ಪರಂಪರೆಯ ಪಥದಲ್ಲಿ
ಪರಮಾರ್ಥದ ಪಯಣ...
Full Video on youtube
ಶಾಸ್ತ್ರ ಸಮ್ಮತಿಯಿಂದ ವಾಸ್ತುವನ್ನು ಪಾಲಿಸಿ ನೆಮ್ಮಂದಿಯಿಂದ ಇರಲು ಸಾಧ್ಯ
In Hindu tradition, Lord Ganesha, Lord Shiva, and Lord Hanuman are widely believed to grant swift blessings to sincere devotees. Lord Ganesha is worshipped first to remove all obstacles, while Lord Shiva is known as Ashutosh, meaning one who is easily pleased by pure devotion.
Short Videos
Audio Clips
Text Version
ನೀವು ಗೃಹ ಸಂಕೀರ್ಣದಲ್ಲಿದ್ದರೆ ಅಂದರೆ ಎಲ್ಲಿ ನೀವು ಯಾವುದಾದರೂ ಒಂದು ಅಪಾರ್ಟ್ಮೆಂಟ್ ಅಲ್ಲಿ ಇದ್ದರೆ ಆಗುವುದಿಲ್ಲ. ಅಲ್ಲೂ ಮಾಡಿಕೊಳ್ಳಬಹುದು. ಅಂದರೆ ಯಾವುದಾದರೂ ಒಂದು ಬಾಲ್ಕನಿ ಕಡೆಗೆ. ಆದರೆ ಪ್ರತಿಯೊಂದು ಮನೆಗೂ ಕನಿಷ್ಠ ಎರಡು ಬಾಗಿಲನ್ನು ಇಡಬೇಕು. ಆ ಎರಡು ಬಾಗಿಲು ಎಲ್ಲಿಡಬೇಕು ಅಂತ ನಿಯಮ ಕೂಡ ಇದೆ. ಅದನ್ನು ತಿರುಗ ಗ್ರಹದ ವಿಂಗಡೆಯನ್ನು ಮಾಡಿಬಿಟ್ಟಿದ್ದಾರೆ. ಸೂರ್ಯ, ಚಂದ್ರ, ಕುಜ, ಬುಧ. ಅಹಾಂ. ವಾಸ್ತುಶಾಸ್ತ್ರಕ್ಕೂ ಅದಕ್ಕೂ ಸಂಬಂಧ ಇಲ್ಲ ಹೇಳಿಲ್ಲ. ಕಾಲಾನಂತರದಲ್ಲಿ ಈಗಿನ ಕಾಲದವರು ಬರೆದಂತಹ ವಾಸ್ತುಶಾಸ್ತ್ರ ಇದು. ಏನೇನೋ ಹೇಳುತ್ತಾರೆ. ಈಶಾನ್ಯದಲ್ಲಿ ತಗ್ಗಿದ್ದರೆ ನೀವು ಕೋಟ್ಯಾಧಿಪತಿ ಆಗ್ತೀರಾ ಅಂತ. ನೈರುತ್ಯದಲ್ಲಿ ತಗ್ಗಿದ್ದರೆ ನಿಮಗೆ ತಿನ್ನಕ್ಕಿಲ್ದಂಗೆ ಆಗಿಹೋಗುತ್ತೆ ನೀವು. ಹಾಳಾಗಿ ಹೋಗ್ತೀರಾ ಅಂತ ಹೇಳಿ ಹೇಳುತ್ತಾರೆ. ಆ ತರದ್ದು ನಮ್ಮ ಭಾರತ ದೇಶ ಹೇಗಿದೆ ಅಂತ ಸ್ವಲ್ಪ ಯೋಚನೆ ಮಾಡಿ. ಭಾರತ ದೇಶ ಈಶಾನ್ಯದಲ್ಲಿ ಹಿಮಾಲಯ ಪರ್ವತ ಇದೆ. ಇಡೀ ಪ್ರಪಂಚದಲ್ಲಿ ಅತ್ಯಂತ ಎತ್ತರವಾಗಿರುವ ಪರ್ವತ. ಭಾರತ ದೇಶದ ಪಶ್ಚಿಮದಲ್ಲಿ, ದಕ್ಷಿಣದಲ್ಲಿ, ನೈರುತ್ಯದಲ್ಲಿ ಮಹಾಸಾಗರಗಳಿವೆ. ಆದರೆ ಇಲ್ಲಿ ಇರತಕ್ಕಂತಹ ಸುಖ, ಶಾಂತಿ ಬೇರೆ ದೇಶಗಳಲ್ಲಿ ಇಲ್ಲ. ನಾನು ಹೋಗಿ ನೋಡಿ ಬಂದಿದ್ದೇನೆ ಸುಮಾರು ದೇಶಗಳು. ಇಲ್ಲಿ ಇರತಕ್ಕಂತಹ ಇದೇ ನಿಜವಾದಂತಹ ಜ್ಞಾನಭೂಮಿ, ಕರ್ಮಭೂಮಿ ಮತ್ತು ದೇವಭೂಮಿ ಆಗಿದೆ. ಇಲ್ಲಿ ಹುಟ್ಟಿರತಕ್ಕಂತಹ ವಿಜ್ಞಾನಿಗಳು, ಜ್ಞಾನಿಗಳು, ತತ್ವಜ್ಞಾನಿಗಳು ಎಲ್ಲೂ ಹುಟ್ಟಿಲ್ಲ. ಮಹಾನುಭಾವರೆಲ್ಲ ಹುಟ್ಟಿರತಕ್ಕಂತದ್ದು ಇದೇ ಪುಣ್ಯ ಭೂಮಿಯಲ್ಲಿ ಆಗಿದೆ. ಆ ತರದಲ್ಲಿ ಸಾರಾಸಗಟು ಯಾರು ಒಬ್ಬ ಮನುಷ್ಯ ಬರೆದಂತಹ ಪುಸ್ತಕವನ್ನು ಆಧರಿಸಿ ದಯವಿಟ್ಟು ವಾಸ್ತುವಿನ ಪ್ರಕಾರ ಮನೆ ಕಟ್ಟುತ್ತಾ ಇದ್ದೀನಿ ಅಂತ ತಪ್ಪು ತಪ್ಪು ಮನೆ, ಕಚೇರಿ ಇತ್ಯಾದಿಗಳ ರಚನೆಯನ್ನು ಮಾಡಬೇಡಿರಿ. ನಾನು ಹೇಳ್ತಾ ಇರೋದಲ್ಲ. ಶಾಸ್ತ್ರ ಹೇಳಿದ್ದನ್ನು ನಿಮ್ಮ ಮುಂದೆ ನಾನು ಹಾಗೆ ಪ್ರಸ್ತುತ ಪಡಿಸುತ್ತಾ ಇದ್ದೇನೆ. ಇದಕ್ಕೆ ಯಾವ ಬಣ್ಣವನ್ನು ಕಟ್ಟಿಲ್ಲ. ಹೆದರಿಸತಕ್ಕಂತಹ ಗೋಜಿಗೂ ಹೋಗಿಲ್ಲ. ಯಥಾವತ್ ತದ್ವತ್ ಇದಮಿತ್ಥಂ ಅಂತ ಹೇಳಿ ಇಟ್ಟಿದ್ದೇನೆ. ಆದ್ದರಿಂದ ಮನೆ ನಿರ್ಮಾಣವನ್ನು ಒಮ್ಮೆ ಮಾಡಿದರೆ ಸಾಕಾಗಿ ಹೋಗುತ್ತೆ. ಏನೋ ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಅಂತ ಹೇಳಿ. ಆದ್ದರಿಂದ ಅಂತಹ ಒಂದು ಮನೆ ಮಾಡಬಹುದು. ಗೃಹ ಆಗೋದಿಲ್ಲ. ಹೌಸ್ ಆಗುತ್ತೆ. ಅದು ಹೋಮ್ ಆಗೋದಿಲ್ಲ. ಆದ್ದರಿಂದ ಅಂತಹದ ಒಂದು ಗೃಹದಲ್ಲಿ ನೀವು ಗೃಹಸ್ಥರಾಗಿ ಸುಖವಾಗಿ ಶಾಂತಿಯಿಂದ ನೆಮ್ಮದಿಯಿಂದ ಬಾಳಬೇಕು ಅಂತಂದರೆ ಈ ತರದ ತಪ್ಪು ವಾಸ್ತು ಪರಿಕಲ್ಪನೆಗಳನ್ನು ಬಿಟ್ಟು ಸರಿಯಾದವರ ಹತ್ತಿರದಲ್ಲಿ ಈ ವಾಸ್ತುವಿನ ಒಂದು ರಚನೆಯನ್ನು ಮಾಡಿಸಿಕೊಂಡು ಎಷ್ಟು ಅಗಲ, ಎಷ್ಟು ಉದ್ದ, ಎಷ್ಟು ಎತ್ತರ ಇರಬೇಕು, ಯಾವ ಸೈಟ್ ತೆಗೆದುಕೊಳ್ಳಬೇಕು, ಅಲ್ಲಿ ದೋಷ ಇದ್ದರೆ ಅದಕ್ಕೆ ಏನು ಚಕ್ರಸ್ಥಾಪನೆ ಮಾಡಬೇಕು ಮತ್ತು ಗೃಹ ಪ್ರವೇಶವನ್ನು ಮಾಡಬೇಕು. ಹಿಂದಿನ ದಿನ ರಾತ್ರಿ ತಿರುಗಿನ ದಿವಸ ಬೆಳಗ್ಗೆ ಗೃಹ ಪ್ರವೇಶ. ಶಾಸ್ತ್ರ ಒಪ್ಪುವುದಿಲ್ಲ. ಮೂರು ಸತಿ ಅದಕ್ಕೆ ವಾಸ್ತು ಹೋಮವನ್ನು ಹೇಳಿದೆ ಶಾಸ್ತ್ರದಲ್ಲಿ. ನಿಜವಾದ ವಾಸ್ತುವಿನಲ್ಲಿ. ಆದಿ, ಮಧ್ಯ, ಅಂತ್ಯದಲ್ಲಿ. ಅಂತ್ಯ ಅನ್ನೋದು ಗೃಹ ಪ್ರವೇಶದ್ದು. ಅದೂ ಸರಿಯಾಗಿ ಯಾರು ಮಾಡಿಸ್ತಾ ಇಲ್ಲ, ಮಾಡ್ತಾನೂ ಇಲ್ಲ. ಯಾರು ಮಾಡಿಕೊಡತಕ್ಕಂತಹ ಪುರೋಹಿತ ಮಹಾಶಯರುಗಳು. ಆದ್ದರಿಂದ ಈ ಮಾಡಿಸಿಕೊಳ್ಳತಕ್ಕಂತಹ ಗೃಹಸ್ಥರು ಮತ್ತು ಮಾಡತಕ್ಕಂತಹ ಪುರೋಹಿತರ ವರ್ಗದವರು ಕೂಡ ಇವರಿಬ್ಬರೂ ಕೂಡ ಒಡಂಬಡಿಕೆಯಿಂದ ಸಶಾಸ್ತ್ರೀಯವಾಗಿ ಯಥಾಶಕ್ತಿಯಾಗಿ ಮಾಡಬಹುದು. ಚಿಕ್ಕದಾಗಲೂ ಮಾಡಬಹುದು. ಆದರೆ ಶಾಸ್ತ್ರೀಯವಾಗಿ ಮಾಡಬೇಕು. ಆ ರೀತಿಯಾಗಿ ಒಂದು ಗೃಹ ಪ್ರವೇಶವನ್ನು ಮಾಡಿಕೊಡತಕ್ಕಂತದ್ದು ಕೂಡ ನಿಮ್ಮ ಮನೆಯ ಶುಭ ವಾಸ್ತುವನ್ನು ಉಂಟುಮಾಡಿ ನಿಮಗೆ ಏಳಿಗೆ ಉಂಟಾಗುತ್ತೆ ಅಂತ ಹೇಳಿ. ಹೇಗೆ ಹೇಳ್ತಾರೆ ಅಂದ್ರೆ, ಎ ಸೌಂಡ್ ಮೈಂಡ್ ಇನ್ ಎ ಸೌಂಡ್ ಬಾಡಿ ಅಂತ ಹೇಳುತ್ತೆ. ನಮ್ಮ ಬುದ್ಧಿ, ನಮ್ಮ ಮನಸ್ಸು ಯಾವಾಗ ನೆಮ್ಮದಿಯಾಗಿರುತ್ತೆ ಅಂತಂದ್ರೆ ನಮ್ಮ ದೇಹ ಚೆನ್ನಾಗಿದ್ದರೆ. ಅದೇ ರೀತಿಯಾಗಿ ದೇಹ ಇರತಕ್ಕಂತಹ ಸ್ಥಳ ಯಾವುದು? ಒಂದು ಮನೆ, ಗೃಹ. ಆ ರೀತಿಯಾಗಿ ಮನೆಯನ್ನು ಚೆನ್ನಾಗಿ ಮಾಡಿಕೊಳ್ಳಬೇಕು. ದೇವಸ್ಥಾನವನ್ನು ಎಷ್ಟೋ ಭಯ, ಭಕ್ತಿ, ವಿಶ್ವಾಸದಿಂದ ನೋಡ್ತೀವೋ ನಮ್ಮ ನಮ್ಮ ಮನೆಯನ್ನು ಕೂಡ, ಬೇರೆಯವರ ಮನೆಯನ್ನು ಕೂಡ ದೇವಸ್ಥಾನದೋಪಾದಿಯಲ್ಲಿ ನೋಡತಕ್ಕಂತದ್ದನ್ನ ಅಳವಡಿಸಿಕೊಳ್ಳಬೇಕು. ಅಂದರೆ ಅದಕ್ಕೆ ಸಮನಾಗಿರತಕ್ಕಂತಹ ಒಂದು ರಚನೆಯನ್ನು ನಾವು ಮನೆಯನ್ನು ಮಾಡಬೇಕು. ಇಷ್ಟಾ ಬಂದ ಹಾಗೆ ಮಾಡತಕ್ಕಂತದ್ದಲ್ಲ. ಪೂರ್ವಕ್ಕೆ ಹತ್ತಬಾರದು, ದಕ್ಷಿಣಕ್ಕೆ ಇಳಿಬಾರದು. ಇವೆಲ್ಲವನ್ನು ಪಕ್ಕಕ್ಕೆ ಇಟ್ಟುಬಿಟ್ಟು ನೀವು ಶಾಸ್ತ್ರ ಅಂದ್ರೇನು? ಶಾಸತೇ ತಸ್ಮಾತ್ ತ್ರಾಯತೇ ಇತಿ ಶಾಸ್ತ್ರಂ. ಅದೊಂದು ರೂಲ್ ಇದೆ ವಾಸ್ತುವಿಗೆ. ಆ ವಾಸ್ತುವಿನ ಪ್ರಕಾರವಾಗಿ ನಡೆದುಕೊಂಡು ಹೋದರೆ ನೋಡಿ ನಿಮ್ಮ ಜೀವನ ಸಕಾರವಾಗಿ ಹೋಗುತ್ತೆ. ಅದರಲ್ಲಿ ಎರಡು ಮಾತೆ ಇಲ್ಲ ಅಂತಕ್ಕಂತದ್ದು ಶಾಸ್ತ್ರದ ಒಂದು ವಿಚಾರ. ಇದನ್ನೆಲ್ಲ ಈ ರೀತಿಯಾಗಿ ನಡೆದುಕೊಳ್ಳೋಣ. ಸುಖ, ಶಾಂತಿ ನಮ್ಮದಾಗಿಸಿಕೊಳ್ಳೋಣ.
