ಪರಂಪರೆಯ ಪಥದಲ್ಲಿ
ಪರಮಾರ್ಥದ ಪಯಣ...
Full Video on youtube
ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಬರಬೇಕು ?
In Hindu tradition, Lord Ganesha, Lord Shiva, and Lord Hanuman are widely believed to grant swift blessings to sincere devotees. Lord Ganesha is worshipped first to remove all obstacles, while Lord Shiva is known as Ashutosh, meaning one who is easily pleased by pure devotion.
Short Videos
Audio Clips
Text Version
ಯಾವ ದೇವರಿಗೆ ನಾವು ಎಷ್ಟು ನಮಸ್ಕಾರವನ್ನು ಮಾಡಬೇಕು ಅಂತಕ್ಕಂತದ್ದು ನೋಡೋ ಪ್ರಯತ್ನವನ್ನು ಮಾಡೋಣ. ಮಹಾಗಣಪತಿಗೆ ಮೂರು ಪ್ರದಕ್ಷಿಣೆ ನಮಸ್ಕಾರವನ್ನು ಮಾಡಬೇಕು. ಒಂದು ಪ್ರದಕ್ಷಿಣೆ ಬರಬೇಕು, ನಮಸ್ಕಾರ ಮಾಡಬೇಕು. ಎರಡನೇ ಪ್ರದಕ್ಷಿಣೆ ಬರಬೇಕು, ನಮಸ್ಕಾರ ಮಾಡಬೇಕು. ಮೂರನೇ ಪ್ರದಕ್ಷಿಣೆ ಬರಬೇಕು, ನಮಸ್ಕಾರ ಮಾಡಬೇಕು. ಮೂರು ಸುತ್ತು ಸುತ್ತುಬಿಟ್ಟು ಬರಿ ನಮಸ್ಕಾರವನ್ನು ಮಾಡುವುದು ಅಲ್ಲ. ಪ್ರತಿಯೊಂದು ಪ್ರದಕ್ಷಿಣೆಗೂ ಒಂದು ನಮಸ್ಕಾರವನ್ನು ಮಾಡತಕ್ಕಂತದ್ದು ಒಂದು ಪದ್ಧತಿ. ಮಹಾಗಣಪತಿಗೆ ಮೂರು ಪ್ರದಕ್ಷಿಣೆ ಅಥವಾ ಮೂರು ನಮಸ್ಕಾರವನ್ನು ಮಾಡಬೇಕು. ಶಿವನಿಗೆ ಈಶ್ವರನಿಗೆ ಶಾಸ್ತ್ರದಲ್ಲಿ ಏನು ಹೇಳುತ್ತೆ ಅಂದ್ರೆ ಅರ್ಧ ಪ್ರದಕ್ಷಿಣೆ ಅಂತ ಹೇಳುತ್ತೆ. ಅದರ ಬಗ್ಗೆ ಮತ್ತೊಂದು ದಿವಸ ಬೇರೆ ಒಂದು ಇದಕ್ಕೆ ಸಂಬಂಧಪಟ್ಟಿರತಕ್ಕಂತಹ ಒಂದು ಕಾರ್ಯಕ್ರಮವನ್ನೇ ಮಾಡೋಣ. ಈಗ ಸದ್ಯಕ್ಕೆ ಇಷ್ಟು ತಿಳಿದುಕೊಂಡರೆ ಸಾಕು. ಏನು ಅರ್ಧ ಪ್ರದಕ್ಷಿಣೆಯನ್ನು ಮಾಡಬೇಕು. ಅದರ ವಿಧಿವಿಧಾನವನ್ನು ನಂತರದ ಸಂಚಿಕೆಯಲ್ಲಿ ನಾವು