Skip to content Skip to footer

ಪರಂಪರೆಯ ಪಥದಲ್ಲಿ

ಪರಮಾರ್ಥದ ಪಯಣ...

Full Video on youtube

ಅಧಿಕ ಮಾಸ ಆಚರಣೆಯ ಮಹತ್ವ...

In Hindu tradition, Lord Ganesha, Lord Shiva, and Lord Hanuman are widely believed to grant swift blessings to sincere devotees. Lord Ganesha is worshipped first to remove all obstacles, while Lord Shiva is known as Ashutosh, meaning one who is easily pleased by pure devotion.

Short Videos

Audio Clips

Text Version

ಎರಡನೆಯದು ಸ್ವಲ್ಪ ನಮ್ಮ ದೇಹದ ರಚನೆ ಬಗ್ಗೆ ಚಿಂತನೆಯನ್ನು ಮಾಡಲಿಕ್ಕೆ ನಾವಿಲ್ಲಿ ಉಪಕ್ರಮಿಸಬಹುದು. 33 ಸಂಖ್ಯೆ. ಪ್ರತಿಯೊಬ್ಬ ಮನುಷ್ಯ ಹುಟ್ಟಿದಾಗ ಅವನ ಬೆನ್ನುಮೂಳೆ ಇರುತ್ತಲ್ಲ ಮೇರುದಂಡ ಅಂತ ಕರೀತೀವಲ್ಲ ಆ ಮೇರುದಂಡ ವರ್ಟಿಬ್ರಲ್ ಕಾಲಂ ಆಂಗ್ಲ ಭಾಷೆಯಲ್ಲಿ ಅಲ್ಲಿ 33 ವರ್ಟಿಬ್ರೇಸ್ ಇರುತ್ತೆ. 33 ವರ್ಟಿಬ್ರೇಸ್ ಇರುತ್ತೆ. ಆ ಮಗು ಬೆಳೆದ ಹಾಗೆ ಬೆಳೆದ ಹಾಗೆ ಏನಾಗೋಗುತ್ತೆ 24 ಮಿಕ್ಕು ನಮ್ಮ ಟೈಲ್ ಬೋನ್ ಅಂತ ಹೇಳ್ತೇವೆ ಕಾಕ್ಸಿಕ್ಸ್ ಅಂತ ಹೇಳ್ತಾರೆ ಅದನ್ನ. ಆಂಗ್ಲ ಭಾಷೆಯಲ್ಲಿ ಮೆಡಿಕಲ್ ಟರ್ಮಿನಾಲಜಿ. ಅದು ಆ 33ರಲ್ಲಿ ನಾಲ್ಕು ಮೂಳೆ ಸೇರಿಕೊಂಡು ಅಲ್ಲಿ ಘನಿಭವಿಸುತ್ತೆ, ಅಲ್ಲಿ ಗಟ್ಟಿಯಾಗುತ್ತೆ, ಫ್ಯೂಸ್ ಆಗುತ್ತೆ. ಒಂದಕ್ಕೊಂದು ಬೆಸೆದುಕೊಂಡು ಹೋಗುತ್ತೆ. ಅದರ ಮೇಲ್ಗಡೆ ಇರತಕ್ಕಂತಹ ತ್ರಿಕೋನಾಸ್ತಿ ಸ್ಯಾಕ್ರಮ್ ಅಂತ ಕರೀತೀವಿ ಅಂದ್ರೆ ನಮ್ಮ ನಡುವಿನ ಮೂಳೆಯ ಒಂದು ಹಿಂಗಿರುತ್ತೆ ತ್ರಿಕೋಣಾಕಾರವಾದ್ದಕ್ಕೆ ತ್ರಿಕೋನಾಸ್ತಿ ಸ್ಥಿರ ಸ್ಥಿರಾಸ್ತಿ ಅಂತ ಕೂಡ ಕರೀತಾರೆ ಅದನ್ನ. ಅದೇನಾಗುತ್ತೆ ಇನ್ನು ಐದು. ಈ ತರ ವರ್ಟಿಬ್ರಲ್ ಕಾಲಮ್ಸ್ ಅಥವಾ ವರ್ಟಿಬ್ರೆಯಿಂದ ಏನಾಗುತ್ತೆ ಅದು ಘನೀಭವಿಸಿ ಫ್ಯೂಸ್ ಆಗಿ ನಮ್ಮ ಸೊಂಟದ ಮೂಳೆ ಆಗುತ್ತೆ. ನಮ್ಮ ಪೃಷ್ಠ ಭಾಗ ಸೊಂಟ ಭಾಗ ಬಂದಿರ್ತಕ್ಕಂತದ್ದು ಅಲ್ಲಿ. ಆನಂತರ ಏನಾಯ್ತು 24 ಹಂಗೆ ಇರುತ್ತೆ. ಈ 33 ಹುಟ್ಟಿದಾಗಿಂದ ಇತ್ತು, ಐದು ಸೇರಿಸಿ ಸ್ಯಾಕ್ರಮ್ ಆಯ್ತು, ಇನ್ನು ನಾಲ್ಕು ಸೇರಿ ಏನಾಯ್ತು ಕಾಕ್ಸಿಕ್ಸ್ ಆಯ್ತು. ಒಟ್ಟಿನಲ್ಲಿ 33 ಸ್ತರದ ಈ ವರ್ಟಿಬ್ರಲ್ ಕಾಲಮ್ಸ್ ಕಶೇರುಕಗಳು ನಮ್ಮ ಮೇರುದಂಡದಲ್ಲಿ ಬ್ಯಾಕ್ ಬೋನಿನಲ್ಲಿ. ಫಿಸಿಯೋಲಾಜಿಕಲಿ ದೈಹಿಕವಾಗಿ ನನ್ನಲ್ಲಿ, ನಿಮ್ಮಲ್ಲಿ, ನಿಮ್ಮ ಪಕ್ಕದ ಮನೆಯವರಲ್ಲಿ, ಹಿಂದಿನ ಮನೆಯವರಲ್ಲೂ ಎಲ್ಲರಲ್ಲೂ ಇದೆ. ಈ ಬೆನ್ನುಮೂಳೆಯ ತುದಿಯಲ್ಲಿ ಯೋಗಶಾಸ್ತ್ರಾನುಸಾರವಾಗಿ ಒಂದು ಅತ್ಯದ್ಭುತವಾಗಿರತಕ್ಕಂತಹ ಒಂದು ಶಕ್ತಿ ವಾಸ ಮಾಡಿರುತ್ತೆ. ನೀವೆಲ್ಲ ಕೇಳಿರ್ತೀರಿ ಚಿರಪರಿಚಿತ ಪದ ಚಿರಪರಿಚಿತ. ಅದಕ್ಕೆ ಏನು ಹೆಸರು ಕುಂಡಲಿನಿ ಅಂತ ಹೆಸರು. ಕುಂಡಲಿನಿ ಶಕ್ತಿ. ಇದು ಪುರಾವೆ ಉಂಟು ಇದಕ್ಕೆ. ಅದು ಸ್ಥೂಲ ದೇಹದಲ್ಲಿ ಇರೋದಿಲ್ಲ. ಆ ಬೆನ್ನು ಮೂಳೆಯನ್ನು ಬಿಟ್ಟು. ಅದರ ಒಳಗಡೆ ತಿರುಗಿ ಸುಶುಮ್ನಾ ನಾಡಿ, ಅದರೊಳಗಡೆ ಚಿತ್ರಿಣಿ, ಅದರೊಳಗಡೆ ಬ್ರಹ್ಮನಾಡಿ ಅಂತ ಇರುತ್ತೆ. ಅಲ್ಲಿ ಸೂಕ್ಷ್ಮ ದೇಹದಲ್ಲಿ ಇರುತ್ತೆ ಅಂತ ಅನುಭವಿಸಿದ ಮೇಲೆ ಗೊತ್ತಾಗುತ್ತೆ ಅದು. ಒಂದು ಅನುಭವ ಆದರೂ ಸಾಕು ನಂಬುತ್ತೀರಿ ನೀವು. ಅನುಭವ ಆಗೋಕೆ ಬಹಳ ಪ್ರಯಾಸ, ಪ್ರಯತ್ನ ಎರಡು ಬೇಕಾಗುತ್ತೆ. ಆ ಶಕ್ತಿ ಏನಾಗುತ್ತೆ, ಆ ಕೆಳಗಡೆ ಆ ನಾಲ್ಕು ಗಟ್ಟಿಯಾಗಿದೆ, ಅದು ಮೇಲ್ಗಡೆ ಐದು ಗಟ್ಟಿಯಾಗಿಬಿಟ್ಟಿದೆಯಲ್ಲ, ಮೇಲೆ ಏರಲಿಕ್ಕೆ ಅದೇ ಅಡ್ಡಿ. ಅದು ಯೋಗ ಮಾರ್ಗದಿಂದ ಗುರುಮುಖೇನ ಕಲಿತು ಅದನ್ನ ಮೇಲೆಬ್ಬಿಸಿಕೊಂಡು ಈ 33ರನ್ನು ನೀವು ದಾಟಿಸಿಬಿಟ್ಟರೆ ಪುರುಷೋತ್ತಮರಾಗಿ ಹೋಗ್ತೀರಾ ನೀವು. ಅದಕ್ಕೆ ಪುರುಷೋತ್ತಮ ಮಾಸ ಅಂತ ಹೇಳಿ ಕರೆದಿರೋದು. ಪುರುಷೋತ್ತಮ ಅಂತ ಅಂದ್ರೆ ಬರೀ ವಿಷ್ಣು ಅಂತ ಅಲ್ಲ. ಬರೀ ಗಂಡಸು ಅಂತ ಅಲ್ಲ. ಹೆಂಗಸರಿಗೂ ಕೂಡ ಪುರುಷ ಅಂತಕ್ಕಂತ ಪದಪ್ರಯೋಗ ಉಂಟು ಸಂಸ್ಕೃತದಲ್ಲಿ. ಆದ್ದರಿಂದ ನಾವು ಪುರುಷೋತ್ತಮರಾಗಬೇಕು ಅಂದ್ರೆ ನೋಡಿ ಈ ಅಧಿಕ ಮಾಸ ಒಳ್ಳೆಯ ಕಾಲ. ಈ 33 ಪದಾರ್ಥಗಳನ್ನು ನಾವು ದಾನ ಮಾಡುವುದರಿಂದ ಅದರ ಸಂಕೇತ ಏನು ಅಂದ್ರೆ ನಾನು ಊರ್ಧ್ವಗಾಮಿಯಾಗಿ ನನ್ನ ಜೀವನವನ್ನು ಇನ್ನು ಮುಂದೆ ನಾನು ನಡೆಸುತ್ತೇನೆ. ನನ್ನ ಕುಂಡಲಿನಿ ಶಕ್ತಿಯನ್ನು ಸರ್ಪೆಂಟ್ ಫೈರ್ ಅಂತ ಕರೀತಾರೆ ಅದನ್ನ ಆಂಗ್ಲ ಭಾಷೆಯಲ್ಲಿ ತರ್ಜುಮೆ ಮಾಡಿದ್ರೆ ಹಾಗೆ ಅದನ್ನು ನಾನು ಉರ್ಧ್ವಗತಿಯಾಗಿ ನಾನು ತೆಗೆದುಕೊಂಡು ಹೋಗಿ ನಾನು ನನ್ನ 33 ವರ್ಟಿಬ್ರಲ್ ಕಾಲಮ್ಸ್ ಅನ್ನು ದಾಟಿಸಿ ಆಜ್ಞಾ ಚಕ್ರವನ್ನು ದಾಟಿಸಿ ನಾನು ಸಹಸ್ರಾರಿಕೆ ಸೇರಿಸ್ತಾ ಇದ್ದೀನಿ ಇಲ್ಲಿ. ಇಲ್ಲಿ ಸೇರಿಸ್ತಾ ಇದ್ದೀನಿ ಬ್ರಹ್ಮರಂಧ್ರವನ್ನು ಭೇದನ ಮಾಡ್ತಾ ಇದ್ದೀನಿ. ಅದರ ದ್ಯೋತಕವಾಗಿ ಸ್ವಾಮಿ ಇಲ್ಲಿ ತೆಗೆದು ಅಮ್ಮ ಇದನ್ನ ತೆಗೆದು ಕೋ ಅಂತ ಮುತ್ತೈದೆ ಘರ್ಷಣ ಕುಂಕುಮವನ್ನು ಕೊಡುವುದು, ಬಳೆ ಬಿಚ್ಚೋಲೆ ಕೊಡುವುದು, ಸೀರೆ ಕೊಡುವುದು, ಬ್ಲೌಸ್ ಪೀಸ್ ಕೊಡುವುದು ಮಾಡುವುದರಿಂದ ಏನಾಗುತ್ತೆ ಅಂತಂದ್ರೆ ತಿಳಿದೋ ತಿಳಿಯದೆಲೋ. ಆಂತರಿಕವಾಗಿ ಆ ಶಕ್ತಿ ಸಂಚಾರ ಊರ್ಧ್ವಗಾಮಿಯಾಗಿ ಈ ಅಧಿಕ ಮಾಸದಲ್ಲಿ ಉಂಟಾಗುತ್ತೆ ಅಂತ ಅರ್ಥ. ಅದು ಊರ್ಧ್ವಗಾಮಿಯಾಗೋಕೆ ಈ ಒಂದು ಖಗೋಳದಲ್ಲಿ ಅಧಿಕ ಮಾಸ ಬಂದಾಗ ಅದು ಪ್ರಯತ್ನ ಪಡುತ್ತಂತೆ. ಯಾವುದೋ ಆ ಒಂದು ಶಕ್ತಿ ಜನ್ಮ ಜನ್ಮಾಂತರದಿಂದ ಸುಶುಪ್ತಿ ನಿದ್ದೆಯಲ್ಲಿ ಇರತಕ್ಕಂತಹ ಆ ಶಕ್ತಿ. ಇರುತ್ತೆ. ಅದಕ್ಕೆ ಯಾವುದಾದರೂ ಒಂದು ಹೊರಗಿನಿಂದ ಒಂದು ಸ್ಟಿಮುಲೈ ಯಾವುದಾದರೂ ಒಂದು ಇಂಬು ಕೊಡುವಿಕೆ ಆಗಬೇಕಲ್ಲ ಅದು ಈ ಅಧಿಕ ಮಾಸದಲ್ಲಿ ಈ 33 ಪದಾರ್ಥಗಳನ್ನು 33 ಸಂಖ್ಯೆಯಲ್ಲಿ ದಾನ ಮಾಡತಕ್ಕಂತದ್ದಾಗಿ ನಮ್ಮ ಹಿರಿಯರು ಹೇಳಿದ್ದಾರೆ. ಅದು 33 ಕಜ್ಜಾಯಗಳು ಮೊದಲನೆಯ ಹಂತ. 33 ಬಿಂದಿಗೆ, 33 ಚೊಂಬು ಅಥವಾ 33 ಲೋಟಗಳಷ್ಟು ಪಾನಕ. ಅದೇ ರೀತಿಯಾಗಿ 33 ಜನರಿಗೆ ಊಟೋಪಚಾರ. ಅದೇ ರೀತಿಯಾಗಿ 33 ಬೀಸಣೆಗಳನ್ನು ಕೊಡ್ತಕ್ಕಂತದ್ದು. ಅದೇ ರೀತಿಯಾಗಿ 33 ಗಂಟೆ ದಾನವನ್ನು ಮಾಡತಕ್ಕಂತದ್ದು ಅಥವಾ 33 ಹೆಣ್ಣು ಮಕ್ಕಳಿಗೆ ಪುಷ್ಪ ದಾನವನ್ನು ಮಾಡತಕ್ಕಂತದ್ದು. ಇವರು ಮಾಡಿದರೆ ಏನಾಗುತ್ತೆ ನಮ್ಮ ದೇಹದಲ್ಲಿ ಇರತಕ್ಕಂತಹ ಗ್ರಂಥಿಗಳು ಅಂತ ಹೇಳ್ತೀವಿ. ಅದು ಹೋಗ್ತಾ ಹೋಗ್ತಾ ಸಡಿಲಗೊಂಡು ಸಡಿಲಗೊಂಡು ಒಂದೇ ಮಾಸದಲ್ಲಿ ಆಗುತ್ತಾ ಅಂತ ಕೇಳಬೇಡಿ. ಅದು ಅವರವರ ಸಂಸ್ಕಾರ ಅನುಸಾರವಾಗಿ ಒಂದು ಅಧಿಕ ಮಾಸದಲ್ಲಿ ಆಗಬಹುದು ಅಥವಾ ಜೀವನದಲ್ಲಿ 10 ಅಧಿಕ ಮಾಸದಲ್ಲಿ ಆಗಬಹುದು. ಒಬ್ಬ ಮನುಷ್ಯ ಒಬ್ಬ ಒಂದು ಜೀವನದಲ್ಲಿ ಜಾಸ್ತಿ ಅಂತಂದ್ರೆ ಒಂದು 30 ರಿಂದ 33 ಅಧಿಕ ಮಾಸ ನೋಡಬಹುದು ನೋಡಿ. 33 ಅಧಿಕ ಮಾಸ ನೋಡಲಿಕ್ಕೆ ಸಾಧ್ಯ ಒಬ್ಬ ಮನುಷ್ಯ ನೋಡಿ ಅಲ್ಲೂ 33 ಬಂತು. ಯಾಕೆ 100 ವರ್ಷ ಬದುಕಿದ್ರೆ, ಮೂರು ವರ್ಷಕ್ಕೆ ಒಂದು ಅಧಿಕ ಮಾಸ ಅಂದ್ರೆ 91 ವರ್ಷ 99 ಆಗೋಯ್ತು. 100 ದಾಟಿದ ಅಂದ್ರೆ ಮುಗಿದು ಹೋಯ್ತು. ಅಲ್ವೇ? ಅದಕ್ಕಿನ್ನ ಬದುಕಲಿಕ್ಕೆ ಈ ಕಲಿಗಾಲದಲ್ಲಿ ಈಗಿನ ಪರಿಸ್ಥಿತಿ ಅಂತೂ ಸಾಧ್ಯ ಇಲ್ಲ. ನೋಡಿ ಅಲ್ಲೂ 33 ಸಂಖ್ಯೆ ಬಂತು. ಇದರ ಅಂತರ ಅರ್ಥ ಏನು? ಈ 33ರಲ್ಲೂ ನೀನು ಈ ತರದ ದಾನವನ್ನು 33 33 ಕೊಡ್ತಾ ಹೋಗು. 33 ಕಜ್ಜಾಯ, 33 ಲೋಟ ಚೊಂಬು ಅಥವಾ ಬಿಂದಿಗೆಯಲ್ಲಿ ಪಾನಕ, ಹಾಲು, ಮೊಸರು ಇತ್ಯಾದಿಗಳು. 33 ಜನಕ್ಕೆ ಬಿಸಿ ಬಿಸಿಯಾಗಿರತಕ್ಕಂತಹ ಅಡುಗೆ. ಬೇಗ ಸಾಮಾನು ಕೊಟ್ರಾಗಲ್ಲ ಕರೆದೆ ಊಟ ಹಾಕ್ಬೇಕು 33 ಜನಕ್ಕೆ. 33 ಜನರಿಗೆ ಬೀಸಣಿಗೆ ಕೊಡಿ ಇಲ್ಲಾಂದ್ರೆ ಫ್ಯಾನ್ ಕೊಡಿ ನಿಮಗೆ ಶಕ್ತಿ ಕೊಟ್ಟಿದ್ರೆ ಭಗವಂತ. ಅಥವಾ 33 ಜನರಿಗೆ 33 ಗಂಟೆಗಳನ್ನು ದೇವಸ್ಥಾನಗಳಿಗೆಲ್ಲ ಬ್ರಾಹ್ಮಣನಿಗೆ ಕೊಡಬೇಕು ಅವನು ಹೋಗಿ ದೇವಸ್ಥಾನಕ್ಕೆ ಕೊಟ್ಕೊಳ್ಳಿ. ಬ್ರಾಹ್ಮಣನಿಗೆ 33 ಗಂಟೆ ಅಥವಾ 33 ಮುತ್ತೈದೆಯರಿಗೆ ಏನು ಮಾಡಿ ಹೂವನ್ನು ಕಟ್ಟಿರುವ ಘಮಘಮಿಸುವ ಹೂವನ್ನು ದಾನ ಮಾಡತಕ್ಕಂತದ್ದು ಮಾಡ್ತಾ ಬಂದರೆ ಒಂದೊಂದು ಅಧಿಕ ಮಾಸದಲ್ಲಿ ಒಂದೊಂದು ಹಂತವನ್ನು ನಾವು ದಾಟಿ ದಾಟಿ ದಾಟಿ ದಾಟಿ ದೇಹಪಾತ ಆಗುವಷ್ಟರಲ್ಲಿ ತಿಳಿಯದಲೇ ಒಂದು ಯೋಗಾಭ್ಯಾಸವನ್ನು ಮಾಡಿ. ನಾವು ಸದ್ಗತಿಯನ್ನು ಪಡೆಯಲಿಕ್ಕೆ ಸಾಧ್ಯವಾಗುತ್ತೆ ಅಂತಕ್ಕಂತದ್ದು ಅಧಿಕ ಮಾಸದ 33 ಸಂಖ್ಯಾಚರಣೆಯಲ್ಲಿ ದಾನ ಧರ್ಮಾದಿಗಳನ್ನು ಮಾಡತಕ್ಕಂತದ್ದು ಪುರುಷೋತ್ತಮನಾಗಿರತಕ್ಕಂತಹ ಮಹಾವಿಷ್ಣುವಿನ ಧ್ಯಾನ ಪ್ರಸರವಾಗಿ ಕೊಡ್ತಕ್ಕಂತದ್ದು ಹಾಗೂ ಈ ಒಂದು ಬರೀ ಪುರುಷರಾಗಿರತಕ್ಕಂತವರು ಹೆಂಗಸರು ಗಂಡಸರು ಸೇರಿ ಹೇಳ್ತಾ ಇರತಕ್ಕಂತದ್ದು ಆ ಉತ್ತಮತೆಯನ್ನು ಹೊಂದುವುದು ಉತ್ತಮ ಗತಿಯನ್ನು ಹೊಂದತಕ್ಕಂತದ್ದು ವೈಕುಂಠವನ್ನು ಹೊಂದತಕ್ಕಂತದ್ದು ಆವಾಗ ಪುರುಷೋತ್ತಮನ ಬಳಿಯಲ್ಲಿ ಇರ್ತೀವಲ್ವೇ ನಾವು ಆದ್ದರಿಂದ ಆ ತರದ ಒಂದು ಗತಿಯನ್ನು ಕೊಡ್ತಕ್ಕಂತದ್ದು ಅಧಿಕ ಮಾಸದ ಒಂದು ವ್ರತ ಆಗಿದೆ. ಆದ್ದರಿಂದ ಅಧಿಕ ಮಾಸದ ಎಲ್ಲರೂ ಕೂಡ ನಾವು ಇದನ್ನ ಪ್ರಾಮಾಣಿಕವಾಗಿ ಇದರ ಒಂದು ಅಭ್ಯಾಸವನ್ನು ಮಾಡೋಣ. ಇದರಿಂದ ನಮ್ಮೆಲ್ಲರಿಗೂ ಶುಭ ಮತ್ತು ಶ್ರೇಯಸ್ಸು ಆಗುತ್ತೆ. ಮಂಗಳಂಬೋಯ.