್ಮನವರಿಗೆ ಜಯವಾಗಲಿ” ಅಂತ ಹೇಳಿ ಪ್ರಾರ್ಥನೆಯನ್ನು ಮಾಡಿಕೊಂಡು ಬಂದು ಈ ಹಿಂದೆ ಸ್ಥಳದಲ್ಲಿ ಅಕ್ಕಿಯನ್ನು ಹರಡಿದ್ವಲ್ಲ ಅದರ ಮೇಲೆ ಮತ್ತೆ ಈ ಕಲಶವನ್ನು ಇಟ್ಟು ಅಮ್ಮನವರ ಪೂಜೆಯನ್ನು ನಾವು ಪ್ರಾರಂಭ ಮಾಡಬೇಕು. ಈ ಒಳಗೆ ಬಂದ ನಂತರದಲ್ಲಿ ಅಮ್ಮನವರ ಪೂಜಾ ಸಾಮಗ್ರಿಗಳಲ್ಲಿ ಅತ್ಯಂತ ಪ್ರಮುಖವಾಗಿರತಕ್ಕಂತದ್ದು ಯಾವುದು ಅಂದ್ರೆ ಕಮಲದ ಹೂ, ತಾವರೆ ಹೂ ಮತ್ತು ಬಿಲ್ವಪತ್ರೆ. ಸುಮಾರು ಜನರಿಗೆ ಇದು ಗೊತ್ತಿರಲಿಕ್ಕಿಲ್ಲ. ಯಾರು ವರಮಹಾಲಕ್ಷ್ಮಿ ಹಬ್ಬದ ದಿವಸ ಅಮ್ಮನವರಿಗೆ ತಾವರೆ ಹೂವಿನಿಂದ ಅಥವಾ ಬಿಲ್ವಪತ್ರೆಯಿಂದ ಅಥವಾ ಎರಡರಿಂದಲೂ ಕೂಡ ಕಮಲಾಷ್ಟೋತ್ತರ ಶತನಾಮಾವಳಿ ಅಂತ ಒಂದು ಅಷ್ಟೋತ್ತರ ಶತನಾಮಾವಳಿ ಉಂಟು. ಅದನ್ನು ಹೇಳಿಕೊಂಡು ಪೂಜೆ ಮಾಡಿದರೆ ಅವರು ಎಂತಹ ದರಿದ್ರರಾಗಿದ್ದರೂ ಕೂಡ ಅವರ ದರಿದ್ರವು ದಿನೇ ದಿನೇ ದಿನೇ ದಿನೇ ನೀಗಿಕೊಂಡು ಬರುತ್ತೆ, ಕಡಿಮೆ ಆಗ್ತಾ ಹೋಗುತ್ತೆ ಅಂತ ಹೇಳಿ ಶಾಸ್ತ್ರದಲ್ಲಿ ಬಹಳ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ. ಸರ್ವಾಭೀಷ್ಟ ಪ್ರದಾಯಿನಿ ಅಂತ ಹೇಳ್ತಾರೆ, ಅಂದ್ರೆ ಅಂದುಕೊಂಡಿದ್ದನ್ನು ಕೊಡತಕ್ಕಂತಹ ಜಗನ್ಮಾತೆಯಾಗಿದ್ದಾಳೆ ವರಮಹಾಲಕ್ಷ್ಮಿ ಅಮ್ಮನವರು ಅಂತಕ್ಕಂತದ್ದು. ಅದರ ಜೊತೆಯಲ್ಲಿ ದೋರಗ್ರಂಥಿ ಪೂಜೆ ಅಂತ ಒಂದಿದೆ. ದಾರವನ್ನು ಪೂಜೆ ಮಾಡಿ ಅಮ್ಮನವರ ಮುಂದೆ ಇಟ್ಟು ಅದನ್ನು ಮಣಿಕಟ್ಟಿಗೆ ಕಟ್ಟಿಕೊಳ್ಳತಕ್ಕಂತಹ ಒಂದು ಪದ್ಧತಿ ಇದೆ ನಮ್ಮಲ್ಲಿ. ಪ್ರತಿಯೊಂದು ವ್ರತಕ್ಕೂ ಇದೆ. ಇಲ್ಲೇನು ಮಾಡಬೇಕು ಅಂದ್ರೆ 12 ಎಳೆಯ ದಾರ ಇರಬೇಕು, ಹಸಿ ದಾರ ಆಗಿರಬೇಕು. ಮನೆಯಲ್ಲಿ ಇರತಕ್ಕಂತ ಬಟ್ಟೆ ಹೊಲಿಯುವ ದಾರಾದಿಗಳು ಇಲ್ಲಿ ವರ್ಜ್ಯ. ಅದು ಮುಷ್ಟಿ, ಯಾರು ಕಟ್ಟಿಕೊಳ್ಳುತ್ತಾರೋ ಅವರಲ್ಲಿ ಮುಷ್ಟಿ. ಇದು ಒಂದು ಮುಷ್ಟಿ ಪ್ರಮಾಣ. ಒಂದು, ಎರಡು, ಮೂರು, ನಾಲ್ಕು, ಈ ರೀತಿಯಾಗಿ 12 ಎಳೆಯ, 12 ಮುಷ್ಟಿಯ ದಾರವನ್ನು ತೆಗೆದುಕೊಂಡು ಆ ದಾರಕ್ಕೆ ಏನು ಮಾಡಬೇಕು, 12 ಗಂಟನ್ನು ಹಾಕಬೇಕು. ಆ 12 ಗಂಟನ್ನು ಕೂಡ ಹಾಕಿ ನಾವು ಏನು ಮಾಡಬೇಕು, ಅಮ್ಮನವರ ಮುಂದೆ ಒಂದು ತಟ್ಟೆಯಲ್ಲಿ ಮತ್ತೆ ಒಂದು, ಎರಡು ವಿಳೆದೆಲೆ, ಎರಡು ಅಡಿಕೆಯನ್ನು ಇಟ್ಟು ಅದರ ಮೇಲೆ ಈ ದಾರವನ್ನು ಅರಿಶಿನದಿಂದ ಚೆನ್ನಾಗಿ ಹಚ್ಚಿ ಅದನ್ನು ಇಟ್ಟು, ಎಷ್ಟು ಜನ ಹೆಣ್ಣು ಮಕ್ಕಳು ಪೂಜೆ, ವ್ರತವನ್ನು ಮಾಡ್ತಾ ಇದ್ದಾರೋ ಅಷ್ಟು ದಾರಗಳನ್ನು ಬೇರೆ ಬೇರೆಯಾಗಿ ಇಟ್ಟು ಅದಕ್ಕೆ ಆನಂತರದಲ್ಲಿ ಹೂವು ಸೇರಿಸಿ ಕಟ್ಟಿಕೊಳ್ಳೋದು ಐಚ್ಛಿಕ. ಬೇಕಾದರೆ ಮಾಡಬಹುದು, ಇಲ್ಲಾಂದ್ರೆ ಬಿಡಬಹುದು. ಮೂಲದಲ್ಲಿ ಹೂವು ಸೇರಿಸಬೇಕು ಅಂತ ಹೇಳಿಲ್ಲ. ಇಷ್ಟೇ ಹೇಳಿರೋದು. ಅದನ್ನು ಇಟ್ಟು ಏನು ಮಾಡಬೇಕು, ನಿಮ್ಮ ಪುರೋಹಿತರಿಗೆ ಹೇಳಿ, ಅಮ್ಮನವರ ಅದ್ಭುತವಾಗಿರತಕ್ಕಂತಹ ದ್ವಾದಶ ನಾಮಾವಳಿ ಇದೆ. 12 ಹೆಸರಿನಿಂದ ಆ ಒಂದೊಂದು ಎಳೆಯಲ್ಲಿ ಮತ್ತು ಒಂದೊಂದು ಮುಷ್ಟಿಯಲ್ಲಿ, ಒಂದೊಂದು ಗಂಟಿನಲ್ಲಿ 12 ನಾಮದಿಂದ ವರಮಹಾಲಕ್ಷ್ಮಿಯನ್ನು ಆವಾಹನೆ ಮಾಡಿ ಅದಕ್ಕೂ ಕೂಡ ಪೂಜೆ ಮಾಡಬೇಕು. ಆಮೇಲೆ ವೈಶಿಷ್ಟ್ಯತೆ ಏನು ವರಮಹಾಲಕ್ಷ್ಮಿ ಹಬ್ಬದಲ್ಲಿ ಅಂತಂದ್ರೆ 12 ತರದ ಭಕ್ಷ್ಯ ಭೋಜ್ಯಗಳನ್ನು ಅಮ್ಮನವರಿಗೆ ನೈವೇದ್ಯ ಮಾಡಬೇಕು. ರವೆ ಉಂಡೆ ಆಗಿರಬಹುದು, ಬೇಸನ್ ಉಂಡೆ ಆಗಿರಬಹುದು, ಕಡಬ ಆಗಿರಬಹುದು, ಹೋಳಿಗೆ ಆಗಿರಬಹುದು, ಮೈಸೂರು ಪಾಕ್ ಆಗಿರಬಹುದು, ಕೊಬ್ಬರಿ ಮಿಠಾಯಿ ಆಗಿರಬಹುದು, ಸೆವೆನ್ ಕಪ್ ಸ್ವೀಟ್ ಆಗಿರಬಹುದು. ಒಟ್ಟಿನಲ್ಲಿ 12 ಬಗೆಯ ಖಾದ್ಯಗಳನ್ನು ಮಾಡಿ. ಅದನ್ನೆಲ್ಲ ಮುಂಚೆಯೇ ಮಾಡಿಕೊಂಡಿರಬೇಕು. ಒಂದು ದಿವಸ, ಎರಡು ದಿವಸ ಮುಂಚೆ ಮಾಡಲಿಕ್ಕೆ ಏನು ಅಡ್ಡಿ ಇಲ್ಲ. ಕರಿದ ಪದಾರ್ಥಗಳಿಗೆ ಮೈಲಿಗೆ ಎಲ್ಲ, ಅದನ್ನು ಮತ್ತೆ ಯಾರು ಮುಟ್ಟಬಾರದು, ತಯಾರು ಮಾಡಿದ ನಂತರ ಅಷ್ಟೇ. ಅದನ್ನು ಅಮ್ಮನವರಿಗೆ ನೈವೇದ್ಯ ಮಾಡುವುದರೊಂದಿಗೆ ಐದು ಬಗೆಯ ಅನ್ನವನ್ನು ಅಮ್ಮನವರಿಗೆ ನೈವೇದ್ಯ ಮಾಡಬೇಕು. ಬರೀ ಅನ್ನ ಒಂದಾಯಿತು, ಚಿತ್ರಾನ್ನ ಎರಡನೆಯದಾಯಿತು, ಮೊಸರನ್ನ ಮೂರನೆಯದಾಯಿತು, ಬೆಲ್ಲದನ್ನ ನಾಲ್ಕನೇ ಅನ್ನ ಆಯಿತು ಮತ್ತು ತುಪ್ಪದ ಅನ್ನ, ಜೀರಿಗೆ ಒಗ್ಗರಣೆ ಹಾಕಿರತಕ್ಕಂತಹ, ಮೆಣಸು ಜೀರಿಗೆ ಒಗ್ಗರಣೆ ಹಾಕಿರತಕ್ಕಂತಹ ಐದನೇ ಅನ್ನ. ಈ ಐದು ಅನ್ನಗಳನ್ನು ಆ ಪರಮೇಶ್ವರಿಗೆ ಇಟ್ಟು ಪೂಜೆಯನ್ನು ಮಾಡಬೇಕು, ನೈವೇದ್ಯವನ್ನು ಮಾಡಬೇಕು, ಎಡೆ ಇಡಬೇಕು ಅಮ್ಮನವರಿಗೆ. ಇದಾದ ನಂತರದಲ್ಲಿ ಏನು ಮಾಡಬೇಕು ಅಂತಂದ್ರೆ ಆ ದೋರಗ್ರಂಥಿ ಯಾವುದು, 12 ಎಳೆ, 12 ಮುಷ್ಟಿ, 12 ಗಂಟು ಹಾಕಿದ್ದೀವಲ್ಲ, ಅದನ್ನು ಏನು ಮಾಡಬೇಕು, ಗಂಡನಿಂದ ಕಟ್ಟಿಸಿಕೊಳ್ಳಬೇಕು. ಯಾರು ಮದುವೆಯಾದಂತಹ ಸುವಾಸಿನರು, ಯಾರು ಪೂಜೆ ಮಾಡಿರ್ತಾರೆ, ಆತನಿಗೆ ನಿಮಗೆ ಭಾವನೆ ಇದ್ದರೆ ನಮಸ್ಕಾರವನ್ನು ಮಾಡಿ, ಇಲ್ಲದೆ ಇದ್ದರೆ ಅದನ್ನು ಕಟ್ಟಿಸಿಕೊಳ್ಳಬೇಕು. ಕಟ್ಟಿಸಿಕೊಳ್ಳಬೇಕಾದರೆ ಏನು ಮಾಡಬೇಕು ಅಂದ್ರೆ ನಿಮ್ಮ ಕೈಯಲ್ಲಿ ವಿಳೆದೆಲೆ, ಅಡಿಕೆ ಮತ್ತು ಒಂದು ಫಲ ಇರಬೇಕು. ಫಲ ಅಂದ್ರೆ ತೆಂಗಿನಕಾಯಿ ಆದರೆ ಶ್ರೇಷ್ಠ. ಇಲ್ಲದೆ ಇದ್ದರೆ ಬೇರೆ ಯಾವುದಾದರೂ ಹಣ್ಣನ್ನು ಇಟ್ಟುಕೊಂಡು ಈ ಕೈಗೆ ದೋರವನ್ನು, ದೋರಬಂಧ, ದೋರಬಂಧನ ಅಂತ ಅದಕ್ಕೆ ಹೆಸರು, ಅದನ್ನು ಕಟ್ಟಿಸಿಕೊಳ್ಳಬೇಕು. ಕಟ್ಟಬೇಕಾದರೆ ಏನು ಮಾಡಬೇಕು, ಮನಸ್ಸಿನಲ್ಲಿ ಪ್ರಾರ್ಥನೆ. ಅದಕ್ಕೆ ಶ್ಲೋಕ ಇದೆ. ನಿಮ್ಮ ಪುರೋಹಿತರು ಹೇಳಿದರೆ ಹೇಳಿಕೊಡ್ತಾರೆ. ನೀವು ಹೇಳಿ, ಅವರಿಗೆ ಹೇಳಬೇಕು, “ಸ್ವಾಮಿ, ಹೇಳಿಕೊಡಿ, ನಾವು ಹೇಳ್ತೀವಿ” ಅಂತ. ಅವರು ಹೇಳಿದರೆ ಫಲ ಅಲ್ಲ, ಅದನ್ನು ಕಟ್ಟಿಸಿಕೊಳ್ಳಬೇಕು. ಕಟ್ಟಿಸಿಕೊಳ್ಳಬೇಕಾದರೆ ಏನು ಪ್ರಾರ್ಥನೆ ಅಂದ್ರೆ, “ಅಮ್ಮ, ಈ ಜನ್ಮವಾಗಿ ಇರತಕ್ಕಂತಹ ತೊಂದರೆಯನ್ನು, ದರಿದ್ರವನ್ನು ನೀಗಿ ನನಗೆ ಸಕಲ ಸೌಭಾಗ್ಯವನ್ನು, ಮುತ್ತೈದೆತನವನ್ನು ಮತ್ತು ಧನಧಾನ್ಯ ಅಭಿವೃದ್ಧಿಯನ್ನು ಕೊಟ್ಟು ಕಾಪಾಡು ತಾಯಿ” ಅಂತ ಹೇಳಿ ಅದನ್ನು ಕಟ್ಟಿಸಿಕೊಳ್ಳಬೇಕು. ಮತ್ತೆ ಒಂದು ಪ್ರಾರ್ಥನೆ ಮಾಡಿ ಅಮ್ಮನವರಿಗೆ ಅರ್ಘ್ಯಾದಿಗಳನ್ನು, ಪುನರರ್ಘ್ಯವನ್ನು ಕೊಡತಕ್ಕಂತದ್ದು ಅಂತ ಆಗುತ್ತೆ. ಅದನ್ನು ಮಾಡಿ ಏನು ಮಾಡಬೇಕು, ಪೂಜೆ ಮಾಡಿಸಿದಂತಹ ಪುರೋಹಿತರಿಗೆ ಉಪಾಯನ ದಾನ ಅಂತಕ್ಕಂತದ್ದು ಕೊಡಬೇಕು. ಉಪಾಯನ ದಾನ ಅಂದ್ರೆ ಏನು ಅಂತಂದ್ರೆ ಒಂದು ಎಲೆಯಲ್ಲಿಯೋ, ತಟ್ಟೆಯಲ್ಲಿಯೋ ನಿಮ್ಮ ಶಕ್ತ್ಯಾನುಸಾರ ಅಕ್ಕಿಯನ್ನು, ಎರಡು ವಿಳೆದೆಲೆ, ಅಡಿಕೆಯನ್ನು ಎರಡು ಇಟ್ಟು ಅದರ ಮೇಲೆ ಎರಡು ತೆಂಗಿನಕಾಯಿಯನ್ನು ಇಟ್ಟು ಪಿತೃಶಾಟ್ಯ ವಿವರ್ಜಿತರಾಗಿ, ಅಂದ್ರೆ 10,000 ಸಂಭಾವನೆ ಕೊಡುವ ಶಕ್ತಿ ಇದ್ದರೂ ಕೂಡ 10 ರೂಪಾಯಿ ಇಟ್ಟರೆ ಫಲ ಬರುವುದಿಲ್ಲ. ಪೂಜೆ ಮಾಡಿಸಿದವರಿಗೆ ತೃಪ್ತಿಯಾಗಬೇಕು. ನಿಮ್ಮಲ್ಲಿ ಅಶಕ್ತರಾಗಿದ್ದರೆ ಅವರಿಗೆ ಹೇಳಬೇಕು, ನಮಗೆ ಶಕ್ತಿ ಇಲ್ಲ, ನಾವು ಇಷ್ಟು ಕೊಡ್ತೀವಿ ಅಂತ ಹೇಳಿ. ದಕ್ಷಿಣೆ ಸಮೇತವಾಗಿ ಅದನ್ನು ಬ್ರಾಹ್ಮಣನಿಗೆ ಕೊಟ್ಟು ಆತನ ಆಶೀರ್ವಾದವನ್ನು ಪಡೆದುಕೊಳ್ಳತಕ್ಕಂತದ್ದು. ಆನಂತರದಲ್ಲಿ ಮುತ್ತೈದೆಯರನ್ನು ಕರೆದು ಮನೆಗೆ ಅವರಿಗೆ ಅರಿಶಿನ, ಕುಂಕುಮ, ಬಳೆ, ಪಿಚ್ಚೋಲೆ ಮತ್ತು ಹಣ್ಣನ್ನು, ಹೂವನ್ನು, ಕಾಡಿಗೆ, ಯಥಾವಿಭವ ಸೀರೆ, ಕುಪ್ಪಸ ಏನು ಕೊಡ್ತೀರೋ ನಿಮಗೆ ಬಿಟ್ಟಿದ್ದು. ಅದನ್ನು ಮಾಡತಕ್ಕಂತದ್ದು. ಮಾಡುವುದರಿಂದ ಪರಮಹಾಲಕ್ಷ್ಮಿ ಅಮ್ಮನವರು ಏನು ಮಾಡ್ತಾಳೆ, ನಿಮ್ಮ ಅಷ್ಟು ದರಿದ್ರವನ್ನು, ಅಷ್ಟು ಕಷ್ಟಕಾರ್ಪಣ್ಯಗಳನ್ನು ನೀಗಿ ನಿಮಗೆ ಪರಮಾದ್ಭುತವಾಗಿರತಕ್ಕಂತಹ ಸೌಭಾಗ್ಯ, ಐಶ್ವರ್ಯವನ್ನು ಕೊಟ್ಟೇ ಕೊಡ್ತಾಳೆ ಆಕೆ. ಆದರೆ ನಮ್ಮ ಭಕ್ತಿ, ನಮ್ಮ ಶ್ರದ್ಧೆ ಮತ್ತು ನಾವು ಎಷ್ಟು ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತೀವಿ ಪೂಜೆಯಲ್ಲಿ ಅಂತಕ್ಕಂತದ್ದು ಬಹಳ ಪ್ರಮುಖವಾಗುತ್ತೆ ಇಲ್ಲಿ. ವೈಭವದಿಂದ ಮಾಡುವುದರಿಂದಲೇ ದೇವರು ಒಲಿಯುವುದಿಲ್ಲ. ಆದರೆ ಶಕ್ತಿ ಇದ್ದಾಗಲೂ ಕೂಡ ಶಕ್ತಿ ಇಲ್ಲದ ರೀತಿಯಲ್ಲಿ ಒಂದೇ ಒಂದು ಮೊಳ ಹೂವು ಇಡೋದು, ಎರಡೇ ಎರಡು ಕಮಲದ ಹೂವು ತರೋದು ಮಾಡಬಾರದು. ಶಕ್ತಿ ಇದ್ದವರು 1008 ಕಮಲದ ಹೂವನ್ನು ತಂದು ಸಹಸ್ರನಾಮಾವಳಿಯನ್ನು ಮಾಡಬಹುದು. ಇಲ್ಲ ಅಷ್ಟು ನಮಗೆ ಶಕ್ತಿ ಇಲ್ಲ ಅಂದ್ರೆ ಎಷ್ಟೋ ನಿಮಗೆ ಶಕ್ತಿ ಬಂದಷ್ಟು ತಾವರೆ ಹೂವನ್ನು ಇಟ್ಟು ಅಮ್ಮನವರಿಗೆ ಅರ್ಪಿಸೋದು. ಬಿಲ್ವಪತ್ರೆಯಿಂದ ಸಹಸ್ರನಾಮವನ್ನು ಮಾಡೋದು. ಇಲ್ಲ ಆಗೋದಿಲ್ಲ ಅಂತಂದ್ರೆ 108 ಬಿಲ್ವಪತ್ರೆಯಿಂದ ಕಮಲಾಷ್ಟೋತ್ತರ ಶತನಾಮಾವಳಿಯನ್ನು ಮಾಡತಕ್ಕಂತದ್ದು. ತಾವರೆ ಹೂವಿನಿಂದ 108 ಆದರೂ ಪ್ರಯತ್ನವನ್ನು ಮಾಡಿ. ಮಾಡಿದ್ರೆ ನಿಮಗೆ ಅನುಭವಕ್ಕೆ ಬರುತ್ತೆ. ಪೂಜಿಸಿದರೆ ದೇವರು, ಲಾಲಿಸಿದರೆ ಮಕ್ಕಳು ಅಂತ ಹೇಳಿ. ಈ ರೀತಿಯಾಗಿ ವರಮಹಾಲಕ್ಷ್ಮಿ ಅಮ್ಮನವರ ಈ ವ್ರತವನ್ನು ಯಾರು ಪ್ರತಿ ಶ್ರಾವಣ ಮಾಸದಲ್ಲಿ ಮಾಡ್ತಾ ಬರ್ತಾರೋ ಅವರಿಗೆ ಪರಿಪೂರ್ಣವಾಗಿರತಕ್ಕಂತಹ ಆರೋಗ್ಯ, ಆಯುಷ್ಯ, ಸೌಭಾಗ್ಯ, ಐಶ್ವರ್ಯ, ಮಕ್ಕಳು, ಮರಿ, ಉದ್ಯೋಗ, ಅಧಿಕಾರ, ಕೀರ್ತಿ ಎಲ್ಲವೂ ಉಂಟಾಗಿ ಅಮ್ಮನವರು ಪೂರ್ತಿಯಾಗಿ ಅವರ ಮನೆಯಲ್ಲೇ ನೆಲೆ ನಿಲ್ತಾಳೆ ಅಂತಕ್ಕಂತದ್ದು. ಹಿಂದೆ ಮಹರ್ಷಿಗಳು ಹೇಳಿದಂತಹ ಒಂದು ಪರಮಾದ್ಭುತವಾಗಿರತಕ್ಕಂತಹ ಪೂಜಾವಿಧಿ. ಎಲ್ಲರೂ ಕೂಡ ವರಮಹಾಲಕ್ಷ್ಮಿ ವ್ರತವನ್ನು ಶ್ರದ್ಧಾ, ಭಕ್ತಿ, ವಿಶ್ವಾಸದಿಂದ ಆಚರಣೆ ಮಾಡೋಣ. ಎಲ್ಲರಿಗೂ ಶುಭವಾಗಿರಲಿ. ಸಮಸ್ತ ಜನ ಸುಖಿನೋ ಭವ.