ಅದಕ್ಕೋಸ್ಕರನೇ ಒಂದು ಬೇರೆ ಮಾಡೋಣ. ಮಹಾವಿಷ್ಣುವೇ ಅದು ವೆಂಕಟರವಣ ಸ್ವಾಮಿ ಆಗಿರಬಹುದು, ನರಸಿಂಹ ಸ್ವಾಮಿ ಆಗಿರಬಹುದು, ರಾಮ ಆಗಿರಬಹುದು, ಕೃಷ್ಣ ಆಗಿರಬಹುದು, ವರಹ ಸ್ವಾಮಿ ಆಗಿರಬಹುದು, ಪರಶುರಾಮ ಆಗಿರಬಹುದು, ಯಾವುದೇ ಆಗಿರಬಹುದು ದೇವರು ಮಹಾವಿಷ್ಣುವಿನ ಅವತಾರ ವಿಶೇಷಗಳಿಗೆ ನಾಲಕ್ಕು ನಮಸ್ಕಾರಗಳನ್ನು ಮಾಡಬೇಕು ಅಂತ ಶಾಸ್ತ್ರ ಹೇಳುತ್ತೆ. ನಾಲ್ಕು ಪ್ರದಕ್ಷಿಣೆ ಮತ್ತು ನಾಲ್ಕು ನಮಸ್ಕಾರಗಳನ್ನು ನಾವು ಮಾಡಬೇಕಾಗುತ್ತೆ ಅಂತ ಹೇಳಿ ಶಾಸ್ತ್ರದಲ್ಲಿ, ಪುರಾಣಗಳಲ್ಲಿ ಮತ್ತು ಹಲವಾರು ಆರ್ಷ ಗ್ರಂಥಗಳಲ್ಲಿ ಉಲ್ಲೇಖ ಇರತಕ್ಕಂತದ್ದು ನಮಗೆ ನೋಡಲಿಕ್ಕೆ ಸಿಗುತ್ತೆ. ಇನ್ನು ಅಮ್ಮನವರೇ, ದೇವಿ ಯಾವುದೇ ಆಗಿರಬಹುದು ಲಕ್ಷ್ಮಿ, ಪಾರ್ವತಿ, ದುರ್ಗೆ, ಕಾಳಿ ಈಗ ಬಹಳ ಪ್ರಚಲಿತವಾಗಿರತಕ್ಕಂತಹ ಚಿನ್ನಮಸ್ತ, ಭಗಳಾಮುಖಿ ಇವೆಲ್ಲ ಎಲ್ಲ ಹಚ್ಚಿಕೊಂಡಿದ್ದಾರಲ್ಲ. ಆ ದಶಮಹಾವಿದ್ಯೆಗಳಾಗಿರಬಹುದು, ಗ್ರಾಮ ದೇವತೆ ಹೆಣ್ಣು ದೇವರಾಗಿರಬಹುದು, ಅಂತಹ ದೇವತೆಗೆ ಏನು ಮಾಡಬೇಕು ಅಂದ್ರೆ ಮೂರು ನಮಸ್ಕಾರವನ್ನು ಮಾಡಬೇಕು ಅಥವಾ ಒಂಬತ್ತು ಪ್ರದಕ್ಷಿಣೆ ನಮಸ್ಕಾರವನ್ನು ಮಾಡಬೇಕು. ಮೂರು ಪ್ರದಕ್ಷಿಣೆ ನಮಸ್ಕಾರ ಅಥವಾ ಒಂಬತ್ತು ಪ್ರದಕ್ಷಿಣೆ ನಮಸ್ಕಾರವನ್ನು ಮಾಡಬೇಕಾಗುತ್ತೆ ನಾವು. ಇನ್ನು ಯಾವ ದೇವರು ಮಿಗ್ತು ಆಂಜನೇಯ ಸ್ವಾಮಿ. ಆಂಜನೇಯ ಸ್ವಾಮಿಗೆ ಹನುಮಂತನಿಗೆ ಎಂಟು ಪ್ರದಕ್ಷಿಣೆ, ಎಂಟು ನಮಸ್ಕಾರವನ್ನು ಮಾಡತಕ್ಕಂತಹ ಒಂದು ಪದ್ಧತಿ ಶಾಸ್ತ್ರದಲ್ಲಿ ಹೇಳಿದೆ. ಎಂಟು ಪ್ರದಕ್ಷಿಣೆ ಬರಬೇಕು. ಎಂಟು ನಮಸ್ಕಾರಗಳನ್ನು ಮಾಡಿದರೆ ಅತ್ಯಂತ ಶ್ರೇಯಸ್ಸು ಉಂಟಾಗುತ್ತೆ. ಹಾಗೇನೇ ಸೂರ್ಯನಾರಾಯಣನಿಗೆ, ಸೂರ್ಯ ಭಗವಾನನಿಗೆ ಸೂರ್ಯನ ದೇವಸ್ಥಾನಗಳು ಉಂಟು. ಆತನಿಗೆ ಏಳು ಪ್ರದಕ್ಷಿಣೆ ಮತ್ತು ಏಳು ನಮಸ್ಕಾರವನ್ನು ಮಾಡತಕ್ಕಂತದ್ದು ಅತ್ಯಂತ ಶ್ರೇಯಸ್ಸು ಮತ್ತು ನಮಗೆ ಹೆಚ್ಚಿನ ಲಾಭವನ್ನು ಕೊಡ್ತಕ್ಕಂತದ್ದಾಗಿ ಶಾಸ್ತ್ರಗಳು ಉದ್ಘೋಷಿಸುತ್ತಾ ಇದೆ. ಇನ್ನು ನವಗ್ರಹಗಳಿಗೆ, ನವಗ್ರಹಗಳಿಗೆ ಒಂಬತ್ತು ನಮಸ್ಕಾರವನ್ನು ಮಾಡಬೇಕು. ಇದರಲ್ಲಿ ಒಂದು ಎಡವಟ್ಟಿದೆ. ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ ಒಂಬತ್ತು ಏಳು ಹಿಂಗೆ ಸುತ್ತುಬಿಟ್ಟು ಏನ್ ಮಾಡ್ತಾರೆ ರಾಹು ಕೇತು ವ್ಯತ್ಯಸ್ತವಾಗಿ ಹೋಗ್ತಾರೆ ಅಂತ ಹೇಳಿ ಅಪ್ರದಕ್ಷಿಣಾಕಾರವಾಗಿ ಅವರು ಸಂಚಾರ ಮಾಡುವುದರಿಂದ ಭಚಕ್ರದಲ್ಲಿ ಅದಕ್ಕೆ ಎರಡು ಉಲ್ಟಾ ನಮಸ್ಕಾರ ಪ್ರದಕ್ಷಿಣೆ ಅದನ್ನ ಹೇಳೋದು ಪ್ರವಾಮವನ್ನು ಮಾಡತಕ್ಕಂತದ್ದನ್ನು ನಾವು ನೋಡಿದ್ದೇವೆ. ಆಂಟಿ ಕ್ಲಾಕ್ ವೈಸ್ ಹೋಗ್ತಕ್ಕಂತವರು ಇದು ಶುದ್ಧ ತಪ್ಪು. ಅವರು ವಕ್ರ ಸಂಚಾರ ಯಾವಾಗಲೂ ಅವರಿಗಿದೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಖಗೋಳದಲ್ಲಿ. ಬಚಕ್ರದಲ್ಲಿ ಅವರ ಸಂಚಾರ ಇರತಕ್ಕಂತದ್ದು ಹೇಗೆ ಅಂತಂದ್ರೆ ಅವರ ಅಪ್ರದಕ್ಷಿಣಾಕಾರವಾಗಿ ಅಪ್ರದಕ್ಷಿಣೆ ಅಪ್ರದಕ್ಷಿಣಂ ಮೇರುಂ ಅಪ್ರದಕ್ಷಿಣೆ ಕುರ್ವಾಣಂ ಅಂತ ಹೇಳಿ ಹೇಳುತ್ತೆ. ನಾವು ಅಪ್ರದಕ್ಷಿಣೆಯನ್ನು ಮಾಡಕೂಡದು. ಅವರು ಅಪ್ರದಕ್ಷಿಣೆಯನ್ನು ಮಾಡ್ತಾ ಇರತಕ್ಕಂತ ರಾಹು ಕೇತುಗಳು ನಾವು ಪ್ರದಕ್ಷಿಣೆಯನ್ನೇ ಮಾಡಬೇಕು. ಈ ರೀತಿಯಾಗಿ ನವಗ್ರಹಗಳಿಗೆ ಒಂಬತ್ತು ನಾವು ಪ್ರದಕ್ಷಿಣೆಯ ನಮಸ್ಕಾರವನ್ನು ಮಾಡತಕ್ಕಂತದ್ದು ಶಾಸ್ತ್ರದಲ್ಲಿ ಉಲ್ಲೇಖ ನಮಗೆ ಕಾಣುತ್ತೆ. ಸುಬ್ರಹ್ಮಣ್ಯೇಶ್ವರನಿಗೆ ಸ್ಕಂದ ಸುಬ್ರಹ್ಮಣ್ಯ ದೇವರು ಅಂತ ಹೇಳ್ತಿವಲ್ಲ ಆ ಸುಬ್ರಹ್ಮಣ್ಯನಿಗೆ ಆರು ಪ್ರದಕ್ಷಿಣೆ ನಮಸ್ಕಾರವನ್ನು ಮಾಡತಕ್ಕಂತಹ ಒಂದು ಪದ್ಧತಿ ಶಾಸ್ತ್ರಗಳಲ್ಲಿ ಉಲ್ಲೇಖ ಆಗಿದೆ.
