Skip to content Skip to footer

ಪರಂಪರೆಯ ಪಥದಲ್ಲಿ

ಪರಮಾರ್ಥದ ಪಯಣ...

Full Video on youtube

ಪ್ರತೀ ದಿನ ಭ್ರಾಮರಿ ಪ್ರಾಣಾಯಾಮದಿಂದ ಯಾವ ಪ್ರಯೋಜನ ?

In Hindu tradition, Lord Ganesha, Lord Shiva, and Lord Hanuman are widely believed to grant swift blessings to sincere devotees. Lord Ganesha is worshipped first to remove all obstacles, while Lord Shiva is known as Ashutosh, meaning one who is easily pleased by pure devotion.

Short Videos

Audio Clips

Text Version

ಈ ಭ್ರಾಮರಿ ಪ್ರಾಣಾಯಾಮವನ್ನು ಮಾಡುವುದರಿಂದ ಹುಂ ಅಂತ ಹೇಳಿ ಒಂದು ಹಮ್ಮಿಂಗ್ ಸೌಂಡ್ ಅಂತಾನೆ ಹೆಸರಿದೆ. ಈ ಝೇಂಕಾರದ ಒಂದು ದುಂಬಿಯ ಝೇಂಕಾರದ ಧ್ವನಿಯನ್ನು ನಾವು ಉತ್ಪಾದನೆ ಮಾಡಿ ರೇಚಕವನ್ನು ಮಾಡ್ತಾ ಇರುವುದು ಏನಾಗುತ್ತೆ ಅಂತಂದ್ರೆ, ಇದು ಒಂದು ಮಂತ್ರಶಾಸ್ತ್ರದಲ್ಲಿ ಇರ್ತಕ್ಕಂತಹ ಒಂದು ಬೀಜಾಕ್ಷರದ ಒಂದು ಜಪವು ಕೂಡ ಆಗಿಹೋಗುತ್ತೆ. ಅದು ಯಾವುದು ಬೀಜಾಕ್ಷರ ಅಂತ ನಾವು ಹೋಗೋದು. ಇದಕ್ಕೆ ಏನು ಹೇಳುತ್ತೆ ಅಂದ್ರೆ ಕವಚ ಅಂತ ಹೆಸರು. ಕವಚ ಅಂದ್ರೆ ಏನು? ನಮ್ಮನ್ನು ರಕ್ಷಣೆ ಮಾಡ್ತಕ್ಕಂತದ್ದು. ಆರ್ಮರ್ ಅಂತ ಏನು ನಾವು ಆಂಗ್ಲ ಭಾಷೆಯಲ್ಲಿ ಹೇಳ್ತಿವಲ್ಲ ಅದು. ಈ ಹುಂಕಾರ ಮಾಡೋದು ಹುಂ ಅನ್ನುವುದರಿಂದ. ಇದೊಂದು ಮಾಡುವುದರಿಂದ ಏನಾಗುತ್ತೆ ಅಂತಂದ್ರೆ ನಿಮ್ಮ ದೇಹಕ್ಕೆ, ನಿಮ್ಮ ಮನಸ್ಸಿಗೆ ಇದು ರಕ್ಷಾ ಕವಚವಾದ ರೀತಿಯಲ್ಲಿ ಆ ಉಪಾದಿಯಾಗಿ ಅದೇನಾಗುತ್ತೆ ಅಂತಂದ್ರೆ ನಿಮ್ಮನ್ನು ರಕ್ಷಣೆ ಮಾಡ್ತಾ ಬರುತ್ತೆ. ನಿಮ್ಮ ದೇಹವನ್ನು ಮತ್ತು ನಿಮ್ಮ ಮನಸ್ಸು ಎರಡನ್ನು. ಯಾವ ರೀತಿಯಾಗಿ ರಕ್ಷಣೆ ಮಾಡುತ್ತೆ ಅಂತಂದ್ರೆ ಬೇಡದೆ ಇರ್ತಕ್ಕಂತಹ ಕಲ್ಮಶಗಳು ಈ ಒಂದು ಪಾರ್ಥಿವ ಅಂದರೆ ಸ್ಥೂಲ ಶರೀರದಲ್ಲಿ ಸೇರ್ತಕ್ಕಂತದ್ದು ಮಲಮೂತ್ರಾದಿಗಳಾಗಿರಬಹುದು ಅಥವಾ ಬೇರೆ ಯಾವುದಾದರೂ ಫಾರಿನ್ ಬಾಡೀಸ್ ಆಗಿರಬಹುದು. ವಿಶೇಷವಾಗಿ ನಿಮ್ಮ ರಕ್ತದಲ್ಲಿ ಮತ್ತು ನಿಮ್ಮ ಶ್ವಾಸಕೋಶದಲ್ಲಿ ಬ್ಲಡ್ ಆಂಡ್ ಲಂಗ್ಸ್ ಅಲ್ಲಿ ಇರ್ತಕ್ಕಂತಹ ದೋಷ ಸಮೂಹಗಳು ಹೊರ ಹಾಕುತ್ತೆ. ಮಾನಸಿಕವಾಗಿ ಬೇಡದೆ ಇರ್ತಕ್ಕಂತಹ ಯಾವುದೋ ಹಳೆ ವಿಚಾರವನ್ನು, ಯಾವುದೋ ಹಳೆ ವಿಚಾರ ಹತ್ತು ಇಪ್ಪತ್ತು ವರ್ಷ ಹಿಂದೆ ನಡೆದಿರ್ತಕ್ಕಂತಹ ವಿಚಾರಧಾರೆಗಳನ್ನು ಯಾರೋ ಏನಾದರೂ ಒಂದು ಮಾತು ಅಂದ್ರು ಅಂದ್ರೆ ಅದನ್ನ ಮನಸ್ಸಿಗೆ ಹಾಕಿಕೊಂಡು ಬಿಡುವುದು. ಹಿಂದೆ ಹೇಳ್ತಿದ್ರು ಹಳ್ಳಿಕಡೆ ಅದ್ಭುತವಾದ ಮಾತುಗಳು ಹಳ್ಳಿಗರದು. ಅದೇನು ಅಂತಂದ್ರೆ ಯಾರಾದರೂ ಒಂದು ಮಾತು ಅಂದುಬಿಟ್ರೆ ದಯವಿಟ್ಟು ಹೊಟ್ಟೆಗೆ ಹಾಕಿಕೊಳ್ಳಿ ಮನಸ್ಸಿಗೆ ಹಾಕೋಬೇಡಿ ಅಂತ ಹೇಳೋದು. ಯಾಕೆ ಹೇಳ್ತಿದ್ರು ಈ ತರ ಅಂತ ನಾವು ನೋಡಿದ್ರೆ, ಯಾರಾದರೂ ಒಂದು ಹೇಳಿದ ಮಾತನ್ನು ನೀವು ಮನಸ್ಸಿಗೆ ಹಾಕಿಕೊಂಡರೆ ಅದು ದೊಡ್ಡ ವೃಕ್ಷವಾಗಿ ಬೆಳೆದು ಹೋಗುತ್ತೆ. ದೊಡ್ಡ ಮರವಾಗಿ ಬೆಳೆಯುತ್ತೆ. ಒಳ್ಳೆಯ ಹೇಳಿದ ವಿಚಾರವನ್ನು ಮನಸ್ಸಿನಲ್ಲಿ ಹಾಕಿಕೊಳ್ಳಬೇಕು. ಅವಾಗ ಏನಾಗುತ್ತೆ ಆ ಒಳ್ಳೆಯ ವೃಕ್ಷ ಬೆಳೆದು ಅದು ಹಣ್ಣು, ಕಾಯಿ, ಹೂವುಗಳನ್ನು ಕೊಡತಕ್ಕಂತದ್ದಾಗುತ್ತೆ. ಯಾರಾದರೂ ನಮಗೆ ವಿರೋಧ ಮಾಡಿದಂತಹ ವಿಚಾರವನ್ನು ನಮ್ಮ ಮನಸ್ಸಿಗೆ ಘಾಸಿಯನ್ನು