ಪರಂಪರೆಯ ಪಥದಲ್ಲಿ
ಪರಮಾರ್ಥದ ಪಯಣ...
Full Video on youtube
ಸೋಷಿಯಲ್ ಮೀಡಿಯಾ ಮೂಲಕ ಮಂತ್ರ ಸಾಧನೆ ಮಾಡಿದರೆ ಒಳ್ಳೆಯದಾ ?
In Hindu tradition, Lord Ganesha, Lord Shiva, and Lord Hanuman are widely believed to grant swift blessings to sincere devotees. Lord Ganesha is worshipped first to remove all obstacles, while Lord Shiva is known as Ashutosh, meaning one who is easily pleased by pure devotion.
Audio Clips
Text Version
ನಿಮಗೆ ಈಗ ಬದನೆಕಾಯಿಯನ್ನು ನೀವು ಮನೆಯಲ್ಲಿ ಬೆಳ್ಕೋಬೇಕು ಅಂದ್ರೆ ಬದನೆ ಬೀಜವನ್ನು ಬೆಳೆಸಿರೋನು ಕೊಡಬೇಕಲ್ವೇ ನಿಮಗೆ? ಅವನು ಬದನೆಕಾಯಿಯನ್ನು ಉತ್ತು ಬಿತ್ತು ಬೆಳೆದು ಅದರ ಬೀಜವನ್ನು ಕೊಟ್ಟು ನಾವು ಹಾಕೊಂಡು ಮತ್ತು ಅದೇ ರೀತಿಯಾದಂತಹ ಬದನೆಕಾಯಿಯನ್ನು ಮಾವಿನಹಣ್ಣನ್ನು ಹಲಸಿನಹಣ್ಣನ್ನು ತೆಂಗಿನಕಾಯಿಯನ್ನು ಬೆಳೆಯಲಿಕ್ಕೆ ಬಿಟ್ಟರೆ ಪುಸ್ತಕದಲ್ಲಿ ಇರತಕ್ಕಂತಹ ಚಿತ್ರಗಳನ್ನು ತೆಗೆದು ನೀವು ಎಂತಹ ಗೊಬ್ಬರವನ್ನು ಹಾಕಿದರೂ, ಎಂತಹ ನೀರನ್ನು ಕಟ್ಟಿದರೂ ಹೇಗೆ ಅದು ಫಲೀಭೂತವಾದಂತಹ ವೃಕ್ಷ ಆಗುವುದಿಲ್ಲವೋ. ಪುಸ್ತಕದಿಂದ ಹೇಳೋದು ಆನ್ಲೈನ್ ಈಗ ಅದೊಂದು ಆಗಿಬಿಟ್ಟಿದೆ. ದೀಕ್ಷೆಗಳು ಏನಾಗಿದೆ ಆನ್ಲೈನಲ್ಲಿ ಕೊಡ್ತಕ್ಕಂತ ಒಂದು ಪ್ರಕ್ರಿಯೆ. ಆ ಮನುಷ್ಯ ಎಲ್ಲೋ ಕೂತಿರ್ತಾನೆ, ಈ ಮನುಷ್ಯ ಗುರು ಅಂತ ಕರೆಸಿಕೊಳ್ಳತಕ್ಕಂತ ವ್ಯಕ್ತಿ ಎಲ್ಲೋ ಕೂತಿರ್ತಾನೆ. ಫೋನಿನಲ್ಲಿ ಮಂತ್ರೋಪದೇಶವನ್ನು ಕೊಡ್ತಕ್ಕಂತದ್ದು ಅಥವಾ ಫೋನು ಇಲ್ಲದೆ ಈ ಟೈಮಲ್ಲಿ ಕುಳಿತುಕೊಂಡು ಬಿಟ್ಟರೆ ನಾನು ನಿಮಗೆ ಇಲ್ಲಿಂದಲೇ ದೀಕ್ಷೆಯನ್ನು ಕೊಟ್ಟುಬಿಡ್ತೇನೆ. ಇದು ಶಾಸ್ತ್ರದಲ್ಲಿ ಎಲ್ಲೂ ಹೇಳಿಲ್ಲ. ಇದು ಕಪೋಲ ಕಲ್ಪಿತವಾಗಿರತಕ್ಕಂತಹ ವಿಚಾರವಾಗಿ ಬಿಟ್ಟಿದೆ. ಆದ್ದರಿಂದ ಮಂತ್ರ ಅಂತಕ್ಕಂತದ್ದು ಯಾವುದು ಅದೇ ವಾಪಸ್ ಬರೋಣ ನಮ್ಮ ಬದನೇಕಾಯಿ ವಿಚಾರಕ್ಕೆ. ಇದೊಂದು ಉದಾಹರಣೆಗೆ ಬದನೇಕಾಯಿ ಹೇಳ್ತಾ ಇದ್ದೇನೆ ಅದೆಲ್ಲದಕ್ಕೂ ಅನ್ವಯಿಸುತ್ತೆ. ಒಬ್ಬ ಹಳ್ಳಿಯವನು. ಏನು ಓದು ಬರಹ ಇಲ್ಲ ಆ ಮನುಷ್ಯನಿಗೆ. ನಿಮ್ಮಂತೆ ಪ್ಯಾಂಟು, ಶರ್ಟು, ಟೀ ಶರ್ಟ್ ಅನ್ನು ಹಾಕಿಕೊಂಡಿರೋದಿಲ್ಲ. ನಿಮ್ಮ ತರ ಪರ್ಫ್ಯೂಮ್ ಹೊಡ್ಕೊಂಡಿರೋದಿಲ್ಲ. ನಿಮ್ಮ ತರ ಚೆನ್ನಾಗಿ ತಲೆ ಕೂದಲನ್ನು ಬಾಚಿಕೊಂಡಿರೋದಿಲ್ಲ, ಗಡ್ಡವನ್ನು ಚೆನ್ನಾಗಿ ಇಟ್ಕೊಂಡಿರೋದಿಲ್ಲ. ಒಂದು ಚಿಕ್ಕ ನಿಕ್ಕರ ಹಾಕೊಂಡು ನಿಂತಿರ್ತಾನೆ ಮನುಷ್ಯ. ಆದರೆ ಆತನ ಕೈಯಲ್ಲಿ ನೀವು ಬದನೆಕಾಯಿ ಅಥವಾ ಒಂದು ಮಾವಿನ ವಾಟೆಯನ್ನು, ಬೀಜವನ್ನು ಅಥವಾ ಸಸಿಯಾಗಿರತಕ್ಕಂತ ಆಗ್ತಕ್ಕಂತ ಒಂದು ತೆಂಗಿನಕಾಯಿ ಅಂತ ನೆಟ್ಟರೆ ಏನಾಗುತ್ತೆ? ನಮಗೆ ಫಲವನ್ನು ಕೊಡ್ತಕ್ಕಂತಹ ವೃಕ್ಷವಾಗಿ ಬೆಳೆದು ಆ ಫಲದ ಅನುಭೂತಿ ನಿಮಗೆ ಯಾವ ರೀತಿಯಲ್ಲಿ ಬರುತ್ತೋ. ಗುರುವಾಗಿರತಕ್ಕಂತವನು ನಿಮ್ಮಂತ ಬುದ್ಧಿವಂತ ಆಗಬೇಕು ಅಂತ ಇಲ್ಲ. ನಿಮ್ಮಷ್ಟು ಸುಂದರಾಂಗ ಆಗಬೇಕು ಅಂತ ಇಲ್ಲ. ನೀವು ತಿಳ್ಕೊಂಡಿರೋ ವಿಚಾರವನ್ನು ಆತ ತಿಳಿದಿರಬೇಕು ಅಂತಕ್ಕಂತದ್ದು ಇಲ್ಲ. ನಿಮ್ಮ ತರ ಆತ ಸದಾಕಾಲ ಶುಚಿಸ್ಮಿತನಾಗಿರಬೇಕು ಅಂತಾನೂ ಇಲ್ಲ. ಯಾರು ಈ ಸಾಧನೆಯನ್ನು ಮಾಡಿರ್ತಾರೋ ಆಂತರಿಕವಾಗಿರತಕ್ಕಂತಹ ಸೌಂದರ್ಯ, ಆಂತರಿಕವಾಗಿರತಕ್ಕಂತಹ ಶೌಚ, ಒಳಗೆ ಸ್ನಾನ ಮಾಡ್ತಾರೆ ಅವರು. ಹೊರಗಡೆ ಕೆಟ್ಟ ಕೆಟ್ಟದಾಗಿ ಪೆದ್ದ ಪೆದ್ದಾಗಿ ಕಾಣುತ್ತಾರೆ. ಅದನ್ನ ನೋಡಿ ನಾವು ಆ ತರ ಅನುಸರಣೆ ಮಾಡಬೇಕು ಬಿಟ್ರೆ ಅನುಕರಣೆಯನ್ನು ಮಾಡಬಾರದು. ನಾವು ತಲೆ ಕೂದಲು ಕೆದರಿಕೊಂಡು ಬಿಟ್ಟು ನಾವು ಯಾವುದೋ ತುಂಡು ಪಂಚೆಯನ್ನು ಹುಟ್ಟಿಕೊಂಡು. ನಾವು ಅದು ಪೆದ್ದುತನದ ಪರಮಾವಧಿ ಆಗಿಬಿಡುತ್ತೆ. ಅದು ಸ್ವಾಭಾವಿಕವಾಗಿ ತಾನೇ ತಾನೇ ಬರಬೇಕು ಬಿಟ್ರೆ ನವಿಲು ನೋಡು ಕೆಮ್ಮೂತ ಪುಕ್ಕ ಕೆರ್ಕೋತು ಅನ್ನೋ ರೀತಿಯಲ್ಲಿ ಆಗಬಾರದು. ಆದರೆ ಅಂತವರು ಸಿದ್ಧರು. ಅಂತಹ ಸಿದ್ದಿಯನ್ನು ಪಡೆದಂತವರಲ್ಲಿ ಆ ಮಂತ್ರದ ಗ್ರಹಣವನ್ನು ಮಾಡಿ ನಾವು ಅಭ್ಯಾಸ ಮಾಡಬೇಕಾಗಿ ಬರುತ್ತೆ. ಇದಕ್ಕೆ ಮಂತ್ರ ಅಂತ ಹೆಸರು. ಎಲ್ಲಿಯವರೆಗೂ ಗುರು ನಿಮ್ಮನ್ನು ಅನುಗ್ರಹಿಸಿ ನಿಮಗೆ ಉಪದೇಶವನ್ನು ಕೊಡುವುದಿಲ್ಲವೋ, ನೀವು ಎಂತಹ ಬುದ್ಧಿವಂತರಾದರೂ. ನೀವು ಎಂತ ಶಾಸ್ತ್ರದ ಪಾಂಡಿತ್ಯ ಇದ್ದರೂ ಕೂಡ ನಿಮಗೆ ಆ ಮಂತ್ರ ಸಿದ್ಧಿ ಆಗುವುದಿಲ್ಲ. ಇದನ್ನ ನೀವು ಬರೆದಿಟ್ಟುಕೊಂಡುಬಿಡಿ. ಇದು ಮಂತ್ರ ಶಾಸ್ತ್ರದ ನಿಯಮ. ಆದ್ದರಿಂದ ಮಂತ್ರ ಅಂತಂದ್ರೆ ನೀವು ಪುಸ್ತಕವನ್ನು ನೋಡಿ, ಸೋಶಿಯಲ್ ಮೀಡಿಯಾ ನೋಡಿ ಅಥವಾ ನೀವೇ ತಿಳ್ಕೊಂಡು ಏನೇನೋ ಮಾಡೋದಕ್ಕೆ ಮಂತ್ರ ಅನ್ನೋದು ಅದು ಬರೀ ಪದದ ಸಮೂಹ. ಸುಮ್ನೆ ಪದ ಸಮೂಹ ಅದು. ಅದರಿಂದ ಯಾವ ಉಪಯೋಗವೂ ಕೂಡ ಆಗುವುದಿಲ್ಲ.
