Skip to content Skip to footer

ಪರಂಪರೆಯ ಪಥದಲ್ಲಿ

ಪರಮಾರ್ಥದ ಪಯಣ...

Full Video on youtube

ವಾಸ್ತು ಪ್ರಕಾರ ಮನೆ ಬಾಗಿಲು ಯಾವ ದಿಕ್ಕಿಗೆ ಇರಬೇಕು ?

In Hindu tradition, Lord Ganesha, Lord Shiva, and Lord Hanuman are widely believed to grant swift blessings to sincere devotees. Lord Ganesha is worshipped first to remove all obstacles, while Lord Shiva is known as Ashutosh, meaning one who is easily pleased by pure devotion.

Short Videos

Audio Clips

Text Version

ಶ್ರೀ ಗುರುಭ್ಯೋ ನಮಃ ಹರಿಃ ಓಂ ಈಗಿನ ಕಾಲದಲ್ಲಿ ದೇವರುಗಳು ಅಥವಾ ದೇವತಾ ಸಾಧನೆ ಇದರ ಬಗ್ಗೆ ನಾವು ಹೆಚ್ಚಿನ ಒಂದು ಆಸ್ತೆಯನ್ನು ಜನರು ಹೊಂದಿರತಕ್ಕಂತದ್ದೆಲ್ಲ ನೋಡ್ತಾ ಇದ್ದೇವೆ. ಇದರ ಮಧ್ಯೆ ಏನಾಗಿದೆ ಅಂತಂದ್ರೆ ಯಾವ ದೇವರ ಒಂದು ಸಾಧನೆಯನ್ನು, ಪೂಜೆಯನ್ನು, ಸ್ತೋತ್ರ ಪಾರಾಯಣವನ್ನು, ಮಂತ್ರದ ಜಪವನ್ನು, ಪೂಜೆ ಪುನಸ್ಕಾರವನ್ನು ಮಾಡಬೇಕು, ಯಾವ ದೇವರದು ಮಾಡಬಾರದು. ಅಥವಾ ಯಾವುದಾದರೂ ಒಂದು ದೇವರಿಗೆ ಪೂಜೆ ಮಾಡಿದ್ರೆ ಇನ್ನೊಂದು ದೇವರಿಗೆ ಏನಾದರೂ ನಾವು ಅಪಚಾರ ಮಾಡಿದ ಹಾಗೆಯೋ ಅಥವಾ ಅದನ್ನು ಬಹಳ ಕೀಳಾಗಿ ನೋಡದಂತೆ ಆಗುತ್ತೋ ಅಂತ ಹೇಳಿ ಜನರ ಒಂದು ಮಾನಸದಲ್ಲಿ ಒಂದು ಭಾವನೆ ಉಂಟಾಗಿರತಕ್ಕಂತದ್ದು ನಾವೆಲ್ಲ ಕಂಡಿದ್ದೇವೆ. ಗಣಪತಿ ಪೂಜೆ ಮಾಡಿದ್ರೆ ಆಂಜನೇಯನ ಮಾಡ್ಲಿಲ್ವಲ್ಲ ಅಂತ. ಆಂಜನೇಯನ ಮಾಡಿದ್ರೆ ಈಶ್ವರನ ಮಾಡ್ಲಿಲ್ಲ ಅಂತ. ಈಶ್ವರನ ಮಾಡಿದ್ರೆ ಮಹಾವಿಷ್ಣುದು ಮಾಡ್ಲಿಲ್ಲ ಅಂತ. ಮಹಾವಿಷ್ಣುದು ಮಾಡಿದ್ರೆ ಅಮ್ಮನವರ ಪೂಜೆ ಮಾಡ್ಲಿಲ್ಲ ಅಂತ. ಹೀಗೆ ನಾನಾ ವಿಧವಾಗಿರತಕ್ಕಂತಹ ಮನಸ್ಸಿನಲ್ಲಿ ನಮಗೆ ಕೆಲವು ಭಾವನೆಗಳು ಮೈದೂರುತ್ತಾ ಇದೆ. ಸುಮಾರು ಜನರು ಆ ಪ್ರಶ್ನೆಯನ್ನು ನನ್ನಲ್ಲಿ ಕೇಳಿದ್ದು ಉಂಟು. ದೇವರುಗಳಲ್ಲಿ ಅತ್ಯಂತ ಶ್ರೇಷ್ಠನಾದ ದೇವರು ಯಾರು? ಯಾರ ಪೂಜೆಯನ್ನು ಅಥವಾ ಯಾವ ಅಮ್ಮನವರ ಪೂಜೆಯನ್ನು ಮಾಡಿದರೆ ನಮಗೆ ಅತ್ಯಂತ ಒಳ್ಳೆಯದಾಗುತ್ತೆ? ಅದರ ನಿಮಗೆ ಉಂಟಾಗ್ತಕ್ಕಂತಹ ಅಂದ್ರೆ ಒಂದು ದೇವರ ಪೂಜೆಯನ್ನು ಮಾಡಿದ್ರೆ ಎಲ್ಲರದು ಆಗೋಗ್ಬೇಕು. ಅದೊಂದು ಯಾವುದು ಮಾಡಬೇಕು ಅಂತಕ್ಕಂತದ್ದು. ಇದಕ್ಕೆ ಎರಡು ವಿಧದಲ್ಲಿ ನಾವು ಇದರ ಒಂದು ವಿಮರ್ಶೆಯನ್ನು ಮಾಡಬಹುದು. ಮೊದಲನೆಯದು ನೋಡಿ ಸಾಮಾನ್ಯ ಒಬ್ಬ ಇರ್ತಾನೆ. ಒಂದು ಆಫೀಸ್ನಲ್ಲಿ ಕೆಲಸ ಮಾಡ್ತಾ ಇರ್ತಾನೆ. ಒಂದು ಕಚೇರಿಯಲ್ಲಿ ಒಂದು ಚಿಕ್ಕ ಕಾರಕೂನನಾಗಿ, ಒಂದು ಕ್ಲರ್ಕ್ ಆಗಿ, ಒಂದು ಗುಮಾಸ್ತೆಯಾಗಿ, ಕೆಲಸದವನಾಗಿ, ಪ್ಯೂನ್ ಆಗಿ ಅಟೆಂಡರ್ ಆಗಿ ಕೆಲಸ ಮಾಡ್ತಾ ಇರ್ತಾನೆ. ಆತನ ಒಂದು ವಿವಾಹ ನಿಶ್ಚಯ ಆಯಿತು ಅಂತ ಹೇಳಿ ಅಂದುಕೊಳ್ಳೋಣ. ಯಾರದೋ ಗುಮಾಸ್ತೆದೋ ಅಥವಾ ಅಲ್ಲಿ ಕೆಲಸ ಮಾಡ್ತಾ ಇರತಕ್ಕಂತ ಒಬ್ಬ ಕಾರ್ಕೂನ ಯಾರು ಪ್ಯೂನ್. ಆ ಮದುವೆ ಮನೆಗೆ ಯಾರ್ಯಾರನ್ನು ಕರೀತಾನೆ, ಕಚೇರಿಯಲ್ಲಿ ಇರತಕ್ಕಂತಹ ಎಲ್ಲರನ್ನು ಕರೀತಾನೆ. ಪರಿಚಯ ಇದ್ದರೆ ಮಂತ್ರಿ ಮಹೋದಯರು ಕೂಡ ಬರಬಹುದು. ಆದರೆ, ಆ ವಿವಾಹ ವೇದಿಕೆ ಆ ಸ್ಟೇಜ್ ಮೇಲೆ ಹೆಣ್ಣಿನ ಪಕ್ಕದಲ್ಲಿ ಕುಳಿತುಕೊಂಡು ಎಲ್ಲಾ ಆಭರಣಗಳು ಅಥವಾ ಒಳ್ಳೆಯ ಒಂದು ಬಟ್ಟೆಗಳನ್ನು ಹಾಕಿಕೊಂಡು ಹೂನಾರ ಹಾಕಿಕೊಂಡು ಕುಳಿತುಕೊಳ್ಳತಕ್ಕಂತಹವನು ಅವನು. ಅಲ್ಲಿಗೆ ಮಂತ್ರಿ ಮಹೋದಯರು ಬಂದಾಗ್ಯೂ ಕೂಡ ಅವರನ್ನಲ್ಲಿ ಹೋಗ್ಬಿಟ್ಟು ಮೇಲೆ ಕುಡಿಸೋದಿಲ್ಲ. ಎಲ್ಲಿ? ಆ ಒಂದು ವೇದಿಕೆಯ ಮೇಲೆ ಆ ಸ್ಟೇಜ್ ಮೇಲೆ ಅವರನ್ನು ಕುಡಿಸುವುದಿಲ್ಲ. ನೀವು ಇಲ್ಲಿ ಕುಳಿತುಕೊಳ್ಳಿ ಹೆಣ್ಣಿನ ಪಕ್ಕ ಅಥವಾ ಈ ಕಡೆ ಗಂಡಿನ ಪಕ್ಕ ನೀವು ಕುಳಿತುಕೊಳ್ಳಿ ಸರ್ ನೀವು ಬಹಳ ಮಿನಿಸ್ಟರ್ ನೀವು ಬಹಳ ದೊಡ್ಡ ಜನ ಅಂತ ಹೇಳಿ ಹೇಳಲಿಕ್ಕೆ ಬರೋದಿಲ್ಲ. ಆರತಿ ಮಾಡಿದ್ರು ಗಂಡು ಹೆಣ್ಣಿಗೆ ಮಾಡ್ತಾರೆ ಮೆರವಣಿಗೆ ಮಾಡಿದ್ರು ಗಂಡು ಹೆಣ್ಣಿಗೆ ಮಾಡ್ತಾರೆ. ಅರ್ಥ ಏನು ಅಂತ ಅಂದ್ರೆ ಯಾವ ಒಂದು ವಿಚಾರಕ್ಕೆ ಯಾವ ದೇವರ ಪೂಜೆಯನ್ನು ಯಾವ ಒಂದು ಶಕ್ತಿಯ ಆರಾಧನೆಯನ್ನು ನಾವು ಮಾಡ್ತಾ ಇರ್ತೀವೋ ಅದೇ ಪ್ರಧಾನ ಅದೇ ಶ್ರೇಷ್ಠ ಅಂತ ಹೇಳಿ ಅದರ ಅರ್ಥ. ವಿಘ್ನನಾಶಕ್ಕೆ ಯಾರು ಪೂಜೆಯನ್ನು ಮಾಡಬೇಕು? ಗಣಪತಿನೇ ಶ್ರೇಷ್ಠ ಅಲ್ಲಿ. ಇನ್ಯಾವ ದೇವರು ಶ್ರೇಷ್ಠತೆಯನ್ನು ಮೆರೆಯಲಿಕ್ಕೆ ಆಗಲ್ಲ. ಯಾಕೆಂದರೆ ಯಾರದ್ದು ಮದುವೆನೋ ಅವರದೇ ಮೆರವಣಿಗೆ ಅಂತ ಹೇಳಿ ನಮ್ಮ ಡಿ.ವಿ.ಗುಂಡಪ್ಪನವರು ಹೇಳ್ತಾರೆ ಒಂದು ಕಡೆ. ಇನ್ನು ಎರಡನೇ ಉದಾಹರಣೆಯನ್ನು ನಾವು ನೋಡಿದ್ರೆ ಇನ್ನ ನಮಗೆ ಸ್ಪಷ್ಟ ಆಗಿ ಹೋಗುತ್ತೆ ಇದರ ವಿಚಾರ. ಇದನ್ನು ಭಗವಾನ್ ಶ್ರೀಧರ ಸ್ವಾಮಿಗಳು ಒಂದು ಕಡೆ ಅತ್ಯದ್ಭುತವಾದ ಈ ಉದಾಹರಣೆಯನ್ನು ಕೊಡ್ತಾರೆ. ಈಗ ನೋಡಿ. ನನಗೆ ಅಮ್ಮನವರು ಅಂದ್ರೆ ಬಹಳ ಒಂದು ಭಕ್ತಿ ಅಂತ ಹೇಳಿ ಇಟ್ಕೊಂಡ್ರೆ ಇನ್ನೊಬ್ಬರಿಗೆ ಮಹಾವಿಷ್ಣು, ಇನ್ನೊಬ್ಬರಿಗೆ ಶಿವ, ಇನ್ನೊಬ್ಬನಿಗೆ ಸುಬ್ರಹ್ಮಣ್ಯ, ಇನ್ನೊಬ್ಬ ವ್ಯಕ್ತಿಗೆ ಆಂಜನೇಯ ಸ್ವಾಮಿ. ಈ ರೀತಿಯಾಗಿ ಐದು ಜನ ತಗೊಂಡ್ರೆ ಐದು ದೇವರು ಹೇಳ್ತಾರೆ. ನಮ್ಮಲ್ಲಿ ಒಂದು ವೈಮನಸ್ಯ ಕೂಡ ಉಂಟಾಗುವ ಒಂದು ಸಾಧ್ಯತೆ ಇದೆ. ಏನು? ಅಮ್ಮನವರು ದೊಡ್ಡವಳು ಅಂತ ನಾನು, ಶಿವ ದೊಡ್ಡವ ಅಂತ ಹೇಳಿ ಇನ್ನೊಬ್ಬ ಗಣಪತಿ ಅಂತ ಹೇಳಿ, ಸ್ಕಂದ ಅಂತ ಹೇಳಿ, ಸೂರ್ಯ ಅಂತ ಹೇಳಿ ಈ ರೀತಿಯಾಗಿ ನಮ್ಮ ದೇವರೇ ದೊಡ್ಡವನು, ನಮ್ಮ ದೇವರೇ ದೊಡ್ಡವನು, ನಮ್ಮ ದೇವರನ್ನು ಬಿಟ್ಟರೆ ಇನ್ಯಾವ ದೇವರು ಕೂಡ ದೊಡ್ಡವನು ಅಥವಾ ದೊಡ್ಡವಳು ಅಲ್ಲ ಅಂತಕ್ಕಂತಹ ಭಾವನೆ ಬರುತ್ತೆ. ಈಗ ಇಲ್ಲಿ ಒಂದು ಚಿಕ್ಕ ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ಒಂದು ಕೆಜಿ ಬಂಗಾರದ ಅಮ್ಮನವರ ವಿಗ್ರಹವನ್ನು ನಾನು ಮಾಡಿಸುತ್ತೇನೆ. ಶಿವಭಕ್ತನಾದವನು ಒಂದು ಕೆಜಿ ಬಂಗಾರದ ಶಿವಲಿಂಗವನ್ನು ಮಾಡಿಸುತ್ತಾನೆ. ಗಣಪತಿ ಭಕ್ತನಾದವನು ಒಂದು ಕೆಜಿ ತೂಕದ ಗಣಪತಿಯ ಒಂದು ವಿಗ್ರಹವನ್ನು ಮಾಡಿಸುತ್ತಾನೆ ಬಂಗಾರದ್ದು. ಸುಬ್ರಹ್ಮಣ್ಯನ ಭಕ್ತನು ಅದೇ ರೀತಿ ಮಾಡಿಸುತ್ತಾನೆ. ವಿಷ್ಣು ಭಕ್ತನು ಅದೇ ರೀತಿ ಮಾಡಿಸುತ್ತಾನೆ. ಈಗ ಈ ಐದು ವಿಗ್ರಹವನ್ನು ಸಾಲಾಗಿ ಇಟ್ಟಾಗ ಯಾವ ವಿಗ್ರಹಕ್ಕೆ ಬೆಲೆ ಹೆಚ್ಚು? ಆ ಬೆಲೆಯನ್ನು ಕಟ್ಟೋವನೊಬ್ಬ ಇರ್ತಾನೆ. ಅವನಿಗೆ ಚಿನಿವಾರ ಅಥವಾ ಗೋಲ್ಡ್ ಸ್ಮಿತ್ ಅಕ್ಕಸಾಲಿಗ ಅಂತ ಹೇಳ್ತೀವಿ. ಅವನ ಹತ್ರ ನೀವು ಐದು ವಿಗ್ರಹವನ್ನು ತೆಗೆದುಕೊಂಡು ಹೋಗಲ್ಲ ಅವನ ಮುಂದೆ ಹೀಗೆ ಇಟ್ಟಾಗ ಅವನನ್ನು ಕೇಳೋದು. ಇದನ್ನು ಐದರಲ್ಲಿ ಯಾವುದಕ್ಕೆ ಹೆಚ್ಚು ನೀನು ಬೆಲೆಯನ್ನು ಕೊಡ್ತೀಯಪ್ಪ ನಮಗೆ ಹೆಚ್ಚು ಹಣವನ್ನು ಕೊಡ್ತಾನೆ ಅಂತ ಅಂದ್ರೆ ಯಾವುದಕ್ಕೆ ಕೊಡ್ತಾನೆ ಸ್ವಲ್ಪ ಯೋಚನೆಯನ್ನು ಮಾಡಬೇಕು ನಾವು. ಮೂಲಭೂತವಾಗಿ ಈ ಐದು ವಿಗ್ರಹವೋ 50 ವಿಗ್ರಹವೋ 1000 ವಿಗ್ರಹವೋ ಅಷ್ಟು ಕೂಡ ಆಗಿರತಕ್ಕಂತಹ ಮೂಲ ಪದಾರ್ಥ ಯಾವುದು ಬಂಗಾರ ಗೋಲ್ಡು. ಅದರ ಒಂದು ಕೆಜಿ ತೂಕಕ್ಕೆ ಅವತ್ತಿನ ದಿವಸ ಏನು ಬೆಲೆ ಇದೆಯೋ ಐದಕ್ಕೂ ಕೂಡ ಒಂದೇ ಬೆಲೆಯನ್ನು ಅವನು ಕಟ್ಟಲಿಕ್ಕೆ ಸಾಧ್ಯ. ಒಂದು ಪೈಸೆ ಹೆಚ್ಚು ಇಲ್ಲ, ಒಂದು ಪೈಸೆ ಕಡಿಮೆಯೂ ಕೊಡುವುದಿಲ್ಲ, ಐದು ಜನಕ್ಕೂ ಅಷ್ಟೇ ಕೊಡ್ತಾನೆ. ಇದರ ಅರ್ಥ ಏನು ಅಂತ ಅಂದ್ರೆ ನಮ್ಮ ಹೈಂದವ ಸಂಸ್ಕೃತಿ ಸನಾತನ ಸಂಸ್ಕೃತಿಯಲ್ಲಿ ನಾನಾ ವಿಧವಾದ ರೂಪ ಮತ್ತು ನಾಮಭೇದಗಳಿಂದ ದೇವರುಗಳು ಸಾವಿರಾರು ಇದ್ದರೂ ಕೂಡ ಅದರ ಮೂಲದಲ್ಲಿ ಇರತಕ್ಕಂತಹ ಒಂದು ಚೈತನ್ಯ ಅಂತ ಏನು ಕರೀತೀವಲ್ಲ ಅದು ಒಂದೇ. ಏಕಂ ಸದ್ವಿಪ್ರಾಹ ಬಹುದಾ ವದಂತಿ ಅಂತ ಹೇಳಿ ಶ್ರುತಿ ಪ್ರಮಾಣ ಹೇಳುತ್ತೆ. ಒಂದೇ ಇರತಕ್ಕಂತದ್ದು ಭಗವತ್ ವಸ್ತು, ಭಗವನ್ ವಸ್ತು, ಬ್ರಹ್ಮ ವಸ್ತು ಅದನ್ನ ಯಾವ ಹೆಸರಿಂದ ನೀವು ಕರೆದರೂ ಕೂಡ ಅದು ಹೋಗೊಡುತ್ತೆ. ಆ ಬಂಗಾರಕ್ಕೆ ಹೇಗೆ ಬೆಲೆನೋ ಅದೇ ರೀತಿಯಾಗಿ ನಾಮ ರೂಪಗಳು ಯಾವುದು ಯಾವುದು ಬೇರೆ ಆದಾಗ್ಯೂ ಕೂಡ ಎಲ್ಲಾ ದೇವರು ಯಾರಿಗೆ ಯಾವ ದೇವರಲ್ಲಿ ಭಕ್ತಿ ಶ್ರದ್ಧೆ ವಿಶ್ವಾಸ ಇದೆಯೋ ಆ ದೇವರ ಹೆಸರು ಹೇಳಿದ ತಕ್ಷಣ ಮೈಯೆಲ್ಲ ಒಂದು ನವಿರೆದ್ದು ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಲ್ಲ ಆ ರೀತಿಯಾದಂತಹ ಭಾವನೆ ಯಾವ ದೇವರ ಮೇಲೆ ನಮಗೆ ಭಕ್ತಿ ಭಾವನೆ ಉಂಟಾಗುತ್ತೋ ಆ ದೇವರು ಅವನಿಗೆ ಅತ್ಯಂತ ದೊಡ್ಡದು ಅಂತ ಹೇಳಿ ನಾವು ನಿರ್ಣಯವನ್ನು ಮಾಡಬೇಕು. ಇದು ಬೇರೆಯವರನ್ನು ಹೋಲಿಸಿಕೊಳ್ಳಲಿಕ್ಕೆ ಅಲ್ಲ. ಇನ್ನ ಒಂದು ಉದಾಹರಣೆಯನ್ನು ಕೂಡ ನಾವು ಹೇಳಬಹುದು. ಇದು ಇನ್ನ ಸ್ವಲ್ಪ ನಮ್ಮ ಮನಸ್ಸಿಗೆ ಬಹಳ ಹತ್ತಿರವಾಗಿರತಕ್ಕಂತಹ ಒಂದು ಉದಾಹರಣೆ. ನಮ್ಮೆಲ್ಲರ ತಾಯಿ ಇದ್ದಾರೆ. ನನ್ನ ಜನನಿ, ನಿಮ್ಮ ತಾಯಿ, ನಿಮ್ಮ ತಾಯಿ, ಮತ್ತೊಬ್ಬರ ತಾಯಿ. ನಮ್ಮ ತಾಯಿ ಐದನೇ ಕ್ಲಾಸ್ ಓದು ಫೇಲ್ ಆಗಿರ್ತಕ್ಕಂತವಳೇ ಆಗಿರಬಹುದು ಆಕೆ. ಹೆಚ್ಚು ಓದಿಲ್ಲ ಪಾಪ, ತಿಳುವಳಿಕೆ ಇಲ್ಲ ಅಂತಾನೆ ಇಟ್ಟುಕೊಳ್ಳೋಣ. ಉದಾಹರಣೆಗೆ ಹೇಳ್ತಾ ಇರೋದು. ಎರಡನೆಯದು ನೋಡಲಿಕ್ಕೂ ಏನು ಬೆಳ್ಳಗೆ ತೆಳ್ಳಗೆ ಬಹಳ ಸುಂದರವಾಗೂ ಇರೋಲ್ಲ ನಮ್ಮ ತಾಯಿ ರೂಪವಂತೆ ಅಲ್ಲ ಅಂತಾನೂ ಕೂಡ ಇಟ್ಟುಕೊಳ್ಳೋಣ. ಆದರೆ ಅದೇ ಪಕ್ಕದ ಮನೆಯ ಆಕೆ ಅತ್ಯಂತ ರೂಪವತಿ ಒಂದೆರಡು ಪಿಹೆಚ್ಡಿ ಮಾಡಿರ್ತಾಳೆ ಆಕೆ ನೋಡೋಕ್ಕೂ ಬೆಳ್ಳಗೆ ತೆಳ್ಳಗೆ ಬಹಳ ಚೆನ್ನಾಗಿದ್ದಾರೆ. ನಿಮ್ಮ ತಾಯಿಯ ವಯಸ್ಸೇ ಇರುತ್ತೆ. ಆದರೆ ಅಮ್ಮ ಅಂತ ಹೇಳಿ ಹೋಗಿ ನಾವು ಪ್ರೀತಿ ವಿಶ್ವಾಸದಿಂದ ಯಾರನ್ನು ಮೊರೆ ಹೋಗ್ತೇವೆ, ಯಾರಲ್ಲಿ ಅನ್ನವನ್ನು ಕೇಳ್ತೇವೆ, ಯಾರಲ್ಲಿ ಹೋಗಿ ನಮ್ಮ ಕಷ್ಟ ಸುಖವನ್ನು ಹೇಳಿಕೊಳ್ತೇವೆ. ಯಾರಲ್ಲಿ ಕೂತು ನಾವು ನಗುತ್ತೇವೆ, ಯಾರ ಕಾಲಬಳಿಯಲ್ಲಿ ಕೂತು ನಾವು ಅಳ್ತೇವೆ ಅಂತಂದ್ರೆ ನಮ್ಮ ಹೆತ್ತ ತಾಯಿಯ ಕಾಲಬುಡದಲ್ಲಿ ಮಾತ್ರ. ಇದಕ್ಕೆ ಇಷ್ಟ ದೇವತೆ ಅಂತ ಹೆಸರು. ಪಕ್ಕದ ಮನೆಯಾಕೆ ಬಹಳ ಬುದ್ಧಿವಂತೆ, ಬಹಳ ಹಣವಂತೆ, ಬಹಳ ರೂಪವಂತೆ ಅಂತ ಹೇಳ್ಬಿಟ್ಟು ಆಕೆಯನ್ನು ಹೋಗಿ ನಾವು ಅಮ್ಮ ಅಮ್ಮ ಅಂತ ನಾವು ತಾಯಿಯ ಸಮಾನವಾಗಿಯೇ ನೋಡಬೇಕು. ಅದರಲ್ಲಿ ಯಾವ ಒಂದು ಅನುಮಾನವೂ ಇಲ್ಲ. ಆದರೆ ನಮ್ಮ ತಾಯಿ ಆಕೆ ಆಗಲಿಕ್ಕೆ ಸಾಧ್ಯವಿಲ್ಲ. ಅದೇ ರೀತಿಯಾಗಿ ನಾವು ಔಪಾಸ್ಯ ದೇವತೆ ಅದು ಯಾರೇ ಆಗಿರಬಹುದು ಆಂಜನೇಯ ಆಗಿರಬಹುದು, ಗಣಪತಿ ಆಗಿರಬಹುದು, ಶಿವ ಆಗಿರಬಹುದು, ಅಮ್ಮನವರು ಆಗಿರಬಹುದು, ಭೈರವ ಆಗಿರಬಹುದು, ಮುನೀಶ್ವರನ ಆಗಿರಬಹುದು, ಮಾರಮ್ಮ ಆಗಿರಬಹುದು, ಪ್ಲೇಗಮ್ಮ ಆಗಿರಬಹುದು. ಯಾವುದೇ ದೇವರ ಒಂದು ಸ್ವರೂಪವನ್ನು ನಾವು ತೆಗೆದುಕೊಂಡಾಗ ಅಲ್ಲೇ ನಾವು ಹೇಗೆ ನಾವು ಬದ್ಧವಾಗಿ ನಮ್ಮ ತಾಯಿಯನ್ನು ಮಾತ್ರ ನಮ್ಮ ಹೆತ್ತು ತಾಯಿ ಆಗಲಿಕ್ಕೆ ಸಾಧ್ಯ, ಬೇರೆಯವರು ಯಾರು ನಮ್ಮ ಜನನಿ ಆಗಲಿಕ್ಕೆ ಸಾಧ್ಯವಿಲ್ಲವೋ. ಅದೇ ರೀತಿಯಾಗಿ ನಾವು ಇಷ್ಟ ದೇವತೆ ಅಂತ ಹೇಳಿ ಮಾಡಿಕೊಂಡು ಆ ದೇವರ ಪೂಜೆಯನ್ನು ಪುನಸ್ಕಾರವನ್ನು ಮಾಡಲು ಪ್ರಾರಂಭ ಮಾಡಿದರೆ ಅದೇ ಅತ್ಯಂತ ದೊಡ್ಡದು ಅಂತಕ್ಕಂತದ್ದನ್ನ ನಾವೆಲ್ಲರೂ ಇವತ್ತಿನ ದಿವಸ ತಿಳಿದುಕೊಳ್ಳಬೇಕು ಈ ಘಟ್ಟದಲ್ಲಿ. ಯಾಕಂದ್ರೆ ಹೈಂದವ ಸಂಸ್ಕೃತಿಯಲ್ಲಿ ವಿಪರೀತ ದೇವರುಗಳಿದೆ, ಯಾವ ದೇವರು ಪೂಜೆ ಮಾಡಬೇಕು ಇಷ್ಟೊಂದು ಯಾಕಿದೆ ಅಂತಕ್ಕಂತವರಿಗೆ ಇದು ಕೂಡ ಉತ್ತರ ಕೂಡ ಆಗುತ್ತೆ. ಮತ್ತೊಮ್ಮೆ ಜ್ಞಾಪಕಿಸಿಕೊಳ್ಳಿ. ಚೈತನ್ಯ ಒಂದೇ ಆಗಿದೆ. ಈಗ ಒಂದೇ ಎಲೆಕ್ಟ್ರಿಸಿಟಿ ಅದನ್ನು ಬಲ್ಬಿಗೆ ಕೊಟ್ರೆ ಬೆಳಕು ಬರುತ್ತೆ, ಫ್ಯಾನ್ಗೆ ಕೊಟ್ರೆ ಗಾಳಿ ಬರುತ್ತೆ. ಅಲ್ಲವೇ, ಅದೇ ರೀತಿಯಾಗಿ ಅದನ್ನು ತೆಗೆದುಕೊಂಡು ಹೋಗಿ ಎಸಿ ಕೊಟ್ರೆ ತಣ್ಣಗೆ ಗಾಳಿ ಬರುತ್ತೆ. ಅದೇ ಎಲೆಕ್ಟ್ರಿಸಿಟಿಯನ್ನು ತೆಗೆದುಕೊಂಡು ಹೋಗಿ ವಿದ್ಯುತ್ ಶಕ್ತಿಯನ್ನು ತೆಗೆದುಕೊಂಡು ಹೋಗಿ ಒಂದು ಹೀಟರ್ ಕೊಟ್ರೆ ಅದೇನು ಮಾಡುತ್ತೆ ನೀರನ್ನು ಕಾಯಿಸಿಕೊಡುತ್ತೆ. ಒಂದೇ ಚೈತನ್ಯ ಇದೆಯಲ್ಲ, ಈ ಕೆಳಗಿರತಕ್ಕಂತದ್ದು ಎಲ್ಲಾದಕ್ಕೂ ಅಂಡರ್ಲೈಯಿಂಗ್ ಪ್ರಿನ್ಸಿಪಲ್ ಅಂತ ಏನು ನಾವು ಆಂಗ್ಲ ಭಾಷೆಯಲ್ಲಿ ಹೇಳ್ತಿವಲ್ಲ, ಅದು ಯಾವ ರೀತಿಯಾಗಿ ವಿದ್ಯುತ್ ಶಕ್ತಿ ಇದೆಯೋ, ಅದು ಇರತಕ್ಕಂತದ್ದು ಒಂದೇ ಚೈತನ್ಯ, ಒಂದೇ ಪರಬ್ರಹ್ಮ ವಸ್ತು, ಒಂದೇ ದೇವರು. ಅದನ್ನು ನಾವು ಅನುಸಂಧಾನ ಮಾಡಬೇಕಾದರೆ ನನಗೆ ಲೈಟ್ ಬೇಕು ಅಂತ ಹೇಳಿ ಫ್ಯಾನ್ ಆನ್ ಮಾಡಿದ್ರೆ ನಾನು. ಫ್ಯಾನ್ ಸ್ವಿಚ್ ಹಾಕಿದ್ರೆ ಏನ್ ಮಾಡುತ್ತೆ ಗಾಳಿ ಬರುತ್ತೆ ಅದನ್ನ ವಾಯುದೇವ ಅಂದ್ರು. ಅದೇ ವಿದ್ಯುತ್ ಶಕ್ತಿಯನ್ನು ತೆಗೆದುಕೊಂಡು ಹೋಗಿ ನನಗೆ ಬೆಳಕು ಬೇಕು ಅಂತ ಅಂದಾಗ ಆ ಒಂದು ವಿದ್ಯುತ್ ಶಕ್ತಿಗೆ ಸಂಬಂಧಪಟ್ಟಿರತಕ್ಕಂತಹ ಬಲ್ಬಿಗೆ ಯಾವುದು ಹೋಗಿ ಸೇರಿಕೊಂಡಿದೆಯೋ ಕನೆಕ್ಟ್ ಆಗಿದೆಯೋ. ಆ ಒಂದು ಸ್ವಿಚ್ ಅನ್ನು ನಾನು ಅಮುಕಿದಾಗ ಏನಾಗುತ್ತೆ ಬೆಳಕು ಬರುತ್ತೆ. ಇದನ್ನು ಸೂರ್ಯ ಅಂದರು ನಮ್ಮವರು. ಅದನ್ನೇ ತೆಗೆದುಕೊಂಡು ಹೋಗಿ ಒಂದು ಹೀಟರ್ಗೆ ಹಾಕಿದಾಗ ಅಲ್ಲಿ ಶಾಖ ಬಂತು, ಬೆಳಕು ಬಂತು ಜೋರಾಗಿ. ಆ ಶಾಖಕ್ಕೆ ಅಗ್ನಿ ಅಂತ ಕರೆದರು. ಇದೇ ರೀತಿಯಾಗಿ ಕಂಪ್ಯೂಟರ್ ಕೊಟ್ಟಾಗ ಕಂಪ್ಯೂಟರ್ ಅಲ್ಲಿ ಏನ್ ಮಾಡುತ್ತೆ ನೀವು ಬ್ರೌಸ್ ಮಾಡಿದಕ್ಕೆಲ್ಲಾ ನಿಮಗೆ ಅಂತರ್ಜಾಲ ಇಂಟರ್ನೆಟ್ ನಿಮಗೆ ಕೊಡುತ್ತೆ. ಅಲ್ಲೇನಾಯ್ತು ನಿಮಗೆ ಬೇಕಾಗಿರತಕ್ಕಂತಹ ಚಾಟ್ ಜಿಪಿಟಿ ಲಿ ವಿಚಾರ ಬಂತು. ಇದನ್ನ ಸರಸ್ವತಿ ಅಂತ ಕರೆದರು. ಆದರೆ ಇಷ್ಟು ಓಡ್ತಾ ಇರ್ತಕ್ಕಂತಹದ್ದು ಯಾವ ಶಕ್ತಿಯ ಮೇಲೆ ಆ ಬ್ಯಾಟರಿಯಲ್ಲಿ ಇರತಕ್ಕಂತಹ ಎಸಿ ಡಿಸಿ ಯಾವುದು ಬೇಕಾದರೂ ಆಗಿರಬಹುದು ಎಲೆಕ್ಟ್ರಿಸಿಟಿ ವಿದ್ಯುತ್ ಶಕ್ತಿಯಿಂದ ಓಡ್ತಾ ಇದೆಯೋ ಅದೇ ರೀತಿಯಾಗಿ ಇರತಕ್ಕಂತಹದ್ದು ಒಂದೇ ಭಗವಂತ ಒಂದೇ ದೇವರು ನಾಮ ರೂಪಗಳು ಭೇದ ಯಾವಾಗ ಯಾವ ರೀತಿ ಅಂತಂದ್ರೆ ಈ ರೀತಿಯಾಗಿ ನಾನಾ ವಿಧವಾಗಿರತಕ್ಕಂತಹ ಒಂದು ಐಚ್ಛಿಕವಾದ ಉಪಾಸನೆ ಅಥವಾ ಕಾಮ್ಯೋಪಾಸನೆ ಅಂತ ಹೇಳ್ತಾರೆ ಅದನ್ನು ಮಾಡುವುದರಿಂದ ಆ ದೇವರುಗಳ ನಾಮ ಮತ್ತು ರೂಪ ಬದಲಾಗ್ತಾ ಇದೆ ಬಿಟ್ಟರೆ. ವೇದಾಂತದಲ್ಲಿ ಆಗಿರಬಹುದು, ತಂತ್ರಶಾಸ್ತ್ರದಲ್ಲಿ ಆಗಿರಬಹುದು, ಪುರಾಣದಲ್ಲಿ ಆಗಿರಬಹುದು, ವೇದದಲ್ಲಿ ಆಗಿರಬಹುದು, ಆಗಮದಲ್ಲಿ ಆಗಿರಬಹುದು, ಸಂಹಿತೆಗಳಲ್ಲಿ ಆಗಿರಬಹುದು ಎಲ್ಲದರಲ್ಲೂ ಏಕಕಂಠವಾಗಿ ಜೋರಾಗಿ ಹೇಳ್ತಾ ಇರ ಘಂಟಾಘೋಷವಾಗಿ ಹೇಳ್ತಾ ಇರತಕ್ಕಂತದ್ದು ಏನು ಅಂತಂದ್ರೆ ಏಕಂ ಸದ್ವಿಪ್ರಾಹ ಬಹುದಾ ವದಂತಿ. ಒಂದನ್ನೇ ನಾವು ನಾನಾ ರೂಪದಿಂದಲೂ, ನಾನಾ ಭೇದಗಳಿಂದಲೂ, ನಾನಾ ನಾಮಗಳಿಂದಲೂ ಕರೆದುಕೊಳ್ಳುತ್ತಾ ಇದ್ದೇವೆ ಅಂತ ಹೇಳಿ. ಆದ್ದರಿಂದ ಎಲ್ಲಾ ದೇವರುಗಳು ಕೂಡ ಸಮಾನರೇ. ವಿಷ್ಣು ದೊಡ್ಡವನು, ಶಿವ ಚಿಕ್ಕವನು ಇಲ್ಲ. ಎಲ್ಲೂ ವೇದದಲ್ಲಿ ಆಧಾರ ಇಲ್ಲ. ನಿಮ್ಮ ಇಷ್ಟ ದೇವತೆ ವಿಷ್ಣು ದೊಡ್ಡವನು, ಬಹಳ ಸಂತೋಷ. ಆದರೆ ಶಿವನನ್ನು ನಾವು ಬೈಯೋ ಅವಶ್ಯಕತೆ ಇಲ್ಲ. ನಿಮಗೆ ಶಿವ ದೊಡ್ಡವನು ಬಹಳ ಸಂತೋಷ ಆದರೆ ವಿಷ್ಣುವನ್ನು ಬೈಯೋ ಅವಶ್ಯಕತೆ ಇಲ್ಲ. ನೀವು ಅಮ್ಮನವರು ಪೂಜೆ ಮಾಡತಕ್ಕಂತವರು, ಅಮ್ಮನವರು ದೊಡ್ಡವಳು ಹೌದು, ಸರ್ವಮಂಗಳೇ ಬಹಳ ದೊಡ್ಡವಳು ಆದರೆ ಗಣಪತಿಯನ್ನು ಬಯ್ಯುವ ಅಥವಾ ತೆಗಳುವ ಅದನ್ನು ನೀಚವಾಗಿ ಕಾಣತಕ್ಕಂತಹ ಅವಶ್ಯಕತೆ ನಮಗಿಲ್ಲ. ಇದು ಯಾರಿಗೆ ಸಾಧ್ಯ ಆಗುತ್ತೆ ಅಂತಂದ್ರೆ ಯಾರು ನಿಜವಾದ ತತ್ವಜ್ಞಾನಿಯಾಗಿರುತ್ತಾನೋ, ಯಾರು ಇದರ ಆಳವನ್ನು ನೋಡಿರ್ತಾನೋ ಅವನಿಗೆ ಮಾತ್ರ ಅರ್ಥ ಆಗುತ್ತೆ. ಆದ್ದರಿಂದ. ದೇವತಾ ಪೂಜೆಯಲ್ಲಿ ಅಥವಾ ನಮ್ಮ ಸನಾತನ ಸಂಸ್ಕೃತಿಯಲ್ಲಿ ಉಚ್ಚ ನೀಚಗಳು ಇಲ್ಲ. ಎಲ್ಲವನ್ನು ಒಂದೇ ರೀತಿಯಲ್ಲಿ ನೋಡಬೇಕಾಗಿರತಕ್ಕಂತದ್ದು ನಮ್ಮೆಲ್ಲರ ಆದ್ಯ ಕರ್ತವ್ಯ ಆಗಿದೆ. ಆದ್ದರಿಂದ ಎಲ್ಲ ದೇವರನ್ನು ನಾವು ಒಂದೇ ರೀತಿಯಾಗಿ ಕಾಣೋಣ. ಯಾರು ದೊಡ್ಡವರು ಚಿಕ್ಕವರು ಅಂತಕ್ಕಂತದ್ದು ಇಲ್ಲ. ಎಲ್ಲರಿಗೂ ಶುಭ.