ಉಂಟುಮಾಡತಕ್ಕಂತಹ ವಿಚಾರವನ್ನು ಏನಾದರೂ ಮನಸ್ಸಿಗೆ ಹಾಕಿಕೊಂಡರೆ ಏನಾಗುತ್ತೆ ಅದು ವಿಷ ವೃಕ್ಷವಾಗಿ ಬೆಳೆದು ಅದರಲ್ಲಿ ಬರತಕ್ಕಂತದ್ದು ಏನು ಮುಳ್ಳುಗಳು ಮತ್ತು ವಿಷದ ಒಂದು ಫಲ ಬಂದು ನಮ್ಮ ಜೀವನವನ್ನೇ ಹಾಳು ಮಾಡಿಬಿಡುತ್ತೆ. ಅಂತಹ ಯಾವುದಾದರೂ ವೈಷಮ್ಯದ ಚಿಂತನೆಗಳು ವಿಷವನ್ನು ಬಿತ್ತತಕ್ಕಂತಹ ಒಂದು ವಿಚಾರಧಾರೆಗಳು ನಿಮ್ಮ ಮನಸ್ಸಿನ ಮೂಲೆಯಲ್ಲಿ ಮನೆ ಮಾಡಿದ್ದರೆ ನಾನು ಆಗಲೇ ಹೇಳಿದ ಹಾಗೆ ಪ್ಯಾರಾಸಿಂಪಥೆಟಿಕ್ ನರ್ವಸ್ ಸಿಸ್ಟಮ್ ವಿಚ್ ರಿಲ್ಯಾಕ್ಸಸ್ ದಿ ಹೋಲ್ ಹ್ಯೂಮನ್ ಬಾಡಿ ಆಂಡ್ ಮೈಂಡ್ ಆಮೇಲೆ ಇಟ್ ಡಿಸ್ಪೋಸಸ್ ಆಲ್ ದಿ ವೇಸ್ಟ್ ಇನ್ ದಿ ಬಾಡಿ ಅಂತ ಏನು ಹೇಳ್ತಿವಲ್ಲ ಅದಿಷ್ಟು ಕೂಡ ನಮ್ಮ ದೇಹದಿಂದ ತೊಲಗಿ ನಮಗೆ ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಅತ್ಯಂತ ಶೀಘ್ರದಲ್ಲಿ ನಿಮಗೆ ಪ್ರಸಾದವನ್ನು ಉಂಟುಮಾಡುತ್ತೆ. ಆಮೇಲೆ ಇನ್ನ ಹೇಳಿದೆ ನಾನು [ಕೆಂಪು ಬಣ್ಣದ ಕಷಾಯವನ್ನು ಕುಡಿಯುವ ಶಬ್ದ] ಒಂದು ಬೀಜಾಕ್ಷರದ ತಿಳಿದು ತಿಳಿಯದೆ ಒಂದು ಬೀಜಾಕ್ಷರದ ಜಪವನ್ನು ಈ ಒಂದು ಸೇರಿಸಿ ಮಾಡ್ತಕ್ಕಂತಹ ಒಂದು ಪ್ರಕ್ರಿಯೆ ಭ್ರಾಮರಿ ಪ್ರಾಣಾಯಾಮ ಆಗಿರುವುದರಿಂದ ನಿಮ್ಮ ಮನಸ್ಸನ್ನು ಇಂತಹ ಬೇಡದೆ ಇರುವ ಚಿಂತನೆಗಳಿಂದ ನಿಮ್ಮನ್ನು ರಕ್ಷಿಸಿ ನಿಮಗೆ ಮನೋದಾರ್ಢ್ಯವನ್ನು ಅಂದ್ರೆ ಏನಾಗುತ್ತೆ ಅಂತಂದ್ರೆ ನಿಮ್ಮ ಆ ಒಂದು ಮೈಂಡ್ ಫ್ಯಾಕಲ್ಟಿ ಏನಿದೆ ಅದು ವಿಪರೀತವಾಗಿ ಸಶಕ್ತವಾಗಿ ಇಟ್ ಬಿಕಮ್ಸ್ ಸೋ ಸ್ಟ್ರಾಂಗ್ ದಟ್ ನೋಬಡಿ ಕ್ಯಾನ್ ಬ್ರೇಕ್ ಯು. ನಿಮ್ಮನ್ನ ಯಾರು ಮುರಿಯಲಿಕ್ಕೆ ಅಥವಾ ನುರಿಯಲಿಕ್ಕೆ ಅಥವಾ ನಿಮಗೆ ನೋವನ್ನು ಕೊಡಲಿಕ್ಕೆ ಸಾಧ್ಯತೆ ಇಲ್ಲದೆ ಇರ್ತಕ್ಕಂತಹ ಒಂದು ಗುಣಮಟ್ಟದ ಮನಸ್ತತ್ವ ನಿಮ್ಮದಾಗುತ್ತೆ. ಆದ್ದರಿಂದ ತಿಳಿದವರಿಂದ ಇದನ್ನು ಕಲಿತು ಇದನ್ನ ಅಭ್ಯಾಸ ಪ್ರತಿನಿತ್ಯ ಮಾಡ್ತಾ ಬರುವುದರಿಂದ ನಮ್ಮ ದೈಹಿಕ ಮತ್ತು ಅದಕ್ಕಿನ್ನ ವಿಶೇಷವಾಗಿ ಭ್ರಾಮರಿ ಪ್ರಾಣಾಯಾಮದಿಂದ ಮಾನಸಿಕವಾದ ಸ್ವಾಸ್ಥ್ಯ. ನೀವು ಇರ್ತಕ್ಕಂತಹ ನೀವು ಕಾಲೇಜಲ್ಲೂ ಮಾಡಬಹುದು, ಶಾಲೆಯಲ್ಲಿ ಮಾಡಬಹುದು, ಆಫೀಸ್ಗಳಲ್ಲೂ ಮಾಡಕ್ಕೆ ಎಲ್ಲರೂ ಪ್ರಯತ್ನ ಮಾಡಿ. ಐದೈದು ನಿಮಿಷ ಮಾಡಿ ಹೆಚ್ಚು ಬೇಡ. ಐದೈದು ಐದೈದು ನಿಮಿಷ ಹಚ್ಚಿಸ್ಕೊತಾ ಬನ್ನಿ. ದಿನಕ್ಕೆ ಒಟ್ಟು ಮೂರು ಹತ್ತು ಸೇರಿ ಒಂದು ಅರ್ಧ ಗಂಟೆ ಮಾಡಿ ನೀವು ನೋಡಿದರೆ ನಿಮ್ಮ ಮನಸ್ಸಿಗೆ ಒಂದು ಉಲ್ಲಾಸ, ಒಂದು ಆಹ್ಲಾದ ತಂತಾನೇ ಬರ್ತಾ ಹೋಗುತ್ತೆ. ಇರ್ತಕ್ಕಂತಹ ನಮಗೆ ಇರ್ತಕ್ಕಂತಹ ಸಂಪತ್ತು, ನಮಗೆ ಇರ್ತಕ್ಕಂತಹ ಬಾಂಧವರು ಅಥವಾ ನಮಗೆ ಇರ್ತಕ್ಕಂತಹ ಸಂಸಾರ, ನಮಗೆ ಇರ್ತಕ್ಕಂತಹ ಹಣ, ಕಾಸು ಇಷ್ಟರಲ್ಲೇ ನಾವು ನಿತ್ಯ ತೃಪ್ತಿಯನ್ನು ಪಡೆಯಬಹುದಾಗಿರತಕ್ಕಂತಹ ಒಂದು ದಾರಿಯನ್ನು ತೋರಿಸುತ್ತೆ ನಿಮಗೆ. ಮನಸ್ಸು ಸ್ವಾಸ್ಥ್ಯವಾಗುತ್ತೆ, ಸ್ವಸ್ಥವಾಗುತ್ತೆ, ತಟಸ್ಥವಾಗುತ್ತೆ. ಆದ್ದರಿಂದ ಮತ್ತೊಮ್ಮೆ ನಾನು ಹೇಳ್ತಾ ಇದ್ದೀನಿ. ಇದನ್ನು ಈ ವೀಡಿಯೋವನ್ನು ನೋಡಿ ಮಾಡ್ತಕ್ಕಂತದ್ದಲ್ಲ. ನೀವು ಬಂದು ಕಲಿತುಕೊಂಡು ಹೋಗಬಹುದು ಇಷ್ಟ ಇರ್ತಕ್ಕಂತವರು ಅಥವಾ ಯಾರು ಕಲಿತಿದ್ದಾರೋ ಅವರಲ್ಲಿ ಹೋಗಿ ಇದನ್ನು ನುರಿತವರಿಂದ ಕಲಿತು ಅಭ್ಯಾಸ ಮಾಡ್ತಾ ಬರುವುದರಿಂದ ನಮ್ಮೆಲ್ಲರಿಗೂ ಕೂಡ ಮನಸ್ಸಿಗೆ ಒಂದು ನೆಮ್ಮದಿ ಉಂಟಾಗುತ್ತೆ ಅನ್ನೋದರಲ್ಲಿ ಯಾವುದೇ ಸಂಶಯ ಇಲ್ಲ. ಎಲ್ಲರಿಗೂ ಶುಭ ಹಾರೈ.