Skip to content Skip to footer

ಪರಂಪರೆಯ ಪಥದಲ್ಲಿ

ಪರಮಾರ್ಥದ ಪಯಣ...

Full Video on youtube

ಮನೆಯ ವಾಸ್ತು ಬಗ್ಗೆ ನೀವು ಇದನ್ನು ತಿಳಿದುಕೊಳ್ಳಲೇ ಬೇಕು

In Hindu tradition, Lord Ganesha, Lord Shiva, and Lord Hanuman are widely believed to grant swift blessings to sincere devotees. Lord Ganesha is worshipped first to remove all obstacles, while Lord Shiva is known as Ashutosh, meaning one who is easily pleased by pure devotion.

Short Videos

Audio Clips

Text Version

ಶ್ರೀ ಗುರುಭ್ಯೋ ನಮಃ ಶ್ರೀಮನ್ ಮಹಾಗಣಾಧಿಪತಿಯೇ ನಮಃ ಎಲ್ಲರಿಗೂ ಶುಭೋದಯ ಶುಭದಿನ. ಈ ಸಂಚಿಕೆಯಲ್ಲಿ ಇವತ್ತಿನ ದಿವಸ ಮನೆಯ ಜಾತಕದ ಬಗ್ಗೆ ಮಾತಾಡೋಣ. ಎಲ್ಲರಿಗೂ ಸ್ವಲ್ಪ ಆಶ್ಚರ್ಯ ಅಂತ ಅನ್ನಿಸಬಹುದು. ಮನೆಯ ಜಾತಕ ಇದು ಯಾವುದಪ್ಪ? ಮನುಷ್ಯನಿಗೆ ಇದು ಗೊತ್ತು ನಮಗೆ ಇರೋದು. ಮನೆಗೆ ಜಾತಕ ಇದೆಯೇ? ಹೌದು. ವಾಸ್ತುಶಾಸ್ತ್ರದಲ್ಲಿ ಒಂದು ಮನೆಗೂ ಕೂಡ ಒಂದು ಜಾತಕ ಇದೆ ಅಂತಕ್ಕಂತದ್ದು. ಬಹಳ ಹಿಂದಿನ ಆರ್ಷ ಗ್ರಂಥಗಳಲ್ಲಿ ನಮಗೆ ಇದಕ್ಕೆ ಉಲ್ಲೇಖಗಳು ಸಿಗುತ್ತೆ. ಪಾರಂಪರಿಕವಾಗಿ ಯಾರು ವಾಸ್ತುವನ್ನು ಅಥವಾ ಜ್ಯೋತಿಷ್ಯವನ್ನು ಅಭ್ಯಾಸ ಮಾಡ್ತಾ ಬಂದಿದ್ದಾರೆ ಅವರಿಗೆ ಒಂದಲ್ಲ ಒಂದು ಮೂಲದಿಂದ ಇದು ಅವರ ಕಿವಿಗೆ ತಟ್ಟಿರತಕ್ಕಂತದ್ದನ್ನ ನಮ್ಮ ಅನುಭವದಲ್ಲಿ ನೋಡಿದ್ದೇವೆ. ಆದರೆ ಅದು ತಿಳಿದು ಕೂಡ ಅದರ ಬಗ್ಗೆ ವಿಚಾರವನ್ನು ಸಂಗ್ರಹ ಮಾಡದೆ ಅಭ್ಯಾಸವನ್ನು ಮಾಡದೆ ಅದನ್ನು ಸಿದ್ಧಿಸಿಕೊಳ್ಳದೆ ಅದು ಕಾಲಾನಂತರದಲ್ಲಿ ಕಾಲಕ್ರಮೇಣ ಅದೇನು ಲುಪ್ತಪ್ರಾಯ ಅಂದ್ರೆ ಆಲ್ಮೋಸ್ಟ್ ಎಕ್ಸ್ಟೆನ್ಶನ್ ಅಂತ ಹೇಳ್ತಿವಲ್ಲ ಆ ರೀತಿಯಾಗಿ ಕೂತುಬಿಟ್ಟಿದೆ. ಈ ಒಂದು ಮನೆಯ ಜಾತಕವನ್ನು ತೆಗೆದುಕೊಂಡೆ. ಚೈನಾ ದೇಶದಲ್ಲಿ ಫಿಂಗ್ಶೂಯಿ ಅಂತಕ್ಕಂತಹ ಒಂದು ಹೊಸ ಪದ್ಧತಿ ಹುಟ್ಟಿಕೊಂಡಿದ್ದು ಅಂತ ಹೇಳಿ ನಾವು ತಿಳಿದುಕೊಳ್ಳಬಹುದು. ಉಲ್ಲೇಖಗಳು ಸಿಗದೆ ಇರಬಹುದು ಆದರೆ ಅದಕ್ಕೂ ಇದಕ್ಕೂ ಸಂಬಂಧ ಇದೆ. ಈ ಒಂದು ಮನೆಯ ಜಾತಕ ಅಂತ ಹೇಳಿ ನಮ್ಮ ಹೈಂದವ ಸಂಸ್ಕೃತಿಯಲ್ಲಿ ಸನಾತನ ಧರ್ಮದಲ್ಲಿ ಏನು ಹೇಳಿದಿಯೋ ಇದು 100% ಇದ್ದರೆ ಫೆಂಗ್ಶುಯಿಯಲ್ಲಿ ನಿಮಗೆ ಸಿಗತಕ್ಕಂತದ್ದು 20 ರಿಂದ 25% ಅಷ್ಟೇ. ಅಂದ್ರೆ ಅಷ್ಟು ದೊಡ್ಡದಾಗಿ ವಿಭವವಾಗಿ ಈ ಒಂದು ಮನೆಯ ಜಾತಕ ಅಂತಕ್ಕಂತದ್ದು ನಮ್ಮ ವೈದಿಕ ಸಂಸ್ಕೃತಿಯ ವಾಸ್ತುಶಾಸ್ತ್ರದಲ್ಲಿ ಹೇಳಿದೆ. ಜಾತಸ್ಯ ಜಾತಕಂ ಅಂದ್ರೆ ಯಾವುದು ಹುಟ್ಟುತ್ತೋ ಅದಕ್ಕೊಂದು ಜಾತಕ ಇರುತ್ತೆ ಅಂತ ಶಾಸ್ತ್ರದ ಒಂದು ನಿರ್ಣಯ. ಮನುಷ್ಯನು ಹುಟ್ಟುತ್ತಾನೆ, ಅವನಿಗೊಂದು ಜಾತಕ ಉಂಟಾಗುತ್ತೆ. ಅದೇ ರೀತಿಯಾಗಿ ಮನೆಯನ್ನು ಹುಟ್ಟುತ್ತೆ ಅಲ್ವೇ? ಆ ಮನೆಯನ್ನು ಹುಟ್ಟಿದಾಗ, ಆ ಮನೆಯನ್ನು ಮೂರು ಹಂತಗಳು ಅದಕ್ಕೆ ಹುಟ್ಟಲಿಕ್ಕೆ. ಅಡಿಪಾಯ ಹಾಕುವುದು, ಎರಡನೆಯದು ಗೋಡೆಯನ್ನು ಕೊಟ್ಟೋದು ಮತ್ತು ಛಾವಣೆಯನ್ನು ಹಾಕುವುದು, ಮೂರನೆಯದು ಗೃಹಪ್ರವೇಶವನ್ನು ಮಾಡಿಕೊಂಡು ಇವತ್ತಿನಿಂದ ಇದು ನಮ್ಮ ಮನೆ ಅಂತ ಹೇಳಿ ನಾವು ಅಲ್ಲಿ ನಿವಾಸ ಮಾಡಲಿಕ್ಕೆ ಶುರು ಮಾಡತಕ್ಕಂತದ್ದು. ಈ ಮೂರಕ್ಕೂ ಕೂಡ ಶಾಸ್ತ್ರದಲ್ಲಿ ವಿಧಿ ಮತ್ತು ವಿಧಾನಗಳಲ್ಲೂ ಹೇಳಿ. ಆ ರೀತಿಯಾಗಿ ಮಾಡಿದಾಗ ಏನಾಗುತ್ತೆ ಆ ಮನೆಗೆ ಒಂದು ಜೀವ ಕಳೆ ಬರುತ್ತೆ. ಇಲ್ಲಾಂದ್ರೆ ನಿರ್ಜೀವವಾಗಿರತಕ್ಕಂತಹ ವಸ್ತು ಮನುಷ್ಯನ ದೇಹ ಇದೆ. ಆದರೆ ದೇಹವೇ ಎಲ್ಲಾ ಕೆಲಸವನ್ನು ಮಾಡ್ತಿದಿಯೇ? ಇಲ್ಲ. ಅದಕ್ಕೊಂದು ಜೀವ ಇರಬೇಕಲ್ವಾ? ಅದಕ್ಕೊಂದು ಪ್ರಾಣ ಇರಬೇಕಲ್ವಾ? ಆ ಪ್ರಾಣ ಬಿಟ್ಟ ತಕ್ಷಣ ಏನಂತ ಕರೀತೀವಿ ಅದನ್ನ? ಬೇರೆ ಒಂದು ಪದದಿಂದ ನಾವು ಕರೆದು ಬಿಡ್ತೀವಿ. ಅದೇ ರೀತಿಯಾಗಿ ಏನಾಗಿದೆ, ಸುಮಾರು ಮನೆಗಳಿದ್ದಾಗೆ ಕೂಡ ಅಲ್ಲಿ ಇರತಕ್ಕಂತವರಿಗೆ ಸಮಾಧಾನಗಳು ಇಲ್ಲ, ಯಾವುದೇ ಒಂದು ಸಂತೋಷ ಇಲ್ಲ. ಯಾವುದೋ ಒಂದು ಅವ್ಯಕ್ತವಾದ ಒಂದು ಭೀತಿ, ಒಂದು ಕಷ್ಟ, ಒಂದು ಒತ್ತಡ ಮತ್ತು ಪದೇ ಪದೇ ಏನೋ ಒಂದು ಅವ್ಯಕ್ತವಾಗಿರತಕ್ಕಂತಹ ಒಂದು ವಾಂಛೆ, ಏನೋ ಬೇಕು, ಏನು ಬೇಕು ಅನ್ನೋದು ಗೊತ್ತಿಲ್ಲ. ಇದೆಲ್ಲಾ ಆಗಲಿಕ್ಕೆ ಮೂಲಭೂತವಾದ ಕಾರಣ ಏನು ಅಂತಂದ್ರೆ ಆ ಮನೆಯಲ್ಲಿ ಒಂದು ಜೀವಕಳೆ ಅಥವಾ ಪ್ರಾಣಕಳೆ ಇಲ್ಲ ಅಂತಕ್ಕಂತದ್ದು. ಅಂತಹ ಒಂದು ಪ್ರಾಣಜೀವಕಳೆಯನ್ನು ಮನೆಯಲ್ಲಿ ಉಂಟುಮಾಡಿದ ತಕ್ಷಣದಲ್ಲಿ ಏನಾಗುತ್ತೆ ಅಂದ್ರೆ ಆ ಮನೆಗೆ ಒಂದು ಜಾತಕ ಹುಟ್ಟುತ್ತೆ. ಆ ಮನೆಗೆ ಒಂದು ಜೀವಕಳೆ ಪ್ರಾಣಕಳೆಯನ್ನು ಉಂಟು ಮಾಡತಕ್ಕಂತಹ ಕೆಲವು ಪ್ರಕ್ರಿಯೆಗಳು ಗೃಹಪ್ರವೇಶ ಕಾಲದಲ್ಲಿ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಕೆಲವಾರು ಸಂಚಿಕೆಗಳಿಂದ ಹೇಳಿದ್ದೆ ಅನ್ಸುತ್ತೆ ನಾನು. ಇತ್ತೀಚಿನ ದಿನಗಳಲ್ಲಿ ಏನಾಗಿದೆ ಅಂತ ಗೃಹಪ್ರವೇಶ ಅಂದ್ರೆ ಹಿಂದಿನ ದಿನ ಒಂದು ಹೋಮ ಬೆಳಗ್ಗೆ ಒಂದು ಹೋಮ ನಾವೆಲ್ಲ ಮನೆಗೆ ಹೊರಟು ಹೋಗಬಹುದು. ಆ ರೀತಿಯಾಗಿ ಹೇಳಿಲ್ಲ ಶಾಸ್ತ್ರದಲ್ಲಿ. ಆ ರೀತಿಯಾಗಿ ಹೇಳೆ ಇಲ್ಲ. ಬಹಳ ದೊಡ್ಡದಾಗಿ ಮಾಡತಕ್ಕಂತಹ ಅಥವಾ ಮಧ್ಯಮ ರೀತಿಯಲ್ಲಿ ಮಾಡತಕ್ಕಂತಹ ಅಥವಾ ಕನಿಷ್ಠ ರೀತಿಯಲ್ಲಿ ಮಾಡತಕ್ಕಂತಹ ಗೃಹಪ್ರವೇಶದ ಮೂರು ಹಂತಗಳನ್ನು ಹೇಳಿಬಿಟ್ಟಿದ್ದಾರೆ. ಮೂರರಲ್ಲೂ ಕೂಡ ಜೀವಕಳೆ ಪ್ರಾಣಕಳೆ ಮನೆಗೆ ಬರಸಬಹುದಾಗಿರತಕ್ಕಂತಹ ಅನಿವಾರ್ಯವಾಗಿರತಕ್ಕಂತಹ ಕೆಲವು ವಿಚಾರಗಳು, ಕೆಲವು ಪೂಜೆಗಳಾಗಿರಬಹುದು ಅಥವಾ ಕೆಲವು ಪ್ರಕ್ರಿಯೆಗಳು ಅಂತ ಹೇಳಬೇಕು. ಅದನ್ನು ಪುರೋಹಿತರು ಅಥವಾ ಆಚಾರ್ಯ ಅಂತ ಅನ್ನಿಸಿಕೊಂಡಿರ್ತಕ್ಕಂತವನು ಆ ಮನೆಯಲ್ಲಿ ಮಾಡಬೇಕಾಗುತ್ತೆ. ಅದನ್ನು ಮಾಡಿದಾಗ ಏನಾಗುತ್ತೆ ಅಂದ್ರೆ ಆ ಮನೆಗೆ ಒಂದು ಜೀವ ಕಳೆ ಪ್ರಾಣ ಉಂಟಾಗುತ್ತೆ. ಆವಾಗ ಅದಕ್ಕೊಂದು ಮನೆಗೆ ಒಂದು ಜಾತಕ ಹುಟ್ಟುತ್ತದೆ. ಮನುಷ್ಯನ ಜಾತಕವನ್ನು ಇಟ್ಟುಕೊಂಡು ನಾವು ಏನು ಹೇಳ್ತೀವಿ ಅಂದ್ರೆ ನನ್ನ ಆರೋಗ್ಯದ ಬಗ್ಗೆ, ಅವನ ಹಣಕಾಸಿನ ಬಗ್ಗೆ, ಅವನ ಧೈರ್ಯ ಸಾಹಸಗಳ ಬಗ್ಗೆ, ಅವನ ಓದಿನ ಬಗ್ಗೆ, ಅವನ ಬುದ್ಧಿಮತ್ತೆಯ ಬಗ್ಗೆ, ಅವನ ರೋಗ ರುಜನೆಗಳ ಬಗ್ಗೆ, ಅವನ ಮದುವೆಯ ಬಗ್ಗೆ, ಅವನ ಆಯುಷ್ಯದ ಬಗ್ಗೆ, ಅವನ ಭಾಗ್ಯದ ಬಗ್ಗೆ, ಅವನ ಉದ್ಯೋಗದ ಬಗ್ಗೆ, ಅವನು ಲಾಭದ ಬಗ್ಗೆ, ಅವನ ಸಂತತಿಯ ಬಗ್ಗೆ ಮತ್ತು ಅವನ ವ್ಯಯದ ಬಗ್ಗೆ, ಅವನ ಆಯುಷ್ಯದ ಬಗ್ಗೆ ಈ ರೀತಿಯಾಗಿ ನಾನಾ ವಿಧವಾಗಿರತಕ್ಕಂತಹ ಫಲದ ಒಂದು ನಿರ್ಣಯವನ್ನು ಮತ್ತು ಫಲ ಕಥನವನ್ನು ಯಾವ ರೀತಿ ಮಾಡ್ತೀವೋ. ಈ ಮನೆಗೆ ಒಂದು ಜಾತಕವನ್ನು ನಾವೆಲ್ಲ ಮಾಡಿಸಬೇಕು. ಆ ರೀತಿಯಾಗಿ ಮನೆಗೆ ಒಂದು ಜಾತಕವನ್ನು ಮಾಡಿಸಿದಾಗ ಆ ಮನೆಗೆ ಇರತಕ್ಕಂತಹ ಯೋಗಗಳು ಏನು ಅಂದ್ರೆ ಇಂತಹ ಒಂದು ಕಾರ್ಯಕ್ಕೆ ಇಂತಹ ಕಾರ್ಯ ಮಾಡುವುದಕ್ಕೆ ನಾನು ಮನೆಯನ್ನು ಕಟ್ಟುತ್ತೇನೆ ಅಂತ ನಿರ್ಣಯ ಮಾಡಿಕೊಂಡು ಕೂಡ ನೀವು ಮನೆಯನ್ನು ಕಟ್ಟಬಹುದು. ಅಂತಹ ಪರಮಾದ್ಭುತವಾಗಿರತಕ್ಕಂತಹ ಒಂದು ಸ್ವತಂತ್ರವನ್ನು ನಮಗೆ ನಮ್ಮ ವೈದಿಕ ಸಂಸ್ಕೃತಿ ಕೊಟ್ಟಿದೆ. ಅಂದ್ರೆ ನಾನು ಬರೀ ವಿದ್ಯೆಗೆ ನನ್ನ ಜೀವನವನ್ನು ಮೀಸಲಿಡ್ತೀನಿ ಅಂತಂದ್ರೆ ಅವನಿಗೆ ವಿದ್ಯೆವೇ ಹೆಚ್ಚು ಬರಲಿಕ್ಕೆ ಆ ಮನೆಯನ್ನು ನಾವೇನು ಮಾಡಬಹುದು ಕಲ್ಪಿಸಿಕೊಡಬಹುದು. ಇದಕ್ಕೆ ವಾಸ್ತುಶಾಸ್ತ್ರ ಅಂತ ಹೆಸರು. ಈಶಾನದಲ್ಲಿ ಬಾಗಿಲು ಇಡೋದು, ಆಡು ಭಾಷೆ ಕುಬೇರ ಮೂಲೆಯಲ್ಲಿ ಮಲಗಿಬಿಡುವುದು, ಆ ಆಡು ಭಾಷೆ ಕುಬೇರ ಮೂಲೆಯ ಮೇಲ್ಗಡೆ ಒಂದು ಟ್ಯಾಂಕನ್ನು ಕಟ್ಟುವುದು, ಆಮೇಲೆ ಈಶಾನದಲ್ಲಿ ಒಂದು ಸಂಪನ್ನು ಮಾಡುವುದು ಇದಕ್ಕೆ ವಾಸ್ತು ಅಂತ ಎಲ್ಲೂ ಹೇಳಿಲ್ಲ. ಅದು ಬಹಳ ತಪ್ಪು ಪರಿಕರಣ. ಏ ಅದೊಂದು ಎರಡರಿಂದ ಮೂರು ಪ್ರತಿಶತ ಫಲವನ್ನು ಕೊಡಬಹುದು. ಮುಖ್ಯ ಒಂದು ವಿಚಾರಧಾರೆಗೆ ನಾವು ವಾಪಸ್ ಬರೋಣ. ಆ ರೀತಿಯಾಗಿ ಎರಡನೆಯದು. ಇಲ್ಲ, ನಾನು ಹಣಕಾಸಿನ ಒಂದು ಸಂಪಾದನೆ ವ್ಯಾಪಾರ ನಿಷ್ಠನಾಗಿರ್ತೀನಿ, ನನಗೆ ಹೆಚ್ಚಿನ ಒಂದು ಹಣಕಾಸಿನ ಸಂಪಾದನೆ ಆಗಬೇಕು ಅಂತ ಹೊರಟ್ರೆ, ಆ ಹಣಕಾಸು ಸಂಪಾದನೆ ಆಗಲಿಕ್ಕೆನೇ ಕೂಡ ನಾವು ವಾಸ್ತುವನ್ನು ಅವನಿಗೆ ನಿರ್ಣಯ ಮಾಡಿಕೊಡಬಹುದು. ಅದೇನಾಗುತ್ತೆ ಅಂತಂದ್ರೆ ಮನೆಯ ವಾಸ್ತು ನಿರ್ಣಯದಲ್ಲಿ ಅದಕ್ಕೊಂದು ಗಣಿತ ಪ್ರಕ್ರಿಯೆ ಮೊದಲನೆಯದು ಕಟ್ಟಬೇಕಾದರೆ. ಕಟ್ಟಿದ ನಂತರದಲ್ಲಿ ಈ ಒಂದು ವಾಸ್ತು ಸ್ಥಾಪನೆಯ ಪ್ರಕ್ರಿಯೆ ಗೃಹಪ್ರವೇಶ ಅಂತ ಆಡುಭಾಷೆಯಲ್ಲಿ ಕರೀತಿದ್ದೀವಲ್ಲ ಅದು ವಾಸ್ತು ಸ್ಥಾಪನೆಯ ಪ್ರಕ್ರಿಯೆ. ಇವೆರಡನ್ನು ಮಾಡುವುದರಿಂದ ಏನಾಗುತ್ತೆ ಅಂತಂದ್ರೆ. ಈಗ ಆರ್ಮಿಗೆ ಸೇರಬೇಕು ಅಂತ ಅಂದ್ರೆ ಹೆಂಗಿರಬೇಕು ದೇಹದಾಡ್ಯ ಅದಕ್ಕೆ ವಿಧಿ ವಿಧಾನ ಇದೆ ನಮ್ಮ ಭಾರತೀಯ ಏನು ನೌಕಾಪಡೆ ಆಗಿರಬಹುದು ವಾಯುಸೇನೆ ಆಗಿರಬಹುದು ಅಥವಾ ಭೂಸೇನೆ ಆಗಿರಬಹುದು. ಎಲ್ಲರೂ ಹೋಗಿ ಸುಮ್ನೆ ಹಿಂಗೆ ಸೇರಿಸಿಕೊಳ್ಳೋದಿಲ್ಲ, ಫಿಸಿಕಲ್ ಟೆಸ್ಟ್ ಅಂತ ಮಾಡ್ತಾರೆ. ಆನಂತರದಲ್ಲಿ ಆ ಮನುಷ್ಯನಿಗೆ ತರಬೇತಿಯನ್ನು ಕೊಟ್ಟು, ಟ್ರೈನಿಂಗ್ ಕೊಟ್ಟು ಅವನನ್ನು ಏನು ಮಾಡ್ತಾರೆ ಅಂತಂದ್ರೆ ಈಗ ನೀನು ಸೈನಿಕ ಅಂತ ಹೇಳಿ ಕೆಲಸ ಯಾವ ರೀತಿಯಾಗಿ ಆತನಿಗೆ ಒಪ್ಪಿಸುತ್ತಾರೋ, ಮನೆಗೆ ಅದೇ ರೀತಿಯಾದ ಇರತಕ್ಕಂತಹ ಒಂದು ದೇಹವನ್ನು ನಾವು ಕೊಡಬೇಕು, ಅದಕ್ಕೆ ಗಣಿತ ಉಂಟು ಅಂತ. ಗಣಿತ ಪ್ರಖ್ಯೆ, ದೇರ್ ಇಸ್ ಎ ಪ್ಯೂರ್ ಮ್ಯಾಥಮೆಟಿಕಲ್ ಕ್ಯಾಲ್ಕ್ಯುಲೇಷನ್ ಫಾರ್ ದಿಸ್. ಆ ದೇಹವನ್ನು ಹಾಗೆ ರಚನೆ ಮಾಡಿಕೊಡಬೇಕು. ಅಲ್ಲವೇ? ಬಹಳ ದುರ್ಬಲನಾಗಿರತಕ್ಕಂತ ಮನುಷ್ಯನನ್ನು ಸೇನೆಗೆ ಸೇರಿಸಿಕೊಳ್ಳುತ್ತಾರಾ? ಸೇರಿಸುವುದಿಲ್ಲ. ಯಾಕೆ ಅಂದ್ರೆ ಆ ತರಬೇತಿಯನ್ನು ಅವನು ಪಡೆಯಲಿಕ್ಕೆ ಆಗುವುದಿಲ್ಲ, ಅವನು ಮೈ ತಡೆದುಕೊಳ್ಳುವುದಿಲ್ಲ. ಮತ್ತು ಸರಿಯಾದ ಸನ್ಯಾಸಾಶ್ರಮವನ್ನು ಸ್ವೀಕಾರ ಮಾಡಬೇಕಾದರೂ ದೇಹದಾಡ್ಯ ಸರಿ ಇರಬೇಕು. ಆವಾಗ ಮಾತ್ರ ಸನ್ಯಾಸಾಶ್ರಮದ ಆ ಒಂದು ದೈಹಿಕ ಮತ್ತು ಮಾನಸಿಕವಾಗಿರತಕ್ಕಂತಹ ಒತ್ತಡವನ್ನು ಮತ್ತು ಆ ತಪಸ್ಸನ್ನು ತೆರೆದುಕೊಳ್ಳಲಿಕ್ಕೆ ಸಾಧ್ಯ. ಎ ಸ್ಟ್ರಾಂಗ್ ಮೈಂಡ್ ಇನ್ ಎ ಸ್ಟ್ರಾಂಗ್ ಬಾಡಿ ಅಂತಾರಲ್ವಾ ಆ ರೀತಿಯಾಗಿ ಅದೇ ರೀತಿಯಾಗಿ ಮನೆ ಸದೃಢವಾಗೋದು ಅಂದ್ರೆ ದೊಡ್ಡದಾಗಿ ಸಿಮೆಂಟ್ ಹಾಕ್ಬಿಟ್ಟು ಕ್ಲಾಡಿಂಗ್ ಮಾಡೋದಲ್ಲ. ಅದಕ್ಕೆ ಒಂದು ಗಣಿತ ಉಂಟು. ಅದಕ್ಕೊಂದು ಜಾಮೆಟ್ರಿ ಉಂಟು. ಆ ರೀತಿಯಾಗಿ ಮಾಡಿದಾಗ ಏನಾಗುತ್ತೆ ಅದನ್ನು ಮೊದಲನೆಯದು ಡಿಸೈನಿಂಗ್ ಆಫ್ ದಿ ಹೌಸ್. ಮನೆಯನ್ನು ಯಾವ ರೀತಿಯಾಗಿ ನಾವು ರೂಪಿಸಬೇಕು ಅಂತಕ್ಕಂತದ್ದು ಒಂದು ಭಾಗ ಆದರೆ ಎರಡನೆಯದು ವಾಸ್ತು ಸ್ಥಾಪನೆ ಎರಡನೆಯ ಭಾಗ ಮಾಡಿದಾಗ ಏನಾಗುತ್ತೆ ಆ ಮನೆಗೆ ಜಾತಕ ಒಂದು ಹುಟ್ಟುತ್ತೆ. ಅದರಲ್ಲಿ ಹಣ ಬರೋದು, ವಿದ್ಯೆ ಬರೋದು ಎಲ್ಲವನ್ನು ನಾವು ನೋಡಿ ಇಡಬಹುದು. ಈ ಮನೆಗೂ ಮನೆಯಲ್ಲಿ ನಿವಾಸ ಮಾಡುವವರಿಗೂ ಆ ಇಬ್ಬರಿಗೂ ಕೂಡ ಮನಸ್ತತ್ವ ಹೊಂದಿಕೊಂಡು ಬರಬೇಕು. ಉದಾಹರಣೆಗೆ ಈಗ ಯಾವುದೋ ಒಂದು ಮನೆಯನ್ನು ನಾವು ಉದಾಹರಣೆಗೆ ಹೇಳೋದಾದ್ರೆ ಅಲ್ಲಿ ಕ್ಷಾತ್ರದ ಶಕ್ತಿ ಹೆಚ್ಚಿರ್ತಕ್ಕಂತದ್ದು ಇಟ್ಟುಬಿಟ್ವಿ ಅಂತ ಇಟ್ಕೊಳ್ಳಿ. ಕ್ಷಾತ್ರ ಅಂದ್ರೆ ಏನು? ನಾನು ಹೇಳಿದ ಹಾಗೆ ಸೇನೆಯನ್ನು ಸೇರೋದು, ಪೊಲೀಸ್ ಸೇರೋದು, ಬಿಎಸ್ಎಫ್ ಸೇರೋದು ಇವೆಲ್ಲ ಕೂಡ ಕ್ಷಾತ್ರ ಧರ್ಮ. ಶಸ್ತ್ರವನ್ನು ಹಿಡಿದುಕೊಂಡು ಕೆಲಸ ಮಾಡೋದು. ಇವಾಗ ಅದರಲ್ಲಿ ಯಾರಾದರೂ ಹೋಗಿ ನಾನು ಈಗ ಬ್ರಾಹ್ಮಣನಾಗಿದ್ದೇನೆ ನಾನು ಜಪತಪವನ್ನು ಮಾಡ್ತೀನಿ ಅಥವಾ ನಾನು ಜಪತಪ ಯೋಗಾಭ್ಯಾಸವನ್ನು ಮಾಡ್ತೀನಿ ಅಂತ ಕೂತರೆ ಅಲ್ಲಿ ಅವನು ಹಾಳಾಗ್ತಾನೆ ಆ ಮನೆನೂ ಹಾಳಾಗುತ್ತೆ. ಯಾಕಂದ್ರೆ ಎರಡು ವಿರೋಧವಾಗಿರತಕ್ಕಂತಹ ಎರಡು ಗುಣಗಳ ಒಂದು ಸಂಘರ್ಷ ಉಂಟಾಗಿ ಹೋಗುತ್ತೆ. ಸೋ ಈ ರೀತಿಯಾಗಿ ಮನೆಗೆ ಜಾತಕವನ್ನು ನಾವು ಹುಟ್ಟು ಹಾಕಬಹುದು ಯಾಕೆಂದರೆ ನಮ್ಮ ಹುಟ್ಟು ಸಾವುಗಳು ನಮ್ಮ ಕೈಯಲ್ಲಿಲ್ಲ. ಆದರೆ ಒಂದು ಮನೆಯ ಹುಟ್ಟು ಮತ್ತು ಸಾವು ನಮ್ಮೆಲ್ಲರ ಕೈಯಲ್ಲೂ ಇದೆ ಅದನ್ನು ನಾವು ತಿದ್ದಿಕೊಂಡು ಬಿಡಬಹುದು. ನಮ್ಮ ಗುಣ, ಧರ್ಮ, ಪ್ರಕೃತಿ, ಉದ್ಯೋಗ ಮತ್ತು ನಮ್ಮ ವಾಂಛೆಗಳು, ವಾಂಛೆ ಅಂದ್ರೆ ಕಾಮನೆಗಳು. ಏನಿದೆ ಅಂತಕ್ಕಂತಹ ಐದನ್ನು ಸರಿಯಾಗಿರತಕ್ಕಂತಹ ಒಬ್ಬ ವಾಸ್ತುತಜ್ಞ ನೋಡಿ ಅವನ ಬಳಿ ಕುಳಿತುಕೊಂಡು ಮಾತಾಡಿ ನಮಗೆ ಇದಿದು ಬೇಕು ಅಂತಂದ್ರೆ ಕಾಲಾವಕಾಶ ಬೇಕು, ಸಾಕಷ್ಟು ಗಣಿತ ಪ್ರಕ್ರಿಯೆಗಳಿವೆ. ಆ ಸುಮ್ನೆ ಆರ್ಕಿಟೆಕ್ಚರ್ ಡಿಸೈನ್ ಮಾಡಿ ಅದ್ಭುತವಾಗಿ ನೋಡಲಿಕ್ಕೆ ಚೆನ್ನಾಗಿರೋದಲ್ಲ. ಅದು ಕೆಲಸ ಮಾಡಲಿಕ್ಕೆ ಚೆನ್ನಾಗಿರತಕ್ಕಂತಹ ಮನೆಯಾಗಬೇಕು. ಇದು ಮನೆಗೂ ಅನ್ವಯಿಸುತ್ತೆ, ದೇವಸ್ಥಾನಕ್ಕೆ ಅನ್ವಯಿಸುತ್ತೆ, ರಾಜನಿವಾಸಗಳು, ಎಂಎಲ್ಎ, ಎಂಪಿ ಇತ್ಯಾದಿ ಮಂತ್ರಿ ಮಹೋದಯರು ಇರತಕ್ಕಂತಹ ಕಟ್ಟಡಗಳಿಗೂ ಕೂಡ ಇದು ಅನ್ವಯಿಸುತ್ತೆ. ಈ ರೀತಿಯಾಗಿ ಸಮರ್ಪಣ. ಪಕ್ಕವಾಗಿ ನಗರಗಳಿಗೂ ಅನ್ವಯಿಸುತ್ತೆ. ಹಿಂದೆ ಟೌನ್ ಪ್ಲಾನಿಂಗ್, ಸಿಟಿ ಪ್ಲಾನಿಂಗ್ ಅಂತ ಎಲ್ಲ ಇತ್ತು. ಆ ರೂಪರೇಷೆಗಳು, ಅವಶೇಷಗಳು ಇವತ್ತಿಗೂ ಕೂಡ ನಮಗೆ ಕಾಣಿಸುತ್ತೆ. ವಾಸ್ತುಶಾಸ್ತ್ರವನ್ನು ಅಭ್ಯಾಸ ಮಾಡಿದಾಗ ಅಂತಹ ಒಂದು. ವಾಸ್ತುಬದ್ಧವಾಗಿರತಕ್ಕಂತಹ ಮನೆಯನ್ನು ನಾವು ನಿರ್ಮಾಣ ಮಾಡಿ ಸರಿಯಾದ ರೀತಿಯಲ್ಲಿ ಗೃಹಪ್ರವೇಶ ಅದಕ್ಕೆ ಜೀವ ಪ್ರಾಣಕಳೆಯನ್ನು ಕೊಟ್ಟಿದ್ದೆ ಆದರೆ ಆ ಮನೆಯಲ್ಲಿ ನಿವಾಸ ಮಾಡುವವರಿಗೆ ಅದೇನು ಮಾಡುತ್ತೆ ಅಂತಂದ್ರೆ ಆ ಗೃಹಲಕ್ಷ್ಮಿ ಅನುಗ್ರಹ ಮಾಡ್ತಾ ಹೋಗ್ತಾಳೆ. ಅದು ವಿದ್ಯೆ ಆಗಿರಬಹುದು ಬುದ್ಧಿ ಆಗಿರಬಹುದು. ಆಗಿರಬಹುದು, ಆರೋಗ್ಯ ಆಗಿರಬಹುದು, ಆಯುಷ್ಯ ಆಗಿರಬಹುದು, ರಾಜ್ಯ ಆಗಿರಬಹುದು, ಮದುವೆ ಆಗಿರಬಹುದು, ಮಕ್ಕಳಾಗಿರಬಹುದು, ಏನು ಬೇಕಾದರೂ ಸಕಲ ಕಾಮನೆಗಳನ್ನು ಪೂರ್ಣ ಮಾಡತಕ್ಕಂತಹದ್ದು ಗೃಹವಾಗುತ್ತೆ ಅಂತಕ್ಕಂತದ್ದರಲ್ಲಿ ಎಲ್ಲಷ್ಟಕ್ಕೂ ಕೂಡ ಸಂಶಯ ಇಲ್ಲ. ಆ ತರದ ಒಂದು ಮನೆಯ ನಿರ್ಮಾಣವನ್ನು ನೀವೆಲ್ಲರೂ ಮಾಡಿ ನಿಮ್ಮ ಆಸೆ ಆಕಾಂಕ್ಷೆಗಳು ಕಾಮನೆಗಳೆಲ್ಲ ಪೂರ್ತಿಯಾಗಿ. ಏಕನಿಷ್ಠವಾಗಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ, ನಮ್ಮ ಹೈಂದವ ಧರ್ಮದಲ್ಲಿ ಮತ್ತು ಆ ಭಗವಂತನಲ್ಲಿ ನಮಗೆ ಏಕಾಗ್ರ ಚಿತ್ತ ಮತ್ತು ಅದರಲ್ಲಿ ಆಸ್ಥೆ ಮತ್ತು ನಂಬಿಕೆ, ವಿಶ್ವಾಸ ಮತ್ತು ಧರ್ಮಬದ್ಧವಾದ ನೆರವಳಿಕೆಗೆ ಅದು ಪೂರಕವಾಗಲಿ ಅಂತ ಹೇಳಿ ಆಶಿಸುತ್ತೇನೆ. ಎಲ್ಲರಿಗೂ ಶುಭ ಮಂಗಳ